Advertisement

ಕ್ಯಾಶಾ ಸಂಸ್ಥೆ ಹೊರ ತರಲಿದೆ ಕ್ರಿಪ್ಟೋ ಕರೆನ್ಸಿ : ಮುಂದಿನ ತಿಂಗಳೇ ವಹಿವಾಟು ಶುರು ಸಂಭವ

07:50 PM Jul 19, 2021 | Team Udayavani |

ನವದೆಹಲಿ: ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ವ್ಯವಹಾರಗಳಿಗೆ ಕಾನೂನಾತ್ಮಕ ಅನುಮೋದನೆ ಕೊಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಚಿಂತನೆ ನಡೆಸಿರುವಂತೆಯೇ, ಕ್ರಿಪ್ಟೋಕರೆನ್ಸಿ ವ್ಯವಹಾರಗಳನ್ನು ನಡೆಸುವ ಸಂಸ್ಥೆ “ಕ್ಯಾಶಾ’, ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಲು ನಿರ್ಧರಿಸಿದೆ. ಸಹಕಾರಿ ಬ್ಯಾಂಕ್‌ಗಳ ಸಹಯೋಗದೊಂದಿಗೆ ಭಾರತದಲ್ಲಿ ಮುಂದಿನ ತಿಂಗಳಿನಿಂದ ಕಾನೂನುಬದ್ಧ ಕ್ರಿಪ್ಟೋಕರೆನ್ಸಿ ವ್ಯವಹಾರಗಳನ್ನು ನಡೆಸಲು ಸಂಸ್ಥೆ ಉದ್ದೇಶಿಸಿದೆ.

Advertisement

ಕ್ಯಾಶಾ ಸಂಸ್ಥೆ, ತನ್ಮೂಲಕ “ಯೂನಿಕಾಸ್‌’ ಎಂಬ ವಿಶ್ವದ ಮೊಟ್ಟಮೊದಲ ಕ್ರಿಪ್ಟೋ ಕರೆನ್ಸಿ ಬ್ಯಾಂಕೊಂದನ್ನು ಆರಂಭಿಸಿದೆ. ಈ ಬ್ಯಾಂಕ್‌ನ ಶಾಖೆಗಳನ್ನು ಭಾರತದಲ್ಲೂ ತೆರೆಯಲು ನಿರ್ಧರಿಸಿರುವುದಾಗಿ ಕ್ಯಾಶಾದ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಕ ಕುಮಾರ್‌ ಗೌರವ್‌ ತಿಳಿಸಿದ್ದಾರೆ. ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಯುನೈಟೆಡ್‌ ಮಲ್ಟಿಸ್ಟೇಟ್‌ ಕ್ರೆಡಿಟ್‌ ಕೊ-ಆಪರೇಟಿವ್‌ ಸೊಸೈಟಿ ಮೂಲಕವೇ ಭಾರತದಲ್ಲಿ ವ್ಯವಹಾರ ನಡೆಸುವ ಯೋಜನೆ ಹೊಂದಿದ್ದೇವೆ. ಸದ್ಯದಲ್ಲಿಯೇ ಕ್ರಿಪ್ಟೋ ಕರೆನ್ಸಿ ಕುರಿತ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವ ಸಾಧ್ಯತೆಯಿದೆ. ಅದನ್ನು ನೋಡಿಕೊಂಡು ಮುಂದುವರಿಯುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ :ಪ್ರತಿ ವರ್ಷ ತಲಕಾಡು ಗಂಗರ ಉತ್ಸವ ಆಯೋಜಿಸುತ್ತೇವೆ : ಸಚಿವ ಸಿ‌.ಪಿ.ಯೋಗೇಶ್ವರ್

ಭಾರತದಲ್ಲಿ ಯೂನಿಕಾಸ್‌ ಸಂಸ್ಥೆಯ ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅನುಮತಿ ಪಡೆಯಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈಗಾಗಲೇ ರಿಜಿಸ್ಟ್ರಾರ್‌ ಆಫ್ ಸೊಸೈಟಿಸ್‌ ಅಡಿಯಲ್ಲಿ “ಯುನೈಟೆಡ್‌ ಮಲ್ಟಿಸ್ಟೇಟ್‌ ಕ್ರೆಡಿಟ್‌ ಕೊ-ಆಪರೇಟಿವ್‌ ಸೊಸೈಟಿ’ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ಕ್ರೆಡಿಟ್‌ ಕೊ-ಆಪರೇಟಿವ್‌ ಸಂಸ್ಥೆಗಳ ಕಾರ್ಯವೈಖರಿ, ಬ್ಯಾಂಕುಗಳ ಕಾರ್ಯವೈಖರಿಗಿಂತ ಭಿನ್ನ. ಹಾಗಾಗಿ, ಆರ್‌ಬಿಐನ ಪ್ರತ್ಯೇಕ ಅನುಮತಿ ಬೇಕಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next