Advertisement

ಲಾದನ್‌ ಪುತ್ರಗೆ ಉಗ್ರ ನೇತೃತ್ವ

10:56 AM Sep 20, 2017 | Team Udayavani |

ಪ್ಯಾರಿಸ್‌: ವಿಶ್ವದ ನಂ.1 ಉಗ್ರನೆಂದೇ ಕುಖ್ಯಾತಿ ಗಳಿಸಿದ್ದ ಉಸಾಮ ಬಿನ್‌ ಲಾದನ್‌ನಿಂದ ತೆರವಾಗಿರುವ ಉಗ್ರ ಸಂಘಟನೆ ಅಲ್‌ಕಾಯಿದಾದ ಉತ್ತರಾಧಿಕಾರಿ ಸ್ಥಾನವನ್ನು ಆತನ ಪುತ್ರನೇ ತುಂಬಲಿದ್ದಾನೆಯೇ ಎಂಬ ಶಂಕೆಯೊಂದು ಮೂಡಿದೆ. 9/11ರ ದಾಳಿಗೆ 16 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಲ್‌ಕಾಯಿದಾ ಇತ್ತೀಚೆಗೆ ಒಂದು ಫೋಟೋ ಸಂಯೋಜನೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅಮೆರಿಕದ ಅವಳಿ ಕಟ್ಟಡಗಳು ಹೊತ್ತಿ ಉರಿಯುತ್ತಿರುವ ಫೋಟೋ ಇದ್ದು, ಅದರ ಬೆಂಕಿಯಲ್ಲಿ ಉಸಾಮ ಬಿನ್‌ ಲಾದನ್‌ ನಗುತ್ತಿರುವ ಫೋಟೋವನ್ನು ಸೇರಿಸಲಾಗಿದೆ. ಲಾಡೆನ್‌ನ ಪಕ್ಕದಲ್ಲೇ ಅವನ ಪುತ್ರ ಹಮಾl ಕೂಡ ಇದ್ದಾನೆ. ಈ ಮೂಲಕ ಅಲ್‌ಕಾಯಿದಾವು ಹಮಾlನನ್ನು “ಜೆಹಾದ್‌ನ ದೊರೆ’ ಎಂದು ಬಿಂಬಿಸಲು ಹೊರಟಿದೆ ಎಂದು ಫ್ರಾನ್ಸ್‌ನ ಮಾಧ್ಯಮಗಳು ವರದಿ ಮಾಡಿವೆ.

Advertisement

ಹಮಾl ಈಗ 28ರ ಯುವಕ. ಉಸಾಮ ಸತ್ತಾಗಿನಿಂದಲೂ ಈತನ ಹೆಸರು ಚಾಲ್ತಿಯಲ್ಲಿತ್ತು. ಇದೀಗ ಮತ್ತೂಂದು ಉಗ್ರ ಸಂಘಟನೆಯಾದ ಐಸಿಸ್‌ನ ಪ್ರಭಾವ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ಲಾಭ ಪಡೆದು ವಿಶ್ವಾದ್ಯಂತ ಎಲ್ಲ ಜೆಹಾದಿಗಳನ್ನೂ ಈ ಯುವಕನ ನೇತೃತ್ವದಲ್ಲಿ ಒಗ್ಗೂಡಿಸುವುದು ಅಲ್‌ಕಾಯಿದಾದ ಚಿಂತನೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಲಾದನ್‌ನ 20 ಮಕ್ಕಳ ಪೈಕಿ ಹಮಾl 15ನೆಯವ. ಈತನಿಗೆ ಬಾಲ್ಯದಿಂದಲೇ ಜೆಹಾದಿಯಾಗಲು ಎಲ್ಲ ತರಬೇತಿಗಳನ್ನು ನೀಡಲಾಗಿದೆ. ಶಸ್ತ್ರಾಸ್ತ್ರಗಳ ನಿರ್ವಹಣೆಯನ್ನೂ ಕಲಿಸಲಾಗಿದೆ. ಆದರೆ, ಈಗ ಆತ ಎಲ್ಲಿದ್ದಾನೆ ಎಂಬುದು ಗೊತ್ತಿಲ್ಲ. ಆದರೆ, ಅವನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಈಗಾಗಲೇ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next