Advertisement
ಪ್ರಕರಣದ ವಿವರಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2015ರಲ್ಲಿ ಈ ಘಟನೆ ನಡೆದಿದ್ದು, ಹೊಟೇಲ್‌ನಲ್ಲಿ ಉದ್ಯೋಗಿಯಾಗಿದ್ದ ಕಿಶನ್ (27) ಅಪ್ರಾಪ್ತೆಯನ್ನು ಕಾಲೇಜು ಮುಗಿಸಿ ಮನೆಗೆ ತೆರಳುವಾಗ ಅಡ್ಡಗಟ್ಟಿ ಆಕೆಯನ್ನು ಪ್ರೀತಿಸುವುದಾಗಿ ಬಲವಂತದಿಂದ ಕೈ ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಿದ್ದ. ಇದಾದ ಬಳಿಕ ಆಕೆಯ ಸಹೋದರಿಯನ್ನು ಕೂಡ ಅಡ್ಡಗಟ್ಟಿದ್ದು ಆಕೆ ಆತನಿಂದ ತಪ್ಪಿಸಿಕೊಂಡಿದ್ದಳು. ಈ ಘಟನೆ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪಿಎಸ್‌ಐ ಕಬ್ಟಾಳರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಮೊದಲಿಗೆ ಕುಂದಾಪುರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು 2019ರಲ್ಲಿ ಉಡುಪಿಯಲ್ಲಿ ಪೋಕೊÕà ವಿಶೇಷ ನ್ಯಾಯಾಲಯ ಸ್ಥಾಪಿತವಾದ ಬಳಿಕ ಇಲ್ಲಿಯೇ ವಿಚಾರಣೆ ಮುಂದುವರಿದಿತ್ತು. ನ್ಯಾಯಾಲಯದಲ್ಲಿ ಒಟ್ಟು 12 ಸಾಕ್ಷಿಗಳ ಪೈಕಿ 10 ಮಂದಿಯ ವಿಚಾರಣೆ ನಡೆದಿದ್ದು ಸಂತ್ರಸ್ತರಿಬ್ಬರ ಸಾಕ್ಷಿ ಅಭಿಯೋಜನೆಗೆ ಪೂರಕವಾಗಿದ್ದ ಹಿನ್ನೆಲೆ ಈತನೇ ದೋಷಿ ಎಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.