Advertisement

FIFA 2022: ಎರಡೇ ಎರಡು ನಿಮಿಷಗಳಲ್ಲಿ ಮುಗಿಯಿತು ರೊನಾಲ್ಡೊ ಪತ್ರಿಕಾಗೋಷ್ಠಿ!

10:40 AM Nov 26, 2022 | Team Udayavani |

ದೋಹಾ: ಗುರುವಾರ ರಾತ್ರಿಯ ವಿಶ್ವಕಪ್ ಪಂದ್ಯದಲ್ಲಿ ಪೋರ್ಚುಗಲ್‌ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದಾಖಲೆ ನಿರ್ಮಿಸಿದ್ದು ಮಾತ್ರವಲ್ಲ, ತಂಡವನ್ನೂ ಗೆಲ್ಲಿಸಿದ್ದರು. ಇದಕ್ಕೂ ಮುನ್ನ ಅವರು ಬಹಳ ಬೇಸರದಲ್ಲಿದ್ದರು.

Advertisement

ಇಂಗ್ಲೆಂಡ್‌ನ‌ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡ ದೊಂದಿಗಿನ ಸಂಬಂಧವನ್ನು ದಿಢೀರನೆ ಕಡಿದುಕೊಂಡಿದ್ದರು. ಮಾತ್ರವಲ್ಲ ಆ ತಂಡದ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಗುರುವಾರ ತಡರಾತ್ರಿ ಘಾನಾ ವಿರುದ್ಧ ಗೆದ್ದ ಮೇಲೆ ಅವರೇ ಪಂದ್ಯಶ್ರೇಷ್ಠರಾಗಿ ಆಯ್ಕೆಯಾಗಿದ್ದರಿಂದ, ಪತ್ರಿಕಾಗೋಷ್ಠಿಗೆ ಹಾಜರಾಗಲೇಬೇಕಿತ್ತು.

ಇದನ್ನೂ ಓದಿ:ಸಿದ್ದು- ಡಿಕೆ ಮುಗಿಯದ ವೈಮನಸ್ಸು; ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಿದ್ದು ಬಣಕ್ಕೆ ಕಾಡುತ್ತಿದೆ ಅಭದ್ರತೆ

ಆದರೆ ಅವರು ಎರಡು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದರು. ಎರಡು ನಿಮಿಷ, 12 ಸೆಕೆಂಡ್‌ ಗಳಲ್ಲಿ ಗೋಷ್ಠಿಯೇ ಮುಗಿಯಿತು! ಹಾಗೆಯೇ ಎದ್ದೂ ಹೋದರು! ತಾವು ಮ್ಯಾಂಚೆಸ್ಟರ್‌ ಯುನೈಟೆಡ್‌ ಬಿಟ್ಟ ಕುರಿತು ಉಳಿದ ಆಟಗಾರರ ಬಳಿ ಕೇಳಬೇಡಿ ಎಂದೂ ಪತ್ರಕರ್ತರಿಗೆ ಸೂಚಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next