ವಿಮರ್ಶಕ ಗಿರಡ್ಡಿ ಗೋವಿಂದರಾಜು ಅವರು ಕನ್ನಡ ಸಾಹಿತ್ಯ ಲೋಕದ ಮರೆಯಲಾಗದ ಚೇತನ. ಆರಂಭದಲ್ಲಿ ಕಾವ್ಯ, ಕತೆಗಳ ಜಾಡುಹಿಡಿದರೂ, ನಂತರದಲ್ಲಿ ಗಿರಡ್ಡಿಯವರು ಗಟ್ಟಿ ವಿಮರ್ಶೆಗಳನ್ನು ಕೊಡುತ್ತಲೇ ಕನ್ನಡ ಸಾಹಿತ್ಯ ಲೋಕವನ್ನು ಕಟ್ಟಿ, ಬೆಳೆಸಿದವರು. ಅವರೀಗ ನಮ್ಮೊಂದಿಗಿಲ್ಲ ಎನ್ನುವ ಸಂಗತಿಯನ್ನು ಅರಗಿಸಿಕೊಳ್ಳುವುದೂ ಕಷ್ಟ. “ಈ ಹೊತ್ತಿಗೆ’, ಸಾಹಿತಿ ಹಾಗೂ ಕಲಾವಿದರ ವೇದಿಕೆಯು “ನಮ್ಮೊಳಗಿನ ಗಿರಡ್ಡಿ’ ಎಂಬ ಸಂಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಿದೆ. ಗಿರಡ್ಡಿಯವರ ಒಡನಾಡಿಯಾಗಿದ್ದ ಚಂಪಾ ಅವರು ಉಪಸ್ಥಿತರಿರುತ್ತಾರೆ. ಡಾ. ವಿಜಯಾ, ಡಾ. ಕೆ. ಸತ್ಯನಾರಾಯಣ, ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಶ್ರೀನಿವಾಸ ಜಿ. ಕಪ್ಪಣ್ಣ ಅವರು ಗಿರಡ್ಡಿಯವರ ಕುರಿತು ಮಾತಾಡಲಿದ್ದಾರೆ.
ಯಾವಾಗ?: ಜೂನ್ 3, ಬೆಳಗ್ಗೆ 10.30
ಎಲ್ಲಿ?: ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ