Advertisement

Crime News;ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

10:09 PM Mar 02, 2024 | Team Udayavani |

15.15 ಲಕ್ಷ ರೂ. ಕಾಳಧನ ವಶಕ್ಕೆ
ಕಾಸರಗೋಡು: ಕಾಸರಗೋಡು ಪೊಲೀಸರು ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲೆ ಪತ್ರಗಳಿಲ್ಲದೆ ಸಾಗಿಸುತ್ತಿದ್ದ 15.15 ಲಕ್ಷ ರೂ. ಕಾಳಧನವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

Advertisement

ಈ ಸಂಬಂಧ ಅಂಗಡಿಮೊಗರು ಕಂಬಾರಿನ ಮೊಹಮ್ಮದ್‌ ಹುನೈಸ್‌ನನ್ನು ವಶಕ್ಕೆ ಪಡೆದು, ಹೇಳಿಕೆ ದಾಖಲಿಸಿಕೊಂಡು ಬಿಡುಗಡೆ ಮಾಡಲಾಗಿದೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಸರಗೋಡಿಗೆ ಕಾಳಧನ ಹರಿದು ಬರುತ್ತಿರುವುದನ್ನು ಪೊಲೀಸರು ಹಾಗೂ ಚುನಾವಣ ಆಯೋಗ ಗಂಭೀರವಾಗಿ ಪರಿಗಣಿಸಿದೆ.

13 ಕ್ವಿಂಟಾಲ್‌ ಅಡಿಕೆ ಕಳವು
ಕಾಸರಗೋಡು: ಕಾಟಂಬಳ್ಳಿಯ ಕೆ. ನಾರಾಯಣನ್‌ ನಾಯರ್‌ ಅವರ ಮನೆ ಸಮೀಪದ ಗೋದಾಮಿನಲ್ಲಿ ಗೋಣಿಯಲ್ಲಿ ತುಂಬಿಸಿಡಲಾಗಿದ್ದ 13 ಕ್ವಿಂಟಾಲ್‌ ಸುಲಿದ ಅಡಿಕೆಯನ್ನು ಕಳವು ಮಾಡಲಾಗಿದೆ. ಅಡಿಕೆಯ ಮೌಲ್ಯ ಸುಮಾರು 4 ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಸ್ಸಿನಲ್ಲಿ ಏಕಾಂಗಿ ಬಾಲಕ ಪತ್ತೆ:
ಹೆತ್ತವರಿಗೆ ಒಪ್ಪಿಸಿದ ಪೊಲೀಸರು
ಉಪ್ಪಳ: ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್ಸಿನಲ್ಲಿ ಏಳರ ಹರೆಯದ ಬಾಲಕನೋರ್ವ ಏಕಾಂಗಿಯಾಗಿ ಪತ್ತೆಯಾಗಿದ್ದು, ಈತನನ್ನು ಸಹಪ್ರಯಾಣಿಕರು ಉಪ್ಪಳದಲ್ಲಿರುವ ಪೊಲೀಸ್‌ ಕಂಟ್ರೋಲ್‌ ರೂಂಗೆ ಒಪ್ಪಿಸಿದ್ದಾರೆ.

Advertisement

ಬಾಲಕನನ್ನು ಮಂಜೇಶ್ವರ ಪೊಲೀಸರು ವಿಚಾರಿಸಿದ್ದು, ಈತ ಉಳ್ಳಾಲ ಬಳಿಯ ಮಂಜಿಲ ನಿವಾಸಿಯೆಂದು ತಿಳಿದು ಬಂತು. ಬಳಿಕ ಆತನ ಹೆತ್ತವರನ್ನು ಪತ್ತೆಹಚ್ಚಿ ಅವರಿಗೆ ಒಪ್ಪಿಸಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next