Advertisement

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

01:16 AM Nov 29, 2021 | Team Udayavani |

ಹೊಸದಿಲ್ಲಿ: ಮಧುಮೇಹ ಸಮಸ್ಯೆಯು ದುಬಾರಿ ಕಾಯಿಲೆಯಾಗಿ ಪರಿಣಮಿಸಿದೆ. ಹಾಗಾಗಿ, ಕೇಂದ್ರ ಸರಕಾರಗಳು ಮಧುಮೇಹ ಔಷಧಗಳಿಗೆ ಸಬ್ಸಿಡಿ ನೀಡುವಂಥ ಸಹಾಯಗಳನ್ನು ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅಭಿಪ್ರಾಯಪಟ್ಟಿದ್ದಾರೆ.

Advertisement

ದಿಲ್ಲಿಯ ಕಾರ್ಯಕ್ರಮವೊಂದ ರಲ್ಲಿ ಮಾತನಾಡಿದ ಅವರು, “”ಮಧುಮೇಹ ಜೀವನಪರ್ಯಂತ ಇರುವ ಕಾಯಿಲೆ. ಇದು ದುಬಾರಿಯೂ ಹೌದು. ಬಡವರ ಜೇಬಿಗೆ ಕತ್ತರಿ ಹಾಕುವಂಥದ್ದು. ಹಾಗಾಗಿ, ಮಧುಮೇಹ ಔಷಧಗಳ ಬೆಲೆ ಇಳಿಕೆ ಕುರಿತಾಗಿ ಸರಕಾರ ಗಮನ ಹರಿಸಬೇಕು” ಎಂದಿದ್ದಾರೆ.

ಇದನ್ನೂ ಓದಿ:ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

“ಭಾರತದಲ್ಲಿರುವ ಮಧುಮೇಹಿಗಳ ಮೇಲೆಯೇ ಪ್ರತ್ಯೇಕವಾಗಿ ಅಧ್ಯಯನಗಳಾಗಬೇಕು” ಎಂದು ಆಶಿಸಿರುವ ಅವರು, “ಇಲ್ಲಿನ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ರೂಪುಗೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ಆಯ್ದ ಆರೋಗ್ಯ ಸಿಬಂದಿಗೆ ಸರಕಾರ, ಪ್ರತ್ಯೇಕ ತರಬೇತಿ ಹಾಗೂ ವೃತ್ತಿಪರತೆಯನ್ನು ಕಟ್ಟಿಕೊಡಬೇಕು” ಎಂದು ಆಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next