“ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಬಗ್ಗೆ ನಿಮಗೆ ಗೊತ್ತೇ ಇದೆ. ಒಂದು ಹಾಸ್ಯ ಚಿತ್ರವಾಗಿ ಇದು ಪ್ರೇಕ್ಷಕರ ಮನಗೆದ್ದಿತ್ತು. ಈಗ ಆ ಚಿತ್ರದ ನಿರ್ದೇಶಕ ಕುಮಾರ್, “ಕ್ರಿಟಿಕಲ್ ಕೀರ್ತನೆಗಳು’ ಎಂಬ ಚಿತ್ರ ಮಾಡಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಮ್ಮ ಸಿನಿಮಾ ಬಗ್ಗೆ ಮಾತನಾಡುವ ಕುಮಾರ್, ಪ್ರತಿ ವರ್ಷ ಬೆಟ್ಟಿಂಗ್‌ನಿಂದ ಸೋತು ಸುಮಾರು 200 ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಶೇಕಡ 70ರಷ್ಟು ಜನ ಸಾಲದ ಸುಳಿಯಲ್ಲಿ ಸಿಲುಕಿದೆ. ಆ ವಿಷಯವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಚಿತ್ರ ನಾಲ್ಕು ಆಯಾಮಗಳಲ್ಲಿ ಸಾಗಲಿದ್ದು, ಪ್ರತಿಯೊಂದಕ್ಕೂ ಸಂಬಂಧವಿದೆ. ಈ ಚಿತ್ರ ನೋಡಿದ ಮೇಲೆ ಪ್ರೇಕ್ಷಕನಿಗೆ ಚಿತ್ರದ ಕ್ಲೈಮ್ಯಾಕ್ಸ್ ಕಾಡುತ್ತದೆ ಎನ್ನುವುದು ಕುಮಾರ್ ಮಾತು.
ಇದನ್ನೂ ಓದಿ:ನಟ ಅಜಯ್ ದೇವಗನ್ ಜನ್ಮದಿನ : ‘ RRR ’ ತಂಡದಿಂದ ಭರ್ಜರಿ ಉಡುಗೊರೆ
ಚಿತ್ರದಲ್ಲಿ ತಬಲಾ ನಾಣಿ ವಕೀಲರಾಗಿ ನಟಿಸಿದ್ದಾರೆ. “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದಿಂದ ನನಗೆ ಎಂಟು ಹೊಸ ಸಿನಿಮಾಗಳ ಅವಕಾಶ ಬಂದಿತ್ತು. ಈಗ ಅದೇ ತಂಡದ ಜೊತೆ ಕೆಲಸ ಮಾಡಿದ್ದೇನೆ. ನಿರ್ದೇಶಕ ಕುಮಾರ್ ಒಳ್ಳೆಯ ತಂಡ ಹೊಂದಿದ್ದಾರೆ. ಒಳ್ಳೆಯ ತಂಡವಿಟ್ಟುಕೊಂಡವರು ಒಳ್ಳೆಯ ಚಿತ್ರ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ತಂಡ ಹಾಳು ಮಾಡಿಕೊಳ್ಳಬೇಡಿ’ ಎಂಬ ಸಲಹೆ ಕೊಟ್ಟರು.
ನಟ ಸುಚೇಂದ್ರ ಪ್ರಸಾದ್ ನ್ಯಾಯಾಧೀಶರಾಗಿ ನಟಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ ಅಪೂರ್ವ, ದೀಪಾ ಜಗದೀಶ್, ಡ್ರಾಮಾ ಜ್ಯೂನಿಯರ್ ಖ್ಯಾತಿಯ ಪುಟ್ಟರಾಜು ಮತ್ತು ಮಹೇಂದ್ರಪ್ರಸಾದ್ ನಟಿ ಸಿದ್ದು ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ವೀರ ಸಮರ್ಥ್ಸಂ ಗೀತ ನೀಡಿದ್ದಾರೆ.