ಇಸ್ಲಮಾಬಾದ್: ಪಾಕಿಸ್ಥಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿರುದ್ಧ ವಿಪಕ್ಷಗಳು ಸಲ್ಲಿಸಿದ ಅವಿಶ್ವಾಸ ನಿರ್ಣಯ ಇಂದು ಮಂಡನೆಯಾಗಲಿದೆ. ಹೀಗಾಗಿ ಪಾಕಿಸ್ಥಾನದಲ್ಲಿ ಇಮ್ರಾನ್ ಖಾನ್ ಸರ್ಕಾರ ಉಳಿಯುತ್ತಾ ಅಥವಾ ಉರುಳುತ್ತಾ ಎಂಬ ಹಲವು ದಿನಗಳ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.
ಪಾಕಿಸ್ತಾನದ ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದ ಸುಮಾರು ಒಂದು ತಿಂಗಳ ನಂತರ ಇಂದು ನಿರ್ಣಾಯಕ ಮತದಾನ ನಡೆಯಲಿದೆ. ಇಮ್ರಾನ್ ಖಾನ್ ಅವರ ಸರ್ಕಾರವು ರಾಷ್ಟ್ರದ ಆಡಳಿತವನ್ನು ಮುಂದುವರೆಸುತ್ತದೆಯೇ ಅಥವಾ ಅವರು ತಮ್ಮ ಕುರ್ಚಿಗೆ ವಿದಾಯ ಹೇಳಬೇಕೇ ಎಂಬುದನ್ನು ಅಸೆಂಬ್ಲಿಯಲ್ಲಿನ ಮತದಾನವು ನಿರ್ಧರಿಸುತ್ತದೆ.
ಇಮ್ರಾನ್ ಖಾನ್ ಅವರನ್ನು ಕೆಳಗಿಳಿಸುವ ಪ್ರತಿಪಕ್ಷಗಳ ಪ್ರಯತ್ನವನ್ನು ವಿಫಲಗೊಳಿಸಲು 342 ರ ಸಂಖ್ಯಾಬಲದ ಅಸೆಂಬ್ಲಿಯಲ್ಲಿ 172 ಮತಗಳ ಅಗತ್ಯವಿದೆ. ಇಮ್ರಾನ್ ಖಾನ್ ಅವರ ಪ್ರಮುಖ ಮಿತ್ರ ಪಕ್ಷಗಳು ಅವರನ್ನು ತೊರೆದಿರುವುದರಿಂದ ಇಮ್ರಾನ್ ಖಾನ್ ಸರ್ಕಾರ ಉರುಳುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ:ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಮಹಿಳೆಯರಿಗೆ ಬೆದರಿಕೆ..! ಆರೋಪಿ ಬಂಧನ
ಮಾರ್ಚ್ 8ರಂದು ರಾಷ್ಟ್ರದ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರ ಹೆಚ್ಚಳಕ್ಕೆ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವೇ ಕಾರಣ ಎಂದು ಆರೋಪಿಸಿ, ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಸೆಕ್ರೆಟರಿಯೇಟ್ ಗೆ ಮಾರ್ಚ್ 8ರಂದು ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದ್ದವು.
ಮಾರ್ಚ್ 25ರಂದು ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ನಿರ್ಣಾಯಕ ಅಧಿವೇಶನವು ಪ್ರತಿಪಕ್ಷದ ಶಾಸಕರ ಗದ್ದಲದ ಪ್ರತಿಭಟನೆಯ ನಡುವೆ ನಿರ್ಣಯವನ್ನು ಮಂಡಿಸದೆ ಮುಂದೂಡಲ್ಪಟ್ಟಿತು.