ಬೆಂಗಳೂರು: ಸರ ಅಪಹರಣ ಮತ್ತು ದರೋಡೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅನ್ನಪೂರ್ಣೇಶ್ವರಿನಗರದ ಶ್ರೀಶೈಲ(27) ಮತ್ತು ಹನುಮಂತ(30), ವೆಂಕಟೇಶ್(30), ಅವಿನಾಶ್(26) ಹಾಗೂ ಪ್ರಕಾಶ್(30) ಬಂಧಿತರು. ಆರೋಪಿಗಳಿಂದ ಎಂಟು ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರ, ವಿವಿಧ ಕಂಪನಿಯ ನಾಲ್ಕು ಮೊಬೈಲ್‌ಗಳು ಹಾಗೂ 17 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳ ವಿಚಾರಣೆಯಲ್ಲಿ ಶ್ರೀಶೈಲ ಮತ್ತು ಹನುಮಂತ ಏ.9ರಂದು ರಾತ್ರಿ 8 ಗಂಟೆ ಸುಮಾರಿಗೆ ಠಾಣೆ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾಗಿ ಹೇಳಿಕೆ ನೀಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇತರೆ ಮೂವರು ಆರೋಪಿಗಳಾದ ವೆಂಕಟೇಶ್, ಅವಿನಾಶ್ ಮತ್ತು ಪ್ರಕಾಶ್ ದರೋಡೆ, ವಾಹನ ಕಳವು, ಮೊಬೈಲ್ ಕಳವು ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದರು.
Related Articles