Advertisement

ಬೆಳೆವಿಮೆ ನೋಂದಣಿ ಪ್ರಗತಿ ಕುಂಠಿತ

04:16 PM Jul 07, 2019 | Suhan S |

ಕೊಪ್ಪಳ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆವಿಮೆ ನೋಂದಣಿ ಪ್ರಗತಿ ಕುಂಠಿತವಾಗಿದ್ದು, ರೈತರಿಗೆ ಯೋಜನೆಯ ಕುರಿತು ಜಾಗೃತಿ ಮೂಡಿಸಿ ಬೆಳೆವಿಮೆ ಯೋಜನಗೆ ನೋಂದಾಯಿಸುವಂತೆ ಕ್ರಮವಹಿಸಿ ಎಂದು ಕೃಷಿ ಜಂಟಿ ನಿರ್ದೇಶಕಿ ಶಬಾನಾ ಶೇಖ್‌ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆ ಕುರಿತು ಆಯೋಜಿಸಿದ್ದ ಜಿಲ್ಲಾಮಟ್ಟದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಫಸಲ ಬಿಮಾ ಯೋಜನೆ ಜಾರಿಯಲ್ಲಿದ್ದು, ಜಿಲ್ಲೆಗೆ ಅಧಿಸೂಚಿತ ಬೆಳೆಗಳಾದ ಮಳೆಯಾಶ್ರಿತ ಹೆಸರು ಮತ್ತು ನೀರಾವರಿ ಹತ್ತಿಗೆ ಜು. 16 ಹಾಗೂ ಇತರೆ ಅಧಿಸೂಚಿತ ಬೆಳೆಗಳಿಗೆ ಜು. 31 ಬೆಳೆವಿಮೆ ನೋಂದಾಯಿಸಲು ಕೊನೆ ದಿನವಾಗಿದೆ. ಬೆಳೆವಿಮೆ ನೋಂದಾವಣಿ ಪ್ರಗತಿ ತುಂಬಾ ಕುಂಠಿತವಾಗಿದ್ದು, ಫಸಲು ಬಿಮಾ ಯೋಜನೆ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು. ಅಗ್ರಿಕಲ್ಚರ್‌ ಇನ್ಸೂರೆನ್ಸ್‌ ಕಂಪನಿ ಲಿಮಿಟೆಡ್‌ನಿಂದ ಕೊಪ್ಪಳ ಜಿಲ್ಲಾಮಟ್ಟಕ್ಕೆ ಮತ್ತು ವಿವಿಧ ತಾಲೂಕುಗಳಿಗೆ ಪ್ರತಿನಿಧಿ ನೇಮಿಸಲಾಗಿದೆ. ನೇಮಿಸಲ್ಪಟ್ಟ ಪ್ರತಿನಿಧಿಗಳು ಜಂಟಿ ಕೃಷಿ ನಿರ್ದೇಶಕರ ಕಚೇರಿ ಹಾಗೂ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಲ್ಲಿದ್ದು ಬೆಳೆವಿಮೆ ಅರ್ಜಿಗಳು ರೈತರಿಗೆ, ಬ್ಯಾಂಕ್‌ಗಳಲ್ಲಿ ಮತ್ತು ಸಾಮನ್ಯ ಸೇವಾ ಕೇಂದ್ರಗಳಲ್ಲಿ ಲಭ್ಯವಾಗುವಂತೆ ನೋಡಿಕೊಂಡು ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ವಿಮಾ ಕಂಪನಿ ಈ ಯೋಜನೆ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮ ಕೈಗೊಂಡು ಜಿಲ್ಲೆಯ ರೈತರಲ್ಲಿ ಅರಿವು ಮೂಡಿಸಬೇಕು. ಬೆಳೆವಿಮೆಗೆ ಸಂಬಂಧಿಸಿದ ಸಮಸ್ಯೆ ಕುರಿತು ರೈತರು ಕರೆ ಮಾಡಿದಾಗ ವಿಮೆ ಕಂಪನಿಯ ಪ್ರತಿನಿಧಿಗಳು ಸ್ಪಂದಿಸಬೇಕು. ಬ್ಯಾಂಕ್‌ ಸಿಬ್ಬಂದಿ ಅರ್ಜಿಗಳ ಮಾಹಿತಿಯನ್ನು ಸಂರಕ್ಷಣೆ ಪೋರ್ಟಲ್ನಲ್ಲಿ ನ್ಯೂನತೆ ಆಗದಂತೆ ನೋಂದಾಯಿಸಿ ಕ್ರಮವಹಿಸಬೇಕು ಎಂದರು.

2019-20ನೇ ಸಾಲಿನ ಬೆಳೆವಿಮೆಯ ಇನ್ಸೂರೆನ್ಸ್‌ ಸಂಸ್ಥೆಯ ಪ್ರತಿನಿಧಿಗಳ ವಿವರ ಇಂತಿದೆ. ಜಿಲ್ಲಾ ಮಟ್ಟದ ಪ್ರತಿನಿ ಬಿ. ನಾಗೇಂದ್ರ ಮೊ. 8884499562, ತಾಲೂಕು ಪ್ರತಿನಿಧಿ ಕೊಪ್ಪಳ: ಬಿ. ನಾಗೇಂದ್ರ ಮೊ. 8884499562, ಕುಷ್ಟಗಿ ಗೂರಪ್ಪ ಮೊ. 9731970926, ಯಲಬುರ್ಗಾ ಬಸವರಾಜ ಕೊಟಗಿ ಮೊ. 9632105476, ಗಂಗಾವತಿ ಕೆ. ಮಹೇಶ ಮೊ. 9743855126, ಕಾರಟಗಿ ವಿಠuಲ ಸ್ವಾಮಿ ಮೊ. 8660643857 ಅವರನ್ನು ಸಂಪರ್ಕಿಸಬಹುದಾಗಿದೆ ಎಂದರು.

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಬೆಳೆ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆ ನೋಂದಣಿ ಮಾಡಲು ಈಗಾಗಲೇ ಜಿಲ್ಲೆಯ ಎಲ್ಲಾ ಸಂಬಂಧಿಸಿದ ಬ್ಯಾಂಕ್‌ ಶಾಖೆಗಳಿಗೆ ತಿಳಿಸಲಾಗಿದ್ದು, ಅದರಂತೆ ಕ್ರಮವಹಿಸಲಾಗುವುದು ಎಂದರು. ಉಪ ಕೃಷಿ ನಿರ್ದೇಶಕ ವೀರೇಶ್‌ ಹುನಗುಂದ ಮಾತನಾಡಿ, ಈ ಯೋಜನೆಯ ಲಾಭವನ್ನು ಜಿಲ್ಲೆಯ ಎಲ್ಲಾ ರೈತರು ಪಡೆಯಬೇಕೆಂದರು.

Advertisement

ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗಹ್ರಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ತೋಟಗಾರಿಕೆ ಇಲಾಖೆ, ಸಹಕಾರ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಅಗ್ರಿಕಲ್ಚರ್‌ ಇನ್ಸೂರೆನ್ಸ್‌ ಕಂಪನಿ ಲಿಮಿಟೆಡ್‌ ಬೆಂಗಳೂರು ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next