Advertisement

Crop Loan: ರೈತರಿಗೆ ಹೆಚ್ಚು ಸಾಲ ನೀಡಿ: ಬ್ಯಾಂಕ್‌ಗಳಿಗೆ ಸಿಎಸ್‌ ಸೂಚನೆ

01:39 AM Aug 20, 2024 | Team Udayavani |

ಬೆಂಗಳೂರು: ಬ್ಯಾಂಕ್‌ಗಳು ಎಲ್ಲ ಅರ್ಹ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹೆಚ್ಚು ಬೆಳೆ ಸಾಲವನ್ನು ಮಂಜೂರು ಮಾಡ ಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್‌ ಮಹತ್ವದ ಸೂಚನೆ ನೀಡಿದ್ದಾರೆ.

Advertisement

ಬೆಂಗಳೂರಿನನಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ (ಎಸ್‌ಎಲ್‌ಬಿಸಿ) 166ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ಹೆಚ್ಚು ಸಾಲ ನೀಡು ವತ್ತ ಗಮನ ಹರಿಸುವಂತೆ ಸೂಚಿಸಿದರು.

ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳ ವ್ಯಾಪ್ತಿಗೆ ಎಲ್ಲ ಅರ್ಹ ಫ‌ಲಾನುಭವಿಗಳನ್ನು ತರಬೇಕು ಎಂದು ಸರಕಾರದ ಎಲ್ಲ ಇಲಾಖೆಗಳಿಗೆ ಮತ್ತು ಬ್ಯಾಂಕುಗಳಿಗೆ ಸೂಚಿಸಿದರು.
ಈ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದ ಅವಧಿಯಲ್ಲಿ ಶೇ. 79ರಷ್ಟು ಕ್ರೆಡಿಟ್‌ ಠೇವಣಿ ಅನುಪಾತವನ್ನು ಸಾಧಿಸಿದ್ದಕ್ಕಾಗಿ ಎಲ್ಲ ಬ್ಯಾಂಕರ್‌ಗಳನ್ನು ಶ್ಲಾಘಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷಿತ ಸಾಧನೆ ಇಲ್ಲ
ಮೊದಲ ತ್ತೈಮಾಸಿಕದಲ್ಲಿ ಕೃಷಿ ಕ್ಷೇತ್ರದಲ್ಲಿ 1,92,201 ಕೋಟಿ ರೂ. ಗುರಿ ಇದ್ದರೆ, 55,056 ಕೋಟಿ ರೂ.ಗಳ ಗುರಿ ಸಾಧನೆಯಾಗಿದೆ. ಈ ಮೂಲಕ ಶೇ. 29 ನಿಗದಿಪಡಿಸಿದ ನಿಯತಾಂಕಗಳ ಅಡಿಯಲ್ಲಿ ಸಾಧನೆ ಆಗಿದೆ. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆ ಅಡಿಯಲ್ಲಿ ಶೇ. 42 ಸಾಧನೆಯಾಗಿದೆ. ಒಟ್ಟು ಆದ್ಯತಾ ವಲಯವು ಶೇ. 34 ಸಾಧನೆ ಆಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಶೇ. 15 ಕಾರ್ಯಕ್ಷಮತೆ ಸಾಧಿಸಲಾಗಿದ್ದು, ನಿರೀಕ್ಷಿತ ಪ್ರಗತಿ ಕಂಡು ಬಂದಿಲ್ಲ. 2024-25ರ ಆರ್ಥಿಕ ವರ್ಷದ ಎಲ್ಲ ನಿಯತಾಂಕಗಳ ಅಡಿಯಲ್ಲಿ ನಿಗದಿತ ಗುರಿಗಳನ್ನು ಸಾಧಿಸುವಂತೆ ಅವರು ಬ್ಯಾಂಕರ್‌ಗಳಿಗೆ ಸಲಹೆ ನೀಡಿದರು.

ಆರ್‌ಬಿಐಯ ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೆನ್‌ ಗುಪ್ತ ಸಭೆಯಲ್ಲಿ ಪಾಲ್ಗೊಂಡು, ಮೊದಲ ತ್ತೈಮಾಸಿಕದಲ್ಲಿ ಎಸಿಪಿ ಅಡಿಯಲ್ಲಿ ಉತ್ತಮ ಕಾರ್ಯಕ್ಷಮತೆಗಾಗಿ ಎಲ್ಲ ಬ್ಯಾಂಕರ್‌ಗಳನ್ನು ಶ್ಲಾ ಸಿದರು.

Advertisement

ಸಭೆಯ ಸಹ ಅಧ್ಯಕ್ಷತೆ ವಹಿ ಸಿದ್ದ ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿದೇರ್ಶಕ ಭವೇಂದ್ರ ಕುಮಾರ್‌, ಮುದ್ರಾ ಮತ್ತು ಪಿಎಂ ಸ್ವನಿಧಿ ಅಡಿಯಲ್ಲಿ ಬ್ಯಾಂಕುಗಳ ಕಾರ್ಯಕ್ಷಮತೆಯನ್ನು ಪ್ರಶಂಶಿಸಿದ್ದಲ್ಲದೆ, ಎಲ್ಲ ಬ್ಯಾಂಕುಗಳಿಗೆ ಇತರ ಪ್ರಮುಖ ಸರಕಾರ ಪ್ರಯೋಜಿತ ಯೋಜನೆಗಳಲ್ಲಿ ಮೊದಲ ಸ್ಥಾನವನ್ನು ಗಳಿಸಬೇಕು. ಜತೆಗೆ ಎಲ್ಲ ನಿಯತಾಂಕಗಳ ಅಡಿಯಲ್ಲಿ ಕರ್ನಾಟಕವನ್ನು ನಂ. 1 ಸ್ಥಾನಕ್ಕೆ ತರಬೇಕು ಎಂದು ವಿನಂತಿಸಿದರು.

ಆರ್ಥಿಕ ಇಲಾಖೆಯ (ವಿತ್ತೀಯ ಸುಧಾರಣೆ) ಕಾರ್ಯದರ್ಶಿ ಡಾ| ವಿಶಾಲ್‌ ಆರ್‌, ನಬಾರ್ಡ್‌ನ ಮಹಾ ಪ್ರಬಂಧಕ ಪಿ.ಸಿ. ದಾಶ್‌, ಎಸ್‌ಎಲ್‌ಬಿಸಿಯ ಸಂಚಾಲಕ ಕೆ.ಜೆ. ಶ್ರೀಕಾಂತ್‌ ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next