ನವ ನಾಯಕ ಮಹೇಶ್ ಅಭಿನಯದ “ಕ್ರಿಮಿನಲ್’ ಚಿತ್ರದ ಫಸ್ಟ್‌ಲುಕ್ ಹೊರಕ್ಕೆ ಬಂದಿದೆ. ಮಿಸ್ಟರಿ-ಥ್ರಿಲ್ಲರ್ ಕಥಾಹಂದರ ಹೊಂದಿರುವ ಪ್ಯಾನ್ ಇಂಡಿಯಾ ಚಿತ್ರವಾದ “ಕ್ರಿಮಿನಲ್’ನ ಫಸ್ಟ್‌ಲುಕ್ ಅನ್ನು ತಮಿಳು ನಟ ವಿಜಯ್ ಸೇತುಪತಿ ಬಿಡುಗಡೆಗೊಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಕಾಲೈಪುಲ್ಲಿ ಎಸ್. ತನು ಅವರಿಂದ ಚಿತ್ರತಂಡ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿಸಿದ್ದ ಚಿತ್ರತಂಡ, ಇದೀಗ ಸೌತ್ ಸಿನಿ ದುನಿಯಾದ ಖ್ಯಾತ ನಟ ವಿಜಯ್ ಸೇತುಪತಿಯಿಂದ “ಕ್ರಿಮಿನಲ್’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಿಸಿದೆ. ನಟ ವಿಜಯ್ ಸೇತುಪತಿ ತಮ್ಮ ಟ್ವಿಟರ್ ಮೂಲಕ “ಕ್ರಿಮಿನಲ್’ ಚಿತ್ರದ ಹೀರೋ ಫಸ್ಟ್‌ಲುಕ್ ರಿವೀಲ್ ಮಾಡಿದ್ದಾರೆ.
ಇನ್ನು “ಕ್ರಿಮಿನಲ್’ ಚಿತ್ರಕ್ಕೆ ಆರ್ಮುಗಂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕಿರಣ್ ದೊರ್ನಾಲ ಛಾಯಾಗ್ರಹಣ, ಪವನ್ ಗೌಡ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಆಪಲ್ ಪೈನಾಪಲ್ ಸಂಗೀತ ನಿರ್ದೇಶನವಿದೆ.
ಸದ್ಯ “ಕ್ರಿಮಿನಲ್’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. “ಕ್ರಿಮಿನಲ್’ ಚಿತ್ರದಲ್ಲಿ ಮಹೇಶ್‌ಗೆ ನಾಯಕಿಯರಾಗಿ ಜಾನ್ವಿ ಹಾಗೂ ಫೆಸ್ಸಿ ಮಹೇಶ್ ಜೋಡಿಯಾಗಿ ತೆರೆ ಹಂಚಿಕೊಂಡಿದ್ದಾರೆ.
“ಕಮಲ ಆರ್ಟ್ಸ್’ ಬ್ಯಾನರ್‌ನಡಿ ಚಿತ್ರ ನಿರ್ಮಾಣವಾಗಿದ್ದು, ಇದೇ ಡಿಸೆಂಬರ್ ಕೊನೆ ಅಥವಾ ಜನವರಿಯಲ್ಲಿ “ಕ್ರಿಮಿನಲ್’ ಅನ್ನು ತೆರೆಗೆ ತರಲು ಚಿತ್ರತಂಡ ಸಿದ್ದತೆ ಮಾಡಿಕೊಳ್ಳುತ್ತಿದೆ.