Advertisement

ನಿಡಶೇಸಿ ಕೆರೆಗೆ ಅಪರೂಪದ ಅತಿಥಿ

03:44 PM Feb 03, 2020 | Suhan S |

ಕುಷ್ಟಗಿ: ತಾಲೂಕಿನ ನಿಡಶೇಸಿ ಕೆರೆಗೆ ಕ್ರೌಂಚ್‌ ಪಕ್ಷಿಗಳ ಆಗಮನವಾಗಿದ್ದು, ಕೆರೆಯ ದಡದಲ್ಲಿ ಈ ಪಕ್ಷಿಗಳು ವಿಹರಿಸುತ್ತಿರುವುದು ಪಕ್ಷಿಪ್ರಿಯರ ಆನಂದವನ್ನು ಇಮ್ಮಡಿಸಿದೆ.

Advertisement

ನಿಡಶೇಸಿ ಕೆರೆಯಲ್ಲಿ ಈಚೆಗೆ ಪಟ್ಟೆ ತಲೆ ಹೆಬ್ಟಾತುಗಳು ಕಾಣಿಸಿಕೊಂಡ ಬೆನ್ನಲ್ಲೆ ಇದೀಗ ಕ್ರೌಂಚ್‌ ಪಕ್ಷಿಗಳ ಆಗಮನವಾಗಿದೆ. ಈ ಹಕ್ಕಿಗಳು ಕಳೆದ ಐದಾರು ವರ್ಷಗಳಿಂದ ಇಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ 20ಕ್ಕೂ ಹೆಚ್ಚು ಹಕ್ಕಿಗಳು ವಲಸೆ ಬಂದಿರುವುದನ್ನು ಪಕ್ಷಿ ಛಾಯಾಗ್ರಾಹಕ ಪಾಂಡುರಂಗ ಆಶ್ರೀತ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಮುಂಗೋಲಿಯಾ, ಚೀನಾ, ಮಧ್ಯ ಯುರೋಪ ಭಾಗದಿಂದ ಈ ಹಕ್ಕಿಗಳು ವಲಸೆ ಬಂದಿವೆ.

ಇಂಗ್ಲಿಷ್‌ನಲ್ಲಿ ಡೆಮೊಯ್ಸೆಲ್ಸಿ ಕ್ರೇನ್‌ ಎಂದು ಕರೆಯಲಾಗುವ ಕ್ರೌಂಚ್‌ ಪಕ್ಷಿಗಳು ಕೊಕ್ಕರೆ ಜಾತಿಗೆ ಸೇರಿವೆ. ಇದು ಇತರೆ ಕೊಕ್ಕರೆ ಪಕ್ಷಿಗಳಿಗಿಂತ ವಿಭಿನ್ನವಾಗಿದೆ. ಸೂಕ್ಷ್ಮ ಸಂವೇದನೆಯ ಈ ಹಕ್ಕಿಗಳು ಗುಂಪು, ಗುಂಪಾಗಿ ಕಂಡು ಬರುತ್ತವೆ. ಸಂತಾನಾಭಿವೃದ್ಧಿಗೆ ಇಲ್ಲಿಗೆ ಬರುತ್ತಿವೆ. ಕುತ್ತಿಗೆ, ಕೊಕ್ಕು ಬೂದು ಬಣ್ಣದ ಉದ್ದನೆಯ ಕಾಲು, ಬಿಳಿ ಛಾಯೆಯ ಕಂದು ಬಣ್ಣ, ಕಣ್ಣಿನಿಂದ ಆರಂಭವಾಗಿ ಕುತ್ತಿಗೆಯ ಬುಡದವರೆಗೂ ಕಾಣಬಹುದಾಗಿದೆ. ಈ ಹಕ್ಕಿ ಗುರುತಿಸುವುದು ಸುಲಭ ರೆಕ್ಕೆ ಬಡಿಯುತ್ತ ಹಾರುವುದು, ಕಚ್ಚಾಟ, ನರ್ತನ ಪಕ್ಷಿ ಪ್ರಿಯರಿಗೆ ಗಮನಾರ್ಹವೆನಿಸಿವೆ. ನಿಡಶೇಸಿ ಕೆರೆ ಹಲವು ಪ್ರಭೇದದ ಪಕ್ಷಿಗಳು ವಲಸೆ ಬರುತ್ತಿದ್ದು, ಅರಣ್ಯ ಇಲಾಖೆ ಈ ಪಕ್ಷಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ. ಪಕ್ಷಿಗಳ ಸ್ವತ್ಛಂದ ವಿಹಾರಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವ ಅಗತ್ಯವಾಗಿದೆ ಎನ್ನುತ್ತಾರೆ ಪಕ್ಷಿಪ್ರಿಯರು.

ಅಪರೂಪವಾಗಿರುವ ಕ್ರೌಂಚ್‌ ಪಕ್ಷಿಗಳು ನಿಡಶೇಸಿ ಕೆರೆಗೆ ಬಂದಿರುವುದು ಸಂತಸವಾಗಿದೆ. ಒಂದೇ ದಿನ 20ಕ್ಕೂ ಅಧಿಕ ಹಕ್ಕಿಗಳು ಬಂದಿರುವುದು ಗಮನಾರ್ಹವೆನಿಸಿದ್ದು, ದಿನದಿಂದ ದಿನಕ್ಕೆ ನಿಡಶೇಸಿ ಕೆರೆ ವಿವಿಧ ಪಕ್ಷಿಗಳಿಂದ ಸೌಂದರ್ಯ ಹೆಚ್ಚಿಸಿದೆ. ಈ ಕೆರೆಗೆ ಯಾವ್ಯಾವ ಪಕ್ಷಿಗಳು ಬಂದು ಹೋಗಿವೆ ಎನ್ನುವ ಕುರಿತು ಛಾಯಾಚಿತ್ರ ಸಮೇತ ವಿವರ ದಾಖಲಾಗಬೇಕಿದೆ. ಪಾಂಡುರಂಗ ಆಶ್ರೀತ, ವನ್ಯಜೀವಿ ಛಾಯಾಗ್ರಾಹಕ

 

Advertisement

-ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next