Advertisement

ಬೆಳೆ ಸಮೀಕ್ಷೆ ಕೈಗೊಳ್ಳದಿದ್ದರೆ ಕಾನೂನು ಕ್ರಮ: ಡೀಸಿ

12:11 PM Sep 15, 2020 | Suhan S |

ದೇವನಹಳ್ಳಿ: ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯಪ್ರಗತಿಯಲ್ಲಿದ್ದು ಜಿಲ್ಲೆಯ ರೈತರು, ಬೆಳೆ ಸಮೀಕ್ಷೆ ಆ್ಯಪ್‌ ಬಳಸುವ ಮೂಲಕ ಜಮೀನಿನ ಸರ್ವೇ ನಂ ಮತ್ತು ಬೆಳೆ ವಿವರ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ತಿಳಿಸಿದರು.

Advertisement

ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ರೈತರ ಬೆಳೆ ಸಮೀಕ್ಷೆ 2020 ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಒಟ್ಟಾರೆ 447664 ಫ್ಲ್ಯಾಟ್‌ಗಳನ್ನು ಸಮೀಕ್ಷೆ ಮಾಡಬೇಕಿದ್ದು ಈವರೆಗೂ 98613 ಫ್ಲ್ಯಾಟ್‌ಗಳ 94393 ಶೇ.18ರಷ್ಟು ರೈತರು ಬೆಳೆ ಸಮೀಕ್ಷೆ ಆ್ಯಪ್‌ ಬಳಸಿಬೆಳೆ ವಿವರ ನೋಂದಾಯಿಸಿಕೊಂಡಿದ್ದಾರೆಂದರು.

ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಬಗ್ಗೆ ಮೊಬೈಲ್‌ ಮೂಲಕ ಅಪ್‌ ಲೋಡ್‌ ಮಾಡಲು ಸೆ.23 ವರೆಗೆಅವಕಾಶ ಕಲ್ಪಿಸಲಾಗಿದೆ. ಜಮೀನಿನ ಸರ್ವೇ ನಂ. ಬೆಳೆ ವಿವರವನ್ನು ಸರ್ಕಾರಕ್ಕೆ ತಿಳಿಸಲು ಅಪ್‌ ಲೋಡ್‌ ಮಾಡಬೇಕೆಂದು ರೈತರಲ್ಲಿ ಮನವಿ ಮಾಡಿದರು.

ಪ್ರಸಕ್ತ ವರ್ಷ ರಾಗಿ ಬೆಳೆಗೆ3295 ರೂ.ಗಳ ಬೆಂಬಲ ಬೆಲೆ ಘೋಷಣೆ ಮಾಡಲಾಗಿದ್ದು ರಾಗಿ ಬೆಳೆದ ಕಟಾವಿನ ನಂತರ ರಾಗಿ ಕೇಂದ್ರಕ್ಕೆ ರಾಗಿ ತರುವ ಸಂದರ್ಭದಲ್ಲಿ ರಾಗಿ ಬೆಳೆದಿರುವ ಕುರಿತು ದಾಖಲೆ ನೀಡುವುದು ಅಗತ್ಯ. ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಬಹಳಷ್ಟು ಜನ ಭೂ ಮಾಲಿಕರಾಗಿದ್ದಾರೆ. ಖಾಲಿ ಪ್ರದೇಶವಿದ್ದರೆ ಯಾವುದೇ ಬೆಳೆ ಬೆಳೆದಿಲ್ಲ ಎಂದು ನಮೂದಿಸಬೇಕು. ಒಟ್ಟಿನಲ್ಲಿ ಬೆಳೆ ವಿವರ ಕುರಿತುಸರ್ಕಾರದ ಗಮನಕ್ಕೆ ತರದಿದ್ದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ಕೃಷಿ ಉಪ ನಿರ್ದೇಶಕಿ ವಿನುತಾ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next