Advertisement
ಬಿತ್ತನೆ ಪ್ರಮಾಣ: ಮುಂಗಾರು ಹಂಗಾಮಿನಲ್ಲಿ 1.02 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಶೇ.62.24 ಪ್ರಮಾಣದಲ್ಲಿ ಕೇವಲ 53,592 ಹೆಕ್ಟೇರ್ ಗುರಿ ಸಾಧಿಸಲಾಗಿದೆ.
Related Articles
Advertisement
ಬೆಳೆ ಸಮೀಕ್ಷೆ: ಜಿಲ್ಲಾದ್ಯಂತ 7,91,198 ಬೆಳೆಗಳನ್ನು ಸಮೀಕ್ಷೆ ಮಾಡುವ ಗುರಿ ಹೊಂದಿದ್ದು, 573171 ಬೆಳೆಗಳ ಸಮೀಕ್ಷೆ ಪ್ರಗತಿಯಲ್ಲಿದ್ದು, 218025 ಬೆಳೆಗಳ ಸಮೀಕ್ಷೆ ಬಾಕಿ ಇದೆ. ಶೇ.72.24 ರಷ್ಟು ಬೆಳೆ ಸಮೀಕ್ಷೆಯಾಗಿದೆ. ತಾಲೂಕುವಾರು ಬಂಗಾರಪೇಟೆಯಲ್ಲಿ ಶೇ.81.67, ಕೆಜಿಎಫ್‌ನಲ್ಲಿ ಶೇ.81.03, ಕೋಲಾರದಲ್ಲಿ ಶೇ.65.81, ಮಾಲೂರಿನಲ್ಲಿ ಶೇ.70.47, ಮುಳಬಾಗಿಲಿನಲ್ಲಿ ಶೇ.77.21 ಮತ್ತು ಶ್ರೀನಿವಾಸಪುರದಲ್ಲಿ ಶೇ.67.70 ರಷ್ಟು ಬೆಳೆ ಸಮೀಕ್ಷೆಯಾಗಿದೆ. ಬೆಳೆ ಸಮೀಕ್ಷೆಯನ್ನು ಚುರುಕುಗೊಳಿಸುವ ಸಲುವಾಗಿ ಪ್ರತಿ ರೈತರು ತಾವೇ ಬೆಳೆ ಸಮೀಕ್ಷೆ ಆಪ್ ಮೂಲಕ ಬೆಳೆಯ ಸ್ಥಿತಿಗತಿಗಳನ್ನು ದಾಖಲಿಸಿಬೇಕೆಂದು ಕೃಷಿ ಇಲಾಖೆ ಕೋರಿದೆ.
ಬೆಳೆ ವಿಮೆ: ಕೋಲಾರ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ 71,822 ವಿಮಾ ಪಾಲಿಸಿಗಳಿದ್ದು, 35,267 ಹೆಕ್ಟೇರ್ ವ್ಯಾಪ್ತಿ ಬೆಳೆಯನ್ನು ವಿಮಾ ಮೂಲಕ ರಕ್ಷಣೆ ನೀಡಲಾಗಿತ್ತು. ಈ ಪೈಕಿ 39,185 ಪಾಲಿಸಿಗಳಿಗೆ 3,131 ರೂ.ಗಳ ವಿಮಾ ಪರಿಹಾರ ಒದಗಿಸಲು ಕ್ರಮವಹಿಸಲಾಗಿದೆ. 38,979 ಪಾಲಿಸಿಗಳಿಗೆ 3,112 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 206 ಅರ್ಜಿಗಳ 19.01 ಲಕ್ಷ ರೂ ಬಾಕಿ ಉಳಿದಿದೆ. ಜಿಲ್ಲೆಯಲ್ಲಿ ಎಷ್ಟೆಷ್ಟು ಮಳೆ ಕೊರತೆ?: ಜಿಲ್ಲಾದ್ಯಂತ 2023 ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆವಿಗೂ ಬಿದ್ದ ಮಳೆ ಪ್ರಮಾಣದಲ್ಲಿ ಶೇ.12 ರಷ್ಟು ಹೆಚ್ಚುವರಿ ಮಳೆಯಾಗಿದೆ. ಆದರೆ, ಮುಂಗಾರು ಹಂಗಾಮು ಆರಂಭವಾದ ನಂತರ ಮಳೆ ಕುಂಠಿತಗೊಂಡಿರುವುದರಿಂದ ಬಿತ್ತನೆ ಪ್ರಮಾಣ ಶೇ.52 ಕ್ಕೆ ಸೀಮಿತವಾಗುವಂತಾಗಿದೆ.
ಜನವರಿಯಲ್ಲಿ ಶೇ.95 ಕೊರತೆ, ಫೆಬ್ರವರಿಯಲ್ಲಿ ಶೇ.100 ಕೊರತೆ, ಮಾರ್ಚ್‌ನಲ್ಲಿ ಶೇ.351 ರಷ್ಟು ಹೆಚ್ಚಳ, ಏಪ್ರಿಲ್‌ನಲ್ಲಿ ಶೇ.31 ಕೊರತೆ, ಮೇನಲ್ಲಿ ಶೇ.97 ಹೆಚ್ಚುವರಿ, ಜೂನ್‌ನಲ್ಲಿ ಶೇ.34 ಹೆಚ್ಚುವರಿ, ಜುಲೈನಲ್ಲಿ ಶೇ.26 ಕೊರತೆ, ಆಗಸ್ಟ್‌ನಲ್ಲಿ ಶೇ.76 ಕೊರತೆ ಹಾಗೂ ಸೆಪ್ಟೆಂಬರ್‌ನಲ್ಲಿ ಶೇ.29 ಹೆಚ್ಚುವರಿ ಮಳೆ ದಾಖಲಾಗಿದೆ.
ಕೋಲಾರ ಜಿಲ್ಲೆಯ 6 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಸಂಕಷ್ಟಗಳನ್ನು ಎದುರಿಸಲು ಅಗತ್ಯ ಅನುದಾನ ಒದಗಿಸಲು ಸರ್ಕಾರ ಸಿದ್ಧತೆ ನಡೆಸಿಕೊಂಡಿದೆ. ಕೇಂದ್ರದ ಬರ ಪರಿಶೀಲನಾ ತಂಡ ಸಮೀಕ್ಷೆ ನಡೆಸಿ ವರದಿ ನೀಡಿದ ನಂತರ ಬರಪರಿಹಾರಕ್ಕೆ ಅಗತ್ಯವಾದ ಹಣ ಬಿಡುಗಡೆ ಮಾಡಲಾಗುವುದು. ● ಚೆಲುವರಾಯಸ್ವಾಮಿ, ಕೃಷಿ ಸಚಿವರು, ಕೋಲಾರ ಜಿಲ್ಲೆ ಭೇಟಿ ಸಂದರ್ಭದಲ್ಲಿ.
– ಕೆ.ಎಸ್.ಗಣೇಶ್