Advertisement

ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ

10:05 PM Jul 15, 2021 | Team Udayavani |

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಯೋಜನೆಗೆ ಗುರುವಾರ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದ್ದು, ಈ ಬಾರಿ ಸ್ವತಃ ರೈತರು ತಮ್ಮ ಅಥವಾ ನೆರೆಯ ಖಾಸಗಿ ವ್ಯಕ್ತಿಗಳ ಮೊಬೈಲ್‌ಗ‌ಳಲ್ಲಿ ಜಮೀನುಗಳ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.

Advertisement

ಈ ಮೊದಲು ಕೃಷಿ ಇಲಾಖೆಯಿಂದ ಮೊಬೈಲ್‌ ಆ್ಯಪ್‌ ಮೂಲಕ ರೈತರ ಬೆಳೆ ಸಮೀಕ್ಷೆ ನಡೆಸಲಾಗುತ್ತಿತ್ತು. ರ್‍ಯಾಂಡಂ ಆಗಿ ಮಾದರಿಗಳನ್ನು ಸಂಗ್ರಹಿಸಿ ಸಮೀಕ್ಷೆ ಮಾಡಲಾಗುತ್ತಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಸ್ವತಃ ರೈತರು ಅಥವಾ ಖಾಸಗಿ ವ್ಯಕ್ತಿಗಳ ಸಹಕಾರದೊಂದಿಗೆ ಸಮೀಕ್ಷೆ ನಡೆಸಿ ಬೆಳೆಗಳ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಬೆಳೆ ವಿಮೆ ಮತ್ತಿತರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲ ಆಗಲಿದೆ.

ಕಳೆದ ವರ್ಷ ಆಗಸ್ಟ್‌ 7ರಿಂದಲೇ ಯೋಜನೆ ಜಾರಿಗೆ ಬಂದಿದೆ. ಅದರಂತೆ ರೈತರೇ ಸಮೀಕ್ಷೆ ನಡೆಸಲು ಅವಕಾಶ ಇತ್ತು. ಆದರೆ, ಕೆಲ ರೈತರ ಬಳಿ ಆ್ಯಂಡ್ರಾಯ್ಡ ಫೋನ್‌ ಇರಲಿಲ್ಲ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಯೋಜನೆ ಯಶಸ್ವಿ ಆಗಿರಲಿಲ್ಲ. ಆದ್ದರಿಂದ ಈ ಸಲ ಖಾಸಗಿ ವ್ಯಕ್ತಿ ಅಥವಾ ಪಕ್ಕದ ಜಮೀನಿನ ರೈತರ ಮೊಬೈಲ್‌ಗ‌ಳಿಂದಲೂ ಸಮೀಕ್ಷೆ ನಡೆಸಿ, ಅಪ್‌ಲೋಡ್‌ ಮಾಡಬಹುದಾಗಿದೆ.

ಸಮೀಕ್ಷೆ ಯೋಜನೆಗೆ ಸರ್ಕಾರ 48 ಕೋಟಿ ರೂ. ಮೀಸಲಿಟ್ಟಿದ್ದು, ಸಂಪುಟದಲ್ಲಿ ಇದಕ್ಕೆ ಅನುಮೋದನೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next