Advertisement

Crocodile: ದಾಂಡೇಲಿಯ ಗ್ಯಾರೇಜಿನಲ್ಲಿತ್ತು ಹತ್ತು ಅಡಿ ಉದ್ದದ ಮೊಸಳೆ…

08:20 AM Sep 10, 2024 | Team Udayavani |

ದಾಂಡೇಲಿ : ತಾಲೂಕಿನ ಅಂಬಿಕಾನಗರದಲ್ಲಿ ಸ್ಥಳೀಯ ಕೆಪಿಸಿಯ ಗ್ಯಾರೇಜಿನಲ್ಲಿ 10 ಅಡಿ ಉದ್ದದ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಈ ಬಗ್ಗೆ ಕೆಪಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ.

Advertisement

ಅರಣ್ಯ ಇಲಾಖೆಯ ನುರಿತ ರಕ್ಷಣಾ ತಂಡ ಸ್ಥಳಕ್ಕಾಗಮಿಸಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಗೊಳಿಸಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚೌವ್ಹಾಣ್ ಅವರ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿಗಳಾದ ಎನ್.ಎಲ್.ನದಾಫ್‌ ಮತ್ತು ಮಹಿಮ್ ಜನ್ನು ಅವರ ನೇತೃತ್ವದಲ್ಲಿ ಅಸ್ಲಾಂ, ರಾಜಶೇಖರ, ಲಗ್ಮಪ್ಪಾ, ಹಸನ್ ಹಾಗೂ ದಾಂಡೇಲಿ‌ಯ ಮೊಸಳೆ ರೆಸ್ಕ್ಯೂ ತಂಡ ಈ ಕಾರ್ಯದಲ್ಲಿ ಭಾಗವಹಿಸಿತ್ತು.

ಇದನ್ನೂ ಓದಿ: Today World Suicide Prevention Day ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ

Advertisement
Advertisement

Udayavani is now on Telegram. Click here to join our channel and stay updated with the latest news.