Advertisement

ಕೋಟ: ಸರಣಿ ಅಪಘಾತ; ಚಾಲಕರಿಬ್ಬರಿಗೆ ಗಾಯ

01:15 AM Oct 13, 2022 | Team Udayavani |

ಕೋಟ: ಕೋಟ ಅಮೃತೇಶ್ವರೀ ದೇಗುಲದ ಜಂಕ್ಷನ್‌ನಲ್ಲಿ ಬೊಲೆರೋ ವಾಹನ ಮತ್ತು ರಿಕ್ಷಾಗಳ ನಡುವೆ ಬುಧವಾರ ಬೆಳಗ್ಗೆ ಸಂಭವಿಸಿದ ಸರಣಿ ಅಪಘಾತದಲ್ಲಿ ರಿಕ್ಷಾ ಚಾಲಕರಿಬ್ಬರು ಗಾಯಗೊಂಡಿದ್ದಾರೆ.

Advertisement

ಜಂಕ್ಷನ್‌ನಲ್ಲಿ ಆಟೋ ರಿಕ್ಷಾ ಗಳೆರಡು ರಸ್ತೆ ಕ್ರಾಸ್‌ ಮಾಡುತ್ತಿದ್ದ ಸಂದರ್ಭ ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬೊಲೆರೋ ಪಿಕಪ್‌ ವಾಹನವು ಆಟೋ ರಿಕ್ಷಾಗಳಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.

ಅಪಘಾತದಲ್ಲಿ ಆಟೋ ಚಾಲಕರಿಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ತತ್‌ಕ್ಷಣ ಕೋಟ ಜೀವನ್‌ ಮಿತ್ರ ಆ್ಯಂಬುಲೆನ್ಸ್‌ ನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸ ಲಾಯಿತು.

ಅಪಘಾತದಿಂದಾಗಿ ಸ್ವಲ್ಪ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಕೋಟ ಠಾಣಾಧಿಕಾರಿ ಮಧು ಬಿ. ಮತ್ತು ಸಿಬಂದಿ ಸ್ಥಳಕ್ಕಾಗಮಿಸಿ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅಪಾಯಕಾರಿ ಜಂಕ್ಷನ್‌
ಚತುಷ್ಪಥ ಹೆದ್ದಾರಿ, ಸರ್ವಿಸ್‌ ರಸ್ತೆ ಮತ್ತು ಗ್ರಾಮೀಣ ರಸ್ತೆ, ದೇವಸ್ಥಾನಕ್ಕೆ ದಾರಿಯ ನಡುವೆ ಈ ಜಂಕ್ಷನ್‌ ಇದ್ದು, ಅಪಘಾತ ವಲಯವಾಗಿ ಗುರುತಿಸಿಕೊಂಡಿದೆ. ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಕೋಟಕ್ಕೆ ಪ್ರತ್ಯೇಕ ಜಂಕ್ಷನ್‌ನ ಅಗತ್ಯವಿದ್ದು, ಈ ಅಪಾಯಕಾರಿ ಜಂಕ್ಷನ್‌ ತೆರವುಗೊಳಿಸಬೇಕು ಎನ್ನುವ ಬೇಡಿಕೆ ಸಾರ್ವಜನಿಕ ವಲಯದಲ್ಲಿದೆ.

Advertisement

ವೀಡಿಯೋ ವೈರಲ್‌
ಅಪಘಾತದ ದೃಶ್ಯಾವಳಿ ಸ್ಥಳೀಯ ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next