Advertisement

ಸೌಲಭ್ಯ ತಲುಪಿಸದಿದ್ದರೆ ಕ್ರಿಮಿನಲ್ ಕೇಸ್‌

05:55 PM Aug 11, 2019 | Suhan S |

ಪಾವಗಡ: ಅಂಗವಿಕಲರಿಗೆ ಸೌಲಭ್ಯ ತಲುಪಿಸದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ರಾಜ್ಯ ಅಂಗವಿಕಲ ಇಲಾಖೆ ಆಯುಕ್ತ ಬಸವ ರಾಜು ಎಚ್ಚರಿಸಿದರು. ಅಂಗವಿಕಲ ಸೌಲಭ್ಯಗಳ ಅನುಷ್ಠಾನ ಕುರಿತು ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಆಯೋಜಿ ಸಿದ್ದ ತುಮಕೂರು, ಚಿತ್ರದುರ್ಗ ಜಿಲ್ಲೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

Advertisement

ಅಂಗವಿಕಲ ಮಕ್ಕಳ ಭವಿಷ್ಯ ಹಾಳು ಮಾಡುತ್ತ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿ ದ್ದಾರೆ. 14ನೇ ಹಣಕಾಸು ಯೋಜನೆಯಡಿ ಅಂಗವಿಕಲರಿಗೆ ನೀಡುವ ಶೇ.5 ಅನುದಾನ ಜಾರಿಗೊಳಿಸಬೇಕು. ಶಾಸಕರು ಮತ್ತು ಸಂಸ ದರ ನಿಧಿ ಬಳಸಿ ಸೌಲಭ್ಯ ಕೊಡಬೇಕು. ಪೊಲೀಸ್‌ ಠಾಣೆ, ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಅಂಗ ವಿಕಲರಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಮಾಡ ಬೇಕು ಎಂದು ತಾಕೀತು ಮಾಡಿದರು.

ಅಂಗವಿಕಲರಿಗೆ ಬಸ್‌ಪಾಸ್‌ ನೀಡುವಲ್ಲಿ ವಿಳಂಬವಾಗುತ್ತಿದೆ. ಪಾವಗಡ ತಾಲೂಕಿನ ಅಂಗವಿಕಲರು ಬಸ್‌ಪಾಸ್‌ ಮಾಡಿಸಲು ತುಮಕೂರು ಡಿಪೋ, ಚಿತ್ರದುರ್ಗ ಡಿಪೋಗೆ ಹೋಗಬೇಕು ಎಂದು ಅಂಗವಿಕಲ ಒಕ್ಕೂಟದ ಉಪಾಧ್ಯಕ್ಷ ಚಂದ್ರ ಶೇಖರ್‌ ದೂರಿದರು. ಇದಕ್ಕುತ್ತರಿಸಿದ ಆಯುಕ್ತ ಅಂಗವಿಕಲರ ಅಲೆ ದಾಡಿಸದೆ ವ್ಯವಸ್ಥೆ ಮಾಡಿ ಎಂದು ರಸ್ತೆ ಸಾರಿಗೆ ನಿಗಮದ ಅಧಿಕಾರಿಗೆ ಸೂಚನೆ ನೀಡಿದರು. ಜಿಲ್ಲಾ ಶಿಶುಭಿವೃದ್ಧಿ ಯೋಜನಾಧಿಕಾರಿ ನಟರಾಜ್‌ ಮಾತನಾಡಿ, ಚಿಕ್ಕವಯಸ್ಸಿನಿಂದಲೇ ಅಂಗವಿಕಲರಿಗೆ ಸೂಕ್ತ ಚಿಕಿತ್ಸೆ ನೀಡಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ರಮೇಶ್‌, ಮಧುಗಿರಿ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್‌ ವರದರಾಜು, ಇಒ ನರಸಿಂಹಮೂರ್ತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next