ಪಣಜಿ: ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ತೀರ್ಪುಗಾರರ ಮುಖ್ಯಸ್ಥ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್ ನೀಡಿದ ವಿವಾದಾತ್ಮಕ ಕಾಮೆಂಟ್ ಹೊಸ ವಿವಾದವನ್ನು ಹುಟ್ಟುಹಾಕಿದೆ.
ಲ್ಯಾಪಿಡ್ ಹೇಳಿಕೆಯ ನಂತರ, ಎಲ್ಲಾ ಬಾಲಿವುಡ್ ಸೆಲೆಬ್ರಿಟಿಗಳು ತೀವ್ರ ಪ್ರತಿಕ್ರಿಯೆಗಳನ್ನು ನೀಡಿದ್ದು, . ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನಟ ಅನುಪಮ್ ಖೇರ್ ಈಗ ಮತ್ತೊಮ್ಮೆ ಟ್ವಿಟರ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಇಸ್ರೇಲ್ ಚಲನಚಿತ್ರ ನಿರ್ಮಾಪಕನ ಹೇಳಿಕೆಯನ್ನು ಖಂಡಿಸಿದ್ದಾರೆ.
ನಡಾವ್ ಲ್ಯಾಪಿಡ್ ಅವರು ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು “ಪ್ರಚಾರ” ಮತ್ತು “ಅಸಭ್ಯ ಚಲನಚಿತ್ರ” ಎಂದು ಹೇಳಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಮರ್ಶಕರು ಮತ್ತು ರಾಜಕೀಯ ಮುಖಂಡರಿಂದ ತೀವ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
ಅನುಪಮ್ ಖೇರ್ ಅವರು ಟ್ವೀಟ್ ನಲ್ಲಿ ಹಂಚಿಕೊಂಡ ತಮ್ಮ ವಿಡಿಯೋದಲ್ಲಿ, ”ಸ್ನೇಹಿತರೇ, ಕೆಲವರು ಸತ್ಯವನ್ನು ನೋಡುವ ಮತ್ತು ತೋರಿಸುವ ಅಭ್ಯಾಸವನ್ನು ಹೊಂದಿಲ್ಲ. ಅದರ ಮೇಲೆ ತಮಗೆ ಇಷ್ಟವಾದ ಪರಿಮಳ, ಇಷ್ಟವಾದ ರುಚಿ, ಲೇಪನ, ಅಲಂಕಾರ ಮತ್ತು ತಮ್ಮ ಇಷ್ಟದ ಬಣ್ಣವನ್ನು ನೋಡಿ ಅಭ್ಯಾಸ ಮಾಡಿಕೊಳ್ಳುತ್ತಾರೆ. ಅವರು ಕಾಶ್ಮೀರದ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಬಣ್ಣಬಣ್ಣದ ಸಂತೋಷದ ಕನ್ನಡಕಗಳೊಂದಿಗೆ ನೋಡಲು ಮತ್ತು ತೋರಿಸಬೇಕೆಂದು ಅವರು ಬಯಸುತ್ತಾರೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
”ಕಾಶ್ಮೀರ್ ಫೈಲ್ಸ್ ಸತ್ಯ ಕೆಲವರ ಗಂಟಲಿಗೆ ಮುಳ್ಳಿನಂತೆ ಅಂಟಿಕೊಂಡಿದೆ.ಅದನ್ನು ನುಂಗಲೂ ಆಗುತ್ತಿಲ್ಲ, ಉಗುಳಲೂ ಆಗುತ್ತಿಲ್ಲ! ಅವನ ಆತ್ಮ ಈ ಸತ್ಯವನ್ನು ಸುಳ್ಳೆಂದು ಸಾಬೀತುಪಡಿಸಲು ಹತಾಶವಾಗಿ ಯತ್ನಿಸಲಾಗುತ್ತಿದೆ.ಆದರೆ ನಮ್ಮ ಚಿತ್ರ ಕೇವಲ ಚಲನಚಿತ್ರವಲ್ಲ,ಈಗ ಒಂದು ಚಳುವಳಿಯಾಗಿದೆ. ಹೇಯ ಟೂಲ್ ಕಿಟ್ ಗ್ಯಾಂಗ್ ಈ ರೀತಿ ಪ್ರಯತ್ನಿಸುತ್ತಲೇ ಇದೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.