Advertisement
2023ರ ಎಪ್ರಿಲ್‌ನಲ್ಲಿ ಡೆಬಿಟ್ ಕಾರ್ಡ್‌ಗಳಿಗಿಂತ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚಾಗಿದೆ. 2022ರ ಎಪ್ರಿಲ್‌ನಲ್ಲಿ 22 ಕೋಟಿ ವಹಿವಾಟು ನಡೆದಿದ್ದವು. 2023ರ ಎಪ್ರಿಲ್‌ನಲ್ಲಿ 25 ಕೋಟಿ ವಹಿವಾಟುಗಳು ನಡೆದಿದೆ. ಶಾಪಿಂಗ್, ಪ್ರಯಾಣ, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ವೇಳೆ ಗ್ರಾಹಕರು ಹೆಚ್ಚಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.
ಮಾರುಕಟ್ಟೆ ಪಾಲುದಾರಿಕೆಯಲ್ಲಿ 2023ರ ಎಪ್ರಿಲ್‌ನಲ್ಲಿ ಆಕ್ಸಿಸ್ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಕೆದಾರರು ಹೆಚ್ಚಾಗಿದ್ದಾರೆ. ಆಕ್ಸಿಸ್ ಬ್ಯಾಂಕ್ ಸಿಟಿ ಬ್ಯಾಂಕ್ ಅನ್ನು ಸ್ವಾಧೀನಕ್ಕೆ ಪಡೆದುಕೊಂಡ ಅನಂತರ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಕೆದಾರರು ಹೆಚ್ಚಾಗಿದ್ದಾರೆ. ಈಗಾಗಲೇ ಬಳಕೆಯಲ್ಲಿರುವ ಕ್ರೆಡಿಟ್ ಕಾರ್ಡ್‌ಗಳ ಪೈಕಿ ಎಚ್‌ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಹಾಗೂ ಆಕ್ಸಿಸ್ ಬ್ಯಾಂಕ್ ಶೇ.71ರಷ್ಟು ಪಾಲನ್ನು ಹೊಂದಿದೆ. ಎಪ್ರಿಲ್ ಕಾರ್ಡ್‌ಗಳ ಮೂಲಕ ನಡೆಸಿದ ಪ್ರತಿಯೊಂದೂ ವಹಿವಾಟಿನಲ್ಲಿ ನಡೆಸಲಾದ ವ್ಯವಹಾರದ ಸರಾಸರಿ ಮೊತ್ತ 5,120ರೂ. ಗಳಾಗಿತ್ತು. ಡೆಬಿಟ್ ಕಾರ್ಡ್ ಸಂಖ್ಯೆಹೆಚ್ಚಳ: ವ್ಯವಹಾರ ಕುಸಿತ
Related Articles
Advertisement