Advertisement

ಉಡುಪಿ: ಎಟಿಎಂ ಕಾರ್ಡ್‌ ಎಗರಿಸಿ ಲಕ್ಷಾಂತರ ರೂ. ಲೂಟಿ

12:28 AM Oct 16, 2022 | Team Udayavani |

ಉಡುಪಿ: ವ್ಯಕ್ತಿಯೊಬ್ಬರ ಎಟಿಎಂ ಕಾರ್ಡ್‌ ಎಗರಿಸಿ ಲಕ್ಷಾಂತರ ರೂ. ದೋಚಿದ ಘಟನೆ ಉಡುಪಿಯಲ್ಲಿ ನಡೆದಿದೆ.

Advertisement

ಬನ್ನಂಜೆಯ ಎಂ. ಬಾಲಕೃಷ್ಣ ನಾಯಕ್‌ ಅವರು ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದರು. ಜೂ. 5ರಂದು ಅವರ ಪತ್ನಿಯ ಮರಣದ ಬಳಿಕ ಬನ್ನಂಜೆಯ ಹರಿದರ್ಶನ ಎಂಬ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಈ ಕಾರಣದಿಂದ ಸರಕಾರಿ ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್‌ ಆಗಿ ಕೆಲಸ ಮಾಡಿಕೊಂಡಿದ್ದ ಹಾವೇರಿ ಜಿಲ್ಲೆಯ ರಮೇಶ್‌ ಮತ್ತು ಆತನ ಪತ್ನಿಗೆ ಮನೆಯಲ್ಲಿ ಉಚಿತ ರೂಂ ನೀಡಿ ವಾಸಕ್ಕೆ ವ್ಯವಸ್ಥೆ ಮಾಡಿದ್ದರು.

2 ಚಿನ್ನದ ಉಂಗುರ ನಾಪತ್ತೆ
ಜು. 4ರಿಂದ ಅ.10ರ ನಡುವೆ ಆರೋಪಿ ರಮೇಶನು ಬಾಲಕೃಷ್ಣ ನಾಯಕ್‌ ಅವರ ಎಟಿಎಂ ಕಾರ್ಡ್‌ ಹಾಗೂ ಮೊಬೈಲ್‌ ಒಟಿಪಿ ಬಳಸಿಕೊಂಡು ಬೇರೆ ಬೇರೆ ದಿನಗಳಲ್ಲಿ ವಿವಿಧ ಎಟಿಎಂಗಳಿಂದ ಒಟ್ಟು 9,75,500 ರೂ. ಡ್ರಾ ಮಾಡಿ ವಂಚಿಸಿದ್ದಾನೆ. ಜತೆಗೆ ಅವರ ಮನೆಯಲ್ಲಿ 2 ಚಿನ್ನದ ಉಂಗುರಗಳು ನಾಪತ್ತೆಯಾಗಿದ್ದು, ಇವುಗಳನ್ನೂ ಸಹ ಆರೋಪಿ ತೆಗೆದುಕೊಂಡು ಹೋಗಿರುವ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.