ಪಣಜಿ: ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ನೇತೃತ್ವದ ಬಿಜೆಪಿ ಸರ್ಕಾರವು ಕ್ರಿಮಿನಲ್ ಮಾಫಿಯಾಗಳನ್ನು ಪ್ರೋತ್ಸಾಹಿಸಿದ್ದರಿಂದ ಗೋವಾ ಅಪರಾಧಗಳ ತಾಣವಾಗಿದೆ. ವಾಸ್ಕೋದ ಎಂಇಎಸ್ ಕಾಲೇಜು ಬಳಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರುವುದು ರಾಜ್ಯದಲ್ಲಿನ ಅಪಾಯಕಾರಿ ಮಟ್ಟದ ಅಪರಾಧದ ಸೂಚನೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಟೀಕಿಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಜುವಾರಿನಗರದ ಬಂಗಲೆಯ ಶಸ್ತ್ರಸಜ್ಜಿತ ದರೋಡೆ ಮತ್ತು ಲೋಟಲಿಯಲ್ಲಿ ವೃದ್ಧೆಯೊಬ್ಬರ ಚಿನ್ನಾಭರಣ ದೋಚಿದ ಪ್ರಕರಣದ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಲೆಮಾವೊ, ನಾಗರಿಕರಿಗೆ ಭದ್ರತೆ ಒದಗಿಸಲು ಸರ್ಕಾರ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರ ಮೇಲೆ ಗುಂಡು ಹಾರಿಸಿ ವಯೋವೃದ್ಧರಿಂದ ಚಿನ್ನ ದೋಚುತ್ತಿರುವ ಕಳ್ಳರು ಬೆನ್ನೆಲುಬು ಇಲ್ಲದ ತಂಡವಾಗಿ ಪೊಲೀಸ್ ಇಲಾಖೆ ಮಾರ್ಪಟ್ಟಿದೆ. ಅಪರಾಧಿಗಳಿಗೆ ಕಾನೂನಿನ ಭಯವಿಲ್ಲ. ಗೋವಾದಲ್ಲಿ ಬದಲಾಗುತ್ತಿರುವ ಅಪರಾಧಿಗಳ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರಿಗೆ ಅತ್ಯಾಧುನಿಕ ಉಪಕರಣಗಳು ಮತ್ತು ವಾಹನಗಳನ್ನು ಒದಗಿಸುವ ಅಗತ್ಯವಿದೆ ಎಂದು ಅಲೆಮಾವೊ ಹೇಳಿದರು.
ಬಿಜೆಪಿ ಸರ್ಕಾರವು ಘಟನೆಗಳು ಮತ್ತು ಮಿಷನ್ ಟೋಟಲ್ ಕಮಿಷನ್ಗೆ ವ್ಯಸನಿಯಾಗಿದೆ. ಜನರ ಸಮಸ್ಯೆಗಳತ್ತ ಗಮನಹರಿಸಲು ಅವರಿಗೆ ಸಮಯವಿಲ್ಲ. ಸಂವೇದನಾ ರಹಿತ, ಬೇಜವಾಬ್ದಾರಿ, ಭ್ರಷ್ಟ ಬಿಜೆಪಿಗೆ ಗೋವಾದ ಜನತೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಹೇಳಿದರು.
Related Articles
ಇದನ್ನೂ ಓದಿ: Chikkamagaluru: ಅಪಘಾತದಲ್ಲಿ NSG ಕಮಾಂಡೋ ಮೃತ್ಯು