Advertisement
ಇಲ್ಲಿ ನಿಯೋಜಿಸಲ್ಪಡುವ ಮಹಿಳಾ ಕಮಾಂಡೋಗಳಿಗೆ ಈಗಾಗಲೇ ಸಿಆರ್‌ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ) ವಿಶೇಷ ತರಬೇತಿಯನ್ನು ನೀಡಿದೆ. ಈ ತಂಡಕ್ಕೆ “ಸೂಪರ್-500′ ಎಂದು ನಾಮಕರಣ ಮಾಡಲಾಗಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಕಲ್ಲು ತೂರಾಟದ ಮೂಲಕ ಭದ್ರತಾಪಡೆ ಗಳಿಗೆ ಅಡ್ಡಿ ಉಂಟುಮಾಡುವವರನ್ನು ಎದುರಿಸುವುದೇ ಸೇನೆಗೆ ದೊಡ್ಡ ತಲೆನೋವಾಗಿದೆ. ಇಂಥ ಸಮಯದಲ್ಲಿ ಮಹಿಳಾ ಕಮಾಂಡೋಗಳಿರುವ “ಕ್ರ್ಯಾಕ್ ಟೀಮ್’ ಕಾರ್ಯನಿರ್ವಹಿಸಲಿದೆ.
ಸಿಆರ್‌ಪಿಎಫ್ನ ಈ ಕಮಾಂಡೋಗಳಿಗೆ ಕಠಿಣವಾದ ವಿಶೇಷ ತರಬೇತಿ ನೀಡಲಾಗಿದೆ. ರಾತ್ರಿ ಹೊತ್ತಲ್ಲೂ ಕಾರ್ಯನಿರ್ವಹಿಸಲು ಅನುಕೂಲವಾಗು ವಂತೆ ಕಣ್ಣಿಗೆ ಪಟ್ಟಿ ಕಟ್ಟಿ ಕಾರ್ಯಾಚರಿಸಲು ಕಲಿಸಲಾಗಿದೆ. ಜತೆಗೆ, ಶಸ್ತ್ರಾಸ್ತ್ರಗಳಲ್ಲಿ ದೋಷ ಕಂಡುಬಂದರೆ, ಕೇವಲ ಒಂದೇ ನಿಮಿಷದಲ್ಲಿ ಅದನ್ನು ರಿಪೇರಿ ಮಾಡುವಂಥ ಕೌಶಲ್ಯವನ್ನೂ ಹೇಳಿಕೊಡಲಾ ಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.