Advertisement

ವೈವಾಹಿಕ ಅತ್ಯಾಚಾ*ರ ಅಪರಾಧ: ಕೇಂದ್ರ ಸರಕಾರದಿಂದ ವಿರೋಧ

02:16 AM Oct 04, 2024 | Team Udayavani |

ಹೊಸದಿಲ್ಲಿ: ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವುದನ್ನು ಕೇಂದ್ರ ಸರಕಾರ ವಿರೋಧಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಗೃಹ ಸಚಿವಾಲಯ ಅಫಿದವಿತ್‌ ಸಲ್ಲಿಸಿದೆ.

Advertisement

ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಶಿಕ್ಷೆಗಳಿರುವಾಗ ಅದನ್ನು ಅಪರಾಧೀ ಕರಣಗೊಳಿಸುವುದು ಅಗತ್ಯವಿಲ್ಲ. ಇದು ಸುಪ್ರೀಂ ಕೋರ್ಟ್‌ ವ್ಯಾಪ್ತಿಗೆ ಬರುವುದಿಲ್ಲ ಎಂದಿರುವ ಕೇಂದ್ರ ಸರಕಾರವು, ವೈವಾಹಿಕ ಅತ್ಯಾಚಾರವು ಕಾನೂನು ವಿಷಯ ಎಂಬುದಕ್ಕಿಂತಲೂ ಹೆಚ್ಚು ಸಾಮಾಜಿಕ ವಿಷಯವಾಗಿದೆ. ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸಿದರೆ ಅದು ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸಂಬಂಧಿಸಿದ ಎಲ್ಲರೊಂದಿಗೆ ಚರ್ಚಿಸದೆ, ಎಲ್ಲ ರಾಜ್ಯಗಳ ಅಭಿಪ್ರಾಯಗಳನ್ನು ಪರಿಗಣಿಸದೆ ವೈವಾಹಿಕ ಅತ್ಯಾಚಾರ ಕುರಿತು ನಿರ್ಧರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸ್ಪಷ್ಟವಾಗಿ ಹೇಳಿದೆ.

ದಾಂಪತ್ಯದಲ್ಲಿ ಸಂಗಾತಿಯಿಂದ ಸರಿಯಾದ ಲೈಂಗಿಕ ನಿರಂತರ ಸಂಬಂಧ ನಿರೀಕ್ಷೆ ಸಹಜ. ಆದರೆ ಅಂತಹ ನಿರೀಕ್ಷೆಗಳು ಪತಿಗೆ ತನ್ನ ಹೆಂಡತಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುವ ಹಕ್ಕನ್ನು ನೀಡುವುದಿಲ್ಲ. ಅಂತಹ ಕೃತ್ಯಕ್ಕಾಗಿ ಅತ್ಯಾಚಾರ-ವಿರೋಧಿ ಕಾನೂನುಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಶಿಕ್ಷಿಸುವುದು ವಿಪರೀತ ಮತ್ತು ಅಸಮಂಜಸ ಎನಿಸಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮಹಿಳೆಗೆ ಕೌಟುಂಬಿಕ ಹಿಂಸಾಚಾರ ತಡೆ ಕಾಯ್ದೆಯು ರಕ್ಷಣೆ ಒದಗಿಸುತ್ತದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next