Advertisement

ಬೆಳೆ ಪರಿಹಾರ ಸೀಮಿತ! ಲಾಕ್‌ಡೌನ್‌ ಅವಧಿಯ ಹಾನಿಗೆ ಮಾತ್ರ

02:12 AM May 26, 2021 | Team Udayavani |

ದಾವಣಗೆರೆ: ಕೊರೊನಾ 2ನೇ ಅಲೆಯಲ್ಲಿ ನಷ್ಟವಾಗಿರುವ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ರಾಜ್ಯ ಸರಕಾರ ಪರಿಹಾರ ಘೋಷಿಸಿದೆ. ಆದರೆ ಇದು ಕೇವಲ ಲಾಕ್‌ ಡೌನ್‌ ಅವಧಿಯಲ್ಲಿ ತೀವ್ರ ತರವಾಗಿ ಹಾನಿಗೀಡಾದ ಬೆಳೆಗೆ ಮಾತ್ರ ಸಿಗಲಿದೆ ಎಂಬ ಷರತ್ತು ವಿಧಿಸಲಾಗಿದೆ.

Advertisement

ಪರಿಹಾರ ವಿತರಣೆಗೆ ರಾಜ್ಯ ಸರಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಬೆಳೆ ಸಮೀಕ್ಷೆ ಯಲ್ಲಿ ದಾಖಲಾದ ರೈತರಿಗಷ್ಟೇ ಪರಿಹಾರ ನೀಡಲು ಆದೇಶಿಸಿದೆ. ಎಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಕಟಾವಿಗೆ ಬಂದಿರುವ ಫಸಲನ್ನು ಮಾತ್ರ ಪರಿಗಣಿಸಬೇಕು. ಇದರಲ್ಲಿ ಬಾಳೆ ಮತ್ತು ಈರುಳ್ಳಿ ಬೆಳೆಗೆ ಮೇಯಲ್ಲಿ ಕಟಾವಿಗೆ ಬಂದಿರುವ ಫಸಲಿಗೆ ಮಾತ್ರ ಪರಿಹಾರ ನೀಡಬೇಕೆಂದು ಸೂಚಿಸಿದೆ.

ಗರಿಷ್ಠ 1 ಹೆಕ್ಟೇರ್‌ಗೆ ಮಿತಗೊಳಿಸಿ ಪ್ರತೀ ಹೆಕ್ಟೇರ್‌ಗೆ 10 ಸಾವಿರ ರೂ. ಪರಿಹಾರ ನಿಗದಿಪಡಿಸಲಾಗಿದೆ. ಕನಿಷ್ಠ ಪರಿಹಾರ ಮೊತ್ತ 2,000 ರೂ. ಇದ್ದು, ಹೊಲದ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರ ನೀಡಲು ಸೂಚಿಸಲಾಗಿದೆ.

ಇವುಗಳಿಗೆ ಪರಿಹಾರ
ಪರಿಹಾರ ನೀಡಬಹುದಾದ ಹಣ್ಣು ಮತ್ತು ತರಕಾರಿಗಳ ಪಟ್ಟಿಯನ್ನು ಸರಕಾರವೇ ಸಿದ್ಧಪಡಿಸಿದೆ. ಹಣ್ಣುಗಳು: ಮಾವು, ಸಪೋಟಾ, ಅಂಜೂರ, ಕಲ್ಲಂಗಡಿ, ಕರಬೂಜ, ದಾಳಿಂಬೆ, ಪೇರಲೆ, ನಿಂಬೆ, ಮೂಸಂಬಿ, ದ್ರಾಕ್ಷಿ, ಅನಾನಸು, ಪಪ್ಪಾಯಿ, ಬಾಳೆ.

ತರಕಾರಿ: ಈರುಳ್ಳಿ, ಟೊಮೆಟೋ, ಮೆಣಸು, ಸೌತೆ, ಬದನೆ, ಹೂಕೋಸು, ಎಲೆ ಕೋಸು, ಬೆಂಡೆ, ಕುಂಬಳ, ಹೀರೆ, ಹಾಗಲ, ಸೋರೆ, ಕ್ಯಾರೆಟ್‌, ಗೆಣಸು, ಬೀನ್ಸ್‌, ದಪ್ಪ ಮೆಣಸಿನ ಕಾಯಿ, ಬೀಟ್ರೂಟ್‌, ನುಗ್ಗೆ , ನವಿಲುಕೋಸು, ತೊಂಡೆ, ಮೂಲಂಗಿ, ಸೊಪ್ಪು ತರಕಾರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next