Advertisement

Euro 2024: ಕ್ರಿಸ್ಟಿಯಾನೊ ರೊನಾಲ್ಡೋಗೆ ಸೋಲಿನ ವಿದಾಯ

10:37 PM Jul 06, 2024 | Team Udayavani |

ಹ್ಯಾಂಬರ್ಗ್‌: ಪೆನಾಲ್ಟಿ ಶೂಟೌಟ್‌ನಲ್ಲಿ ಪೋರ್ಚುಗಲ್‌ ತಂಡವನ್ನು 5-3 ಅಂತರದಿಂದ ಮಣಿಸಿದ ಫ್ರಾನ್ಸ್‌ 2024ನೇ ಸಾಲಿನ ಯೂರೋ ಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದೆ.

Advertisement

ಇದು ಫ‌ುಟ್‌ಬಾಲ್‌ ಸ್ಟಾರ್‌ಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಕೈಲಿಯನ್‌ ಎಂಬಪೆ ನಡುವಿನ ಮುಖಾಮುಖೀಯಾಗಿತ್ತು. ಹಾಗೆಯೇ ರೊನಾಲ್ಡೊ ಅವರ ಕಟ್ಟಕಡೆಯ ಯುರೋ ಕಪ್‌ ಪಂದ್ಯವೂ ಆಯಿತು. ಅವರು ಕಣ್ಣೀರಿನೊಂದಿಗೆ ವಿದಾಯ ಹೇಳಿದರು. 39 ವರ್ಷದ ರೊನಾಲ್ಡೊ ಪಾಲಿಗೆ ಇದು ದಾಖಲೆಯ 6ನೇ ಯುರೋಪಿಯನ್‌ ಚಾಂಪಿಯನ್‌ ಆಗಿತ್ತೆಂಬುದು ವಿಶೇಷ.

ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲು ಬಾರಿಸುವಲ್ಲಿ ವಿಫ‌ಲವಾಗಿದ್ದವು. ಮೊದಲ ಅವಧಿಯಲ್ಲಿ ಎಂಬಪೆ ಗಾಯಾಳಾಗಿ ಹೊರಹೋದರೂ ಇದರ ಲಾಭವೆತ್ತಲು ಪೋರ್ಚುಗಲ್‌ ವಿಫ‌ಲವಾಯಿತು.

ಶೂಟೌಟ್‌ನಲ್ಲಿ ಫ್ರಾನ್ಸ್‌ನ ಎಲ್ಲರೂ ಗುರಿ ಸಾಧಿಸಿ ಐದಕ್ಕೆ ಐದೂ ಗೋಲು ಬಾರಿಸಿ ಮಿಂಚಿದರು. ಪೋರ್ಚುಗಲ್‌ನ ಮೊದಲ ಶೂಟೌಟ್‌ ಗೋಲು ರೊನಾಲ್ಡೊ ಅವರಿಂದಲೇ ದಾಖಲಾಯಿತು. 2ನೇ ಗೋಲು ಬರ್ನಾಡೊ ಹೊಡೆದರು. ಆದರೆ 3ನೇ ಅವಕಾಶದಲ್ಲಿ ಜೋ ಫೆಲಿಕ್ಸ್‌ ವಿಫ‌ಲರಾದದ್ದು ಪೋರ್ಚುಗಲ್‌ಗೆ ಹಿನ್ನಡೆಯಾಗಿ ಪರಿಣಮಿಸಿತು.

ಆತಿಥೇಯ ಜರ್ಮನಿ ಔಟ್‌:

Advertisement

ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಆತಿಥೇಯ ಜರ್ಮನಿಯನ್ನು ಸ್ಪೇನ್‌ 2-1ರಿಂದ ಸೋಲಿಸಿ ಮೆರೆದಾಡಿತು. ಹೆಚ್ಚುವರಿ ಅವಧಿಯಲ್ಲಿ ಫ‌ಲಿತಾಂಶ ದಾಖಲಾಯಿತು. ನಿಗದಿತ ವೇಳೆಯಲ್ಲಿ ಸ್ಕೋರ್‌ 1-1ರಿಂದ ಸಮನಾಗಿತ್ತು. 51ನೇ ನಿಮಿಷದಲ್ಲಿ ಸ್ಪೇನ್‌ ಡ್ಯಾನಿ ವೋಲ್ಮೊ, 89ನೇ ನಿಮಿಷದಲ್ಲಿ ಜರ್ಮನಿಯ ಫ್ಲೋರಿಯನ್‌ ಗೋಲು ಹೊಡೆದರು.

ಹೆಚ್ಚುವರಿ ಅವಧಿಯ ಕೊನೆಯ ನಿಮಿಷದಲ್ಲಿ ಸ್ಪೇನ್‌ನ ಡ್ಯಾನಿ ಕರ್ವಾಜಲ್‌ ಗೆಲುವಿನ ಗೋಲ್‌ ಸಿಡಿಸಿದರು. ಸೆಮಿಫೈನಲ್‌ನಲ್ಲಿ ಸ್ಪೇನ್‌-ಫ್ರಾನ್ಸ್‌ ಮುಖಾಮುಖೀ ಆಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next