Advertisement

ಕ್ರೋನ್ಸ್‌ ಖಾಯಿಲೆ ಬಗ್ಗೆ ಗೊತ್ತೇ; ಇದರ ಲಕ್ಷಣವೇನು?

04:13 PM Sep 25, 2021 | Team Udayavani |

ಇದಾವುದು ಹೊಸ ಕಾಯಿಲೆ ಎಂದು ಯೋಚಿಸುತ್ತಿದ್ದೀರಾ ? ಹಾಗಾದರೆ ಇದರ ಬಗ್ಗೆ ತಿಳಿದುಕೊಳ್ಳಲೇಬೇಕು. ಇದು ಕರುಳಿಗೆ ಸಂಬಂಧಪಟ್ಟ ಸೋಂಕು. ಅಮೆರಿಕದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಇದರಿಂದಲೇ ಬಳಲುತ್ತಿದ್ದಾರೆ.

Advertisement

ಕ್ರೋನ್ಸ್‌ ಕುರಿತು ಇನ್ನೂ ಹಲವು ಸಂಶೋಧನೆ ನಡೆಯುತ್ತಿದೆ. ಹಾಗಾಗಿ ಇನ್ನಷ್ಟು ಸಮಗ್ರ ಮಾಹಿತಿ ಲಭ್ಯವಾಗಬೇಕಿದೆ. ಸದ್ಯ ಲಭ್ಯವಿರುವ ಮಾಹಿತಿಯಂತೆ ಈ ಸೋಂಕು ಗಂಟಲಿನಿಂದ ಹಿಡಿದು ಗುದದ್ವಾರದವರೆಗಿನ ಯಾವ ಭಾಗದಲ್ಲೂ ಕಾಣಿಸಿಕೊಳ್ಳಬಹುದು. ಸಣ್ಣ ಕರುಳಿನಲ್ಲಿ ಕಂಡು ಬರುವುದು ಹೆಚ್ಚು ಎನ್ನುತ್ತವೆ ಇದುವರೆಗಿನ ಸಂಶೋಧನೆಗಳು. ಈ ಸೋಂಕು ಒಮ್ಮೆ ತಗುಲಿದ ಮೇಲೆ ನಿಧಾನವಾಗಿ ನಮ್ಮ ನರಗಳು ದುರ್ಬಲಗೊಳ್ಳುತ್ತಾ ಹೋಗುತ್ತವೆ.

ಈ ಕಾಯಿಲೆ ಬರಲು ಇಂಥದ್ದೇ ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೂ ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ನಮ್ಮ ರೋಗ ನಿರೋಧಕ ಶಕ್ತಿಯ ಸಾಮರ್ಥ್ಯ ಹಾಗೂ ವಂಶವಾಹಿನಿಗಳು ಈ ಕಾಯಿಲೆಗೆ ಕಾರಣವಾಗಬಹುದಂತೆ.

ಯಾವ ರೀತಿಯ ಲಕ್ಷಣ?
ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಧೂಮಪಾನ ಮಾಡುವವರಲ್ಲಿ ಈ ಸೋಂಕಿನ ಸಾಧ್ಯತೆ ಹೆಚ್ಚಂತೆ. ಇನ್ನೂ ಇದಕ್ಕೆ ಮದ್ದಿಲ್ಲ. ತೀವ್ರ ಜ್ವರ, ಅತಿಸಾರ, ಹೊಟ್ಟೆ ಸೆಳೆತ, ಮೂತ್ರ ವಿಸರ್ಜನೆಯ ಸಂದರ್ಭ ರಕ್ತ ಬರುವುದು, ಹಸಿವಿಲ್ಲದಿರುವುದು, ತೂಕದಲ್ಲಿ ನಷ್ಟವಾಗುವುದು, ಅಲರ್ಜಿ-ಹೀಗೆ ಹಲವು ಲಕ್ಷಣಗಳು. ಇಂಥ ಲಕ್ಷಣಗಳನ್ನು ಲಘುವಾಗಿ ಭಾವಿಸದೇ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು. ಇಲ್ಲವಾದರೆ ಶ್ವಾಸಕೋಶ ಮತ್ತು ಕರುಳಿನ ಆರೋಗ್ಯಕ್ಕೆ ಧಕ್ಕೆಯಾಗಬಹುದು.

-ಪ್ರೀತಿ ಭಟ್‌ ಗುಣವಂತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next