ಮೈಸೂರು: ಕೋವಿಡ್ ನಿಯಮ ಉಲ್ಲಂಘನೆಮಾಡಿ ದಂಡ ಕಟ್ಟಿ ಸುಮ್ಮನಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ.ಹೀಗಾಗಿ ಪದೇ ಪದೆ ಮಾಸ್ಕ್ ಹಾಕದೆ ದಂಡ ಕಟ್ಟುತ್ತಿದ್ದರೆಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ಮೈಸೂರುಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹಾಗೂಡಿಸಿಪಿ ಗೀತಾ ಪ್ರಸನ್ನ ಅವರು ಸಿಟಿ ರೌಂಡ್ಸ್ ಹಾಕಿದ್ದಾರೆ.ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರಕಠಿಣ ನಿಯಮ ಜಾರಿಗೊಳಿಸಿದ್ದು, ಇಂದಿನಿಂದ ನಿಯಮಗಳುಜಾರಿಗೆ ಬರಲಿವೆ. ಮೈಸೂರಿನಲ್ಲಿ ಕೋವಿಡ್ ನಿಯಮಉಲ್ಲಂಘನೆ ಪ್ರಕರಣ ದಾಖಲಿಸಲು ಪಾಲಿಕೆ ಟೀಂ ಫೀಲ್ಡಿಗಿಳಿಯಲಿದ್ದಾರೆ.
ಬುಧವಾರ ಮಧ್ಯಾಹ್ನದಿಂದ ಪಾಲಿಕೆಹಾಗೂ ಪೋಲಿಸ್ ಇಲಾಖೆಯಿಂದ ಜಂಟಿ ಕಾರ್ಯಾಚರಣೆನಡೆಸಲಾಗಿದೆ. ಪಾಲಿಕೆ ತಂಡ ನಗರ ಪಾಲಿಕೆ ವ್ಯಾಪ್ತಿಯಲ್ಲಿಪರಿಸ್ಥಿತಿ ಅವಲೋಕಿಸಲಿದ್ದು, ಸರ್ಕಾರದ ಮಾರ್ಗಸೂಚಿಅನುಸರಿಸದವರಿಗೆ ದಂಡ ಹಾಕಲಿದೆ. ಇದೇ ವೇಳೆ ಕೋವಿಡ್‌ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ವರ್ತಕರಿಗೆ ಪಾಲಿಕೆತಂಡ ಖಡಕ್ ವಾರ್ನಿಂಗ್ ನೀಡಿದೆ.
ಲಿಸಿಕಾಭಿಯಾನ: ಮಂಗಳವಾರ 699 ಪ್ರಕರಣದಾಖಲಾಗಿದ್ದು, ಅದರಲ್ಲಿ ನಗರ ಪ್ರದೇಶಕ್ಕೆ 400 ಪ್ರಕರಣ ಇವೆ.ನಾಲ್ವರು ಮೃತಪಟ್ಟಿದ್ದಾರೆ. ನಿತ್ಯ 45ರ ಮೇಲ್ಪಟ್ಟವರಿಗೆ ಲಸಿಕೆನೀಡಲಾಗುತ್ತಿದ್ದು, ಮೇ 1ರಿಂದ 18ವರ್ಷದ ಮೇಲ್ಪಟ್ಟವರಿಗೆಲಸಿಕಾಭಿಯಾನ ಆರಂಭವಾಗಲಿದೆ.
ಸಿಬ್ಬಂದಿಯೊಂದಿಗೆ ಅಧಿಕಾರಿಗಳು ಸಹ ಆಗಾಗ್ಗೆ ಖುದ್ದುವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.ನಿಯಮ ಉಲ್ಲಂಘನೆ ಕಂಡು ಬಂದರೆ ಸ್ಥಳದಲ್ಲೇ ದಂಡವಿಧಿಸಲಾಗುವುದು ಎಂದು ಶಿಲ್ಪಾನಾಗ್ ತಿಳಿಸಿದರು.ಅಂಗಡಿ ಮುಂಗಟ್ಟುಗಳ ಬಳಿ ಜನಸಂದಣಿ ಇರುವಪ್ರದೇಶಗಳಿಗೆ ತೆರಳಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರಕಾಯ್ದುಕೊಳ್ಳಿ ಎಂದು ಸಾರ್ವಜನಿಕರಿಗೆ ತಿಳಿಸಿ ಹೇಳಿದರಲ್ಲದೆ,ಮಳಿಗೆಗಳ ಮಾಲಿಕರಿಗೂ ಎಚ್ಚರಿಕೆ ನೀಡಿದರು.
ಸಾಮಾಜಿಕಅಂತರ ಕಾಯ್ದುಕೊಳ್ಳದೆ ನಿಮ್ಮ ನಿಮ್ಮ ಮಳಿಗೆಗಳ ಮುಂದೆಜನರನ್ನು ಬಿಟ್ಟುಕೊಂಡಲ್ಲಿ ದಂಡ ವಿಧಿಸುವುದಾಗಿಎಚ್ಚರಿಸಿದರು. ಮಳಿಗೆಗೆ ಬರುವ ಪ್ರತಿಯೊಬ್ಬರೂ ಮಾಸ್ಕ್ಧರಿಸುವುದು ಅಗತ್ಯ ಎಂಬುದನ್ನು ತಿಳಿಸಿ ಹೇಳುವಂತೆಮಾಲೀಕರಿಗೆ ತಿಳಿಸಿದರು.ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ,ಆರೋಗ್ಯಾಧಿಕಾರಿ ಡಾ.ನಾಗರಾಜ ಇತರರು ಇದ್ದರು.