ತಿರುವನಂತಪುರ : ಶೇಕಡಾ ನೂರು ಸಾಕ್ಷರತೆ ಹೊಂದಿರುವ ಹೆಗ್ಗಳಿಕೆ ಇರುವ ಕೇರಳದಲ್ಲಿ ಕಳೆದ ಒಂದು ದಶಕದಲ್ಲಿ ಒಟ್ಟು 16,755 ರೇಪ್ ಕೇಸುಗಳು ವರದಿಯಾಗಿವೆ.
ಈ ರೇಪ್ ಕೇಸ್‌ಗಳಲ್ಲಿ 11,325 ಕೇಸುಗಳು ಮಹಿಳೆಯರಿಗೆ ಸಂಬಂಧಿಸಿದ್ದಾಗಿದೆ; 5,430 ಮಕ್ಕಳಿಗೆ ಸಂಬಂಧಿಸಿದ್ದಾಗಿದೆ. ಈ ರೇಪ್ ಕೇಸುಗಳು 2007ರಿಂದ 2017ರ ಜುಲೈ ವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ನಡೆದದ್ದಾಗಿವೆ.
ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಹೇಳುವುದಾದರೆ ಈ ವರ್ಷ ಮೊದಲ ಒಂಬತ್ತು ತಿಂಗಳಲ್ಲಿ ಕೇರಳ ಪೊಲೀಸರು 1,475 ರೇಪ್ ಕೇಸ್‌ಗಳನ್ನು ದಾಖಲಿಸಿಕೊಂಡಿದ್ದಾರೆ.
2016ರ ಜನವರಿಂದ ಡಿಸೆಂಬರ್ ವರೆಗಿನ 12 ತಿಂಗಳ ಅವಧಿಯಲ್ಲಿ ಕೇರಳದಲ್ಲಿ 1,656 ರೇಪ್ ಕೇಸ್‌ಗಳು ವರದಿಯಾಗಿದ್ದವು. ರೇಪ್ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿರುವುದು ಕೂಡ ಗಂಭೀರ ಕಳವಳದ ಸಂಗತಿಯಾಗಿದೆ.
2007ರಲ್ಲಿ 500, 2008ರಲ್ಲಿ 548, 2009ರಲ್ಲಿ 554, 2010ರಲ್ಲಿ 617, 2011ರಲ್ಲಿ 1,132, 2012ರಲ್ಲಿ 1,019, 2.013ರಲ್ಲಿ 1,221, 2014ರಲ್ಲಿ 1,374, 2015ರಲ್ಲಿ 1,256 , 2016ರಲ್ಲಿ 1,656 ಮತ್ತು 2017ರಲ್ಲಿ ಸೆಪ್ಟಂಬರ್ ವರೆಗೆ 1,475 ರೇಪ್ ಕೇಸ್‌ಗಳು ದಾಖಲಾಗಿವೆ.