Advertisement

ಕಾಡಾನೆಗಳ ಹಾವಳಿಗೆ ರೈತರ ಬೆಳೆಗಳು ನಾಶ

07:01 PM Dec 06, 2020 | Suhan S |

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಗೊಳಪಡುವ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದಾಗಿ ರೈತರು ಬೆಳೆದ ಬೆಳೆ ಅವರ ಕೈ ಸೇರುವ ಮೊದಲೇ ಕಾಡಾನೆಗಳ ಬಾಯಿಗೆ ತುತ್ತಾಗುತ್ತಿದೆ. ಇಷ್ಟದ್ದರೂ ಸಹ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಗೂರು ಹೋಬಳಿಯ ಮಂಚಹಳ್ಳಿ ಸುತ್ತ ಮುತ್ತಲಿನ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಮುಚ್ಚಿರುವ ಕಂದಕಗಳು: ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಓಂಕಾರ್‌ ಅರಣ್ಯ ವಲಯದ ಕಾಡಂಚಿನಲ್ಲಿ ಕಂದಕಗಳು ಮುಚ್ಚಿ ಹೋಗಿದ್ದು, ಪ್ರತಿ ದಿನವೂ ಸಂಜೆಯಾಗುತ್ತಿದ್ದಂತೆಯೇ ಆನೆಗಳು ಅರಣ್ಯದಿಂದ ಹೊರಬಂದು ಮಂಚಹಳ್ಳಿ ಸುತ್ತ ಮುತ್ತಲಿನ ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ನಾಶಪಡಿ ಸುತ್ತಿವೆ. ಕಳೆದ ಒಂದು ವಾರದಿಂದ ಗ್ರಾಮದ ಕಾಡಂಚಿನ ಜಮೀನಿನಲ್ಲಿ ನಿರಂತರವಾಗಿ ಕಾಡಾನೆ ದಾಳಿ ನಡೆಸುತ್ತಿದೆ. ಕಾಡಿನಿಂದ ಬಂದ 6ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಮಂಚಹಳ್ಳಿಸಮೀಪದಲ್ಲಿರುವ ಶಿವು ಎಂಬುವವರಿಗೆ ಸೇರಿದ ಟೊಮೆಟೋ ಬೆಳೆಗಳನ್ನು ನಾಶಪಡಿಸಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ರೈತರು ದೂರಿದ್ದಾರೆ.

ಕಂದಕಗಳು ಮುಚ್ಚಿಕೊಂಡಿರುವ ಪ್ರದೇಶಗಳಲ್ಲಿ ರಾತ್ರಿ ಗಸ್ತು ನಡೆಸುತ್ತಿಲ್ಲ. ಇದರಿಂದ ಆನೆಗಳ ಹಾವಳಿ ಮಿತಿ ಮೀರಿದೆ. ಬೆಳಗಾಗುತ್ತಿದ್ದಂತೆ ಗುಡ್ಡದ ಬದಿಗೆ ತೆರಳುವ ಆನೆಗಳು ಕತ್ತಲಾಗುತ್ತಿದ್ದಂತೆ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ತಿನ್ನುತ್ತಿವೆ.ಆನೆಗಳು ಬಂದಿರುವ ಬಗ್ಗೆ ಕರೆ ಮಾಡಿದರೂ ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿ ಗಟ್ಟಲು ಮುಂದಾಗುತ್ತಿಲ್ಲ. ಇತ್ತೀಚಿಗೆ ಆನೆಗಳನ್ನು ಓಡಿಸಲು ಮುಂದಾಗುವ ರೈತರ ಮೇಲೆಯೇ ಆನೆಗಳು ದಾಳಿ ಮಾಡಲು ಮುಂದಾಗುತ್ತಿದ್ದು, ಇದರಿಂದ ರೈತರು ತಮ್ಮ ಬೆಳೆಗಳ ರಕ್ಷಣೆಗೆ ಕಾವಲು ನಡೆಸಲು ಹೆದರುತ್ತಿದ್ದಾರೆ. ಈ ಬಗ್ಗೆ ಓಂಕಾರ್‌ ವಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ರಾತ್ರಿ ಗಸ್ತು ನಡೆಸುವುದುಹಾಗೂ ಆನೆಗಳನ್ನು ಎದುರಿಸಲು ರೈತರಿಗೆ ಪಟಾಕಿ ವಿತರಣೆ ಮಾಡುತ್ತಿಲ್ಲ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಉಪಯೋಗವಾಗುತ್ತಿಲ್ಲ. ಬೆಳೆನಷ್ಟಕ್ಕೆ ಅರಣ್ಯ ಇಲಾಖೆ ಪುಡಿಗಾಸಿನ ಪರಿಹಾರ ನೀಡುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಆನೆಗಳ ದಾಳಿ ತಡೆಗಟ್ಟಲುಕ್ರಮಕೈಗೊಳ್ಳಬೇಕು ಎಂದು ಮಂಚಹಳ್ಳಿ ಗ್ರಾಮದ ರೈತ ಶಿವು ಹಾಗೂ ಇತರರು ಒತ್ತಾಯಿಸಿದ್ದಾರೆ.

ಓಂಕಾರ್‌ ಅರಣ್ಯ ವಲಯದಕಾಡಂಚಿನಲ್ಲಿ ಹಳೆಯ ಕಂದಕಗಳು ಮಳೆಯಿಂದ ಮುಚ್ಚಿಹೋಗಿವೆ. ಇವುಗಳನ್ನು ಮತ್ತೆ ದುರಸ್ತಿ ಗೊಳಿಸುವವರೆಗೆ ಕಾಡಾನೆಗಳ ಹಾವಳಿ ತಡೆಗೆ ರಾತ್ರಿ ಗಸ್ತು ಹೆಚ್ಚಿಸಲುಕ್ರಮಕೈಗೊಳ್ಳಲಾಗುವುದು. ನಟೇಶ್‌, ಬಂಡೀಪುರ ಹುಲಿ ಯೋಜನೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next