Advertisement

Modi ಬಗ್ಗೆ ಟೀಕೆ: ಖರ್ಗೆ ವಿರುದ್ಧ ಕೇಸು ದಾಖಲಿಗೆ ದಿಲ್ಲಿ ಕೋರ್ಟ್‌ ನಕಾರ

12:03 AM Dec 14, 2024 | Team Udayavani |

ಹೊಸದಿಲ್ಲಿ: ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಎಫ್ಐಆರ್‌ ದಾಖಲಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ಹೊಸದಿಲ್ಲಿಯ ಕೋರ್ಟೊಂದು ಶುಕ್ರವಾರ ತಿರಸ್ಕರಿಸಿದೆ.

Advertisement

2023ರ ಎ.27ರಂದು ಕರ್ನಾಟಕದ ಗದಗ ಜಿಲ್ಲೆಯ ನರೇಗಲ್‌ನಲ್ಲಿ ನಡೆದಿದ್ದ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ್ದ ಖರ್ಗೆಯವರು, ಪ್ರಧಾನಿ ಮೋದಿಯವರನ್ನು ವಿಷಪೂರಿತ ಹಾವು ಎಂದು ಟೀಕಿಸಿದ್ದರು. ಆದರೆ ಆರೋಪ ಸಾಬೀತುಪಡಿಸಲು ದೂರುದಾರರ ಬಳಿ ಇರುವ ಸಾಕ್ಷ್ಯಗಳು ತಾಂತ್ರಿಕವಾದುದಲ್ಲ ಮತ್ತು ತನಿಖೆಗೆ ಯೋಗ್ಯವಾದುದಲ್ಲ. ಹೀಗಾಗಿ ಎಫ್ಐಆರ್‌ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗದು ಎಂದು ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.