Advertisement
ನೋಂದಣಿಗೆ ಪ್ರತಿ ವರ್ಷ 1 ತಿಂಗಳ ಕಾಲಾ ವಧಿ ಇರುತ್ತದೆ. ಆಗ ಕಂತಿನ ಹಣ ತುಂಬಲು 15-30 ದಿನಗಳು ಲಭಿಸುತ್ತವೆ. ಕಳೆದ ವರ್ಷ ಪಹಣಿಯಲ್ಲಿ ಬೆಳೆ ನಮೂದನ್ನು ಕಡ್ಡಾಯ ಗೊಳಿಸಿದ್ದರ ಕಾರಣ ಅನೇಕ ರೈತರು ಈ ಯೋಜನೆಯಿಂದ ವಂಚಿತರಾಗಿದ್ದರು. ಈ ವರ್ಷ ನೋಂದಣಿ ಅವಧಿ 4 ದಿನಗಳಾಗಿದ್ದು, ನೋಂದಣಿ ಹಾಗೂ ಹಣ ಪಾವತಿ ಕಷ್ಟ. ಜೂ.26 ರಂದು ಆದೇಶವಾಗಿದ್ದು, ಜು.1 ಕೊನೆ ದಿನ. ಇದರಲ್ಲಿ ಕಚೇರಿ ನಿರ್ವಹಿಸುವುದು ಮೂರೇ ದಿನ. ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಗೆ ವಿಮೆ ಕಂಪೆನಿ ಬೇರೆಯಾಗಿರುವುದು ಸಮಸ್ಯೆಗೆ ಕಾರಣ.
ಪಹಣಿಯಲ್ಲಿ ಹಾಗೂ ಬೆಳೆ ಸಮೀಕ್ಷೆಯಲ್ಲಿ ಅಡಿಕೆ, ಕಾಳುಮೆಣಸು ನಮೂದಾಗಿರಬೇಕು. ಬೆಳೆ ವಿಸ್ತೀರ್ಣಕ್ಕೆ ಅನುಗುಣವಾಗಿ ವಿಮೆ ಮೊತ್ತ ಪಾವತಿಸಬೇಕು. ಬ್ಯಾಂಕ್ ಮತ್ತು ಡಿಜಿಟಲ್ ಇ-ಸೇವಾ ಕೇಂದ್ರಗಳಿಗೆ ಹೋಗಬೇಕು. ವಿಮೆ ಮಾಡಿಸುವಾಗ ಫ್ರುಟ್ ತಂತ್ರಾಂಶದ ನೋಂದಣಿ ಸಂಖ್ಯೆ ಹೊಂದಿರಬೇಕು. ಆ ಸಂಖ್ಯೆಗೆ ಪಹಣಿ ವಿವರ ಜೋಡಿಸಿರಬೇಕು. ಆಧಾರ್ ಮಾಹಿತಿ, ಬೆಳೆ ಸಾಲ ಹೊಂದಿಲ್ಲದ ರೈತರು ಆಧಾರ್ ಮಾಹಿತಿ ಜತೆ ಪಹಣಿ ಪ್ರತಿ, ಉಳಿತಾಯ ಖಾತೆ ಮಾಹಿತಿ ದಾಖಲೆ ಗಳು, ಸ್ವಯಂಘೋಷಣೆ ನಮೂನೆ ಗಳನ್ನು ಪ್ರೀಮಿಯಂ ಮೊತ್ತದೊಂದಿಗೆ ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಿ ನೋಂದಣಿ ಮಾಡಿಸಬೇಕು. ಯೋಜನೆಯಲ್ಲಿ ಭಾಗಿ ಯಾಗಲು ಇಚ್ಛಿಸದಿದ್ದರೆ ಬೆಳೆ ಸಾಲ ಪಡೆದ ಸಂಸ್ಥೆಗೆ ವಾರದೊಳಗೆ ಮುಚ್ಚಳಿಕೆ ಪತ್ರ ನೀಡಬೇಕು. ಹೆಬ್ರಿ ತಾಲೂಕಿನಲ್ಲಿ ತಂತ್ರಾಂಶ ಕೈಕೊಟ್ಟ ಕಾರಣ ಶುಕ್ರವಾರವೂ ನೋಂದಣಿಗೆ ಸಮಸ್ಯೆಯಾಗಿದೆ. ಅಡಿಕೆಗೆ ಪ್ರತಿ ಹೆಕ್ಟೇರ್‌ಗೆ 1.28 ಲಕ್ಷ ರೂ. ವಿಮೆಗೆ ರೈತರು 6,400 ರೂ., ಕಾಳು ಮೆಣಸಿಗೆ 47 ಸಾವಿರ ರೂ. ವಿಮೆಗೆ 2,350 ರೂ. ಪಾವತಿಸಬೇಕು.
Related Articles
2023-24ನೇ ಸಾಲಿನಲ್ಲಿ ಅಡಿಕೆ ಮತ್ತು ಕಾಳುಮೆಣಸಿಗೆ ಜು.1 ರಿಂದ ಈ ವರ್ಷದ ಜೂನ್ ಅಂತ್ಯದ ತನಕದ ಹಾನಿಯ ಅವಧಿ ಇದ್ದುದನ್ನು ಅಡಿಕೆಗೆ ದ.ಕ. ಜಿಲ್ಲಾ ವ್ಯಾಪ್ತಿಗೆ 2 ತಿಂಗಳ ಅವಧಿಯನ್ನೇ ಕಡಿತಗೊಳಿಸಲಾಗಿತ್ತು. ಅದಕ್ಕೂ ಮುನ್ನ 12 ತಿಂಗಳ ಅವಧಿಯಿತ್ತು. ಆದರೆ ಕಂತು ಹಿಂದಿನ ವರ್ಷಗಳಷ್ಟೇ ಸ್ವೀಕರಿಸಲಾಗಿತ್ತು. 2023 ಆ.1ರಿಂದ 2024ರ ಮೇ ಅಂತ್ಯ ದವರೆಗೆ ಮಾತ್ರ ಹಾನಿಯ ಸಮಯ (ರಿಸ್ಕ್ ಪೀರಿಯಡ್) ನಿಗದಿಯಾಗಿತ್ತು. ಕಳೆದ ವರ್ಷ ಜುಲೈ ಮತ್ತು ಈ ವರ್ಷದ ಜೂನ್‌ನಲ್ಲಿ ಹಾನಿ ಸಂಭವಿಸಿದ್ದರೆ ಪರಿಹಾರ ಇಲ್ಲ. ಈ ವರ್ಷವೂ ಆ.1ರಿಂದ ವಿಮೆ ವ್ಯವಸ್ಥೆ ಜಾರಿಯಾಗಲಿದೆ. 2024ರ ಜೂನ್ ಮತ್ತು ಜುಲೈಯಲ್ಲಿ ಹಾನಿಯಾಗಿದ್ದಲ್ಲಿ ಪರಿಹಾರ ಪಡೆಯುವ ಅರ್ಹತೆ ಕಳೆದುಕೊಳ್ಳುತ್ತದೆ.
Advertisement
ದ.ಕ. ಜಿಲ್ಲೆಯ ಬಿರುಬೇಸಗೆಯ ತಾಪ ದಿಂದ ಬಸವಳಿದ ಅಡಿಕೆಯ ಎಳೆನಳ್ಳಿಗಳು ಜೂನ್‌ನಲ್ಲಾಗುವ ಸಣ್ಣ ಸಣ್ಣ ಮಳೆಯ ಕಾರಣ ದಿಂದ ಮರದಿಂದ ಕೆಳಗೆ ಬಿದ್ದು ಫಸಲಿಗೆ ಹಾನಿ ಉಂಟಾಗುತ್ತದೆ. ಈ ಹಾನಿಗೆ ವಿಮೆ ಪ್ರಯೋಜನ ದೊರಕದಂತೆ ವಿಮಾ ಅವಧಿ 10 ತಿಂಗಳಿಗೆ ಕಡಿತಗೊಳಿಸಿದ್ದನ್ನು ಸರಿಪಡಿಸಬೇಕಿದೆ.
ಕಾಸರಗೋಡಿನಲ್ಲಿ ರೈತರ ಎಲ್ಲ ಕೃಷಿಗೂ ವಿಮೆ ಇದೆ. ದ.ಕ.ದಲ್ಲಿ ಕೇವಲ ಭತ್ತ, ಅಡಿಕೆ, ಕರಿಮೆ ಣಸಿಗೆ ಮಾತ್ರ ಈ ಸೌಲಭ್ಯ. ಗೇರು, ರಬ್ಬರ್, ಕೊಕ್ಕೋ ಬೆಳೆಗಳನ್ನೂ ವಿಮೆ ವ್ಯಾಪ್ತಿಗೆ ತರಬೇಕಿದೆ ಎನ್ನುತ್ತಾರೆ ಕೃಷಿಕ ಎಲ್. ಬಿ.ಪೆರ್ನಾಜೆ ಕಾವು.
ಗಮನಕ್ಕೆ ತರಲಾಗಿದೆಪ್ರತಿವರ್ಷ ಜೂ.1ರಿಂದ 30ರ ವರೆಗೆ ವಿಮೆ ನೋಂದಣಿಗೆ ಕಾಲಾವಕಾಶ ನೀಡಲಾಗುತ್ತದೆ. ಈ ಬಾರಿ ಕಡಿಮೆ ದಿನ ನಿಗದಿಯಾದ ಕಾರಣ 15 ದಿನ ವಿಸ್ತರಣೆ ಕೋರಿ ತೋಟಗಾರಿಕೆ ಜಂಟಿ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.
-ಭುವನೇಶ್ವರಿ, ತೋಟಗಾರಿಕೆ
ಉಪನಿರ್ದೇಶಕಿ, ಉಡುಪಿ -ಲಕ್ಷ್ಮೀ ಮಚ್ಚಿನ