Advertisement
ಕುಕ್ಕೆ ಕ್ಷೇತ್ರಕ್ಕೆ ಬೆಳಗ್ಗಿನಿಂದಲೇ ಅಪಾರ ಸಂಖ್ಯೆಯ ಭಕ್ತರ ಆಗಮನವಾಗಿದೆ. ರಥಬೀದಿ ಹಾಗೂ ಹೊರಾಂಗಣದಲ್ಲಿ ಹೆಚ್ಚಿನ ಭಕ್ತರ ಸಂಖ್ಯೆ ಕಂಡುಬಂದಿದೆ. ಶನಿವಾರ ಸಂಜೆ ವೇಳೆ ಮತ್ತಷ್ಟು ಹೆಚ್ಚಿನ ಭಕ್ತ ಸಂದಣಿ ಕಂಡುಬಂತು. ಪೇಟೆಯಲ್ಲೂ ವಾಹನ, ಭಕ್ತರ ಓಡಾಟವೂ ಹೆಚ್ಚಾಗಿತ್ತು.
ಬೆಳ್ತಂಗಡಿ: ನಾಡಿನ ಪವಿತ್ರ ಚತುರ್ದಾನ ಶ್ರೇಷ್ಠ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡು ಬಂದರು. ಬೇಸಗೆ ರಜೆಯಾದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ರವಿವಾರ ಹಾಗೂ ಸೋಮವಾರವೂ ಭಕ್ತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಕೊಲ್ಲೂರು ದೇವಸ್ಥಾನ
ಕಳೆದ ಎರಡು ದಿನಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀದೇವಿಯ ದರ್ಶನ ಪಡೆದರು. ಶುಕ್ರವಾರ 10 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದರೆ, ಶನಿವಾರ ಸುಮಾರು 6 ಸಾವಿರ ಮಂದಿ ಆಗಮಿಸಿದ್ದರು.
Related Articles
Advertisement