Advertisement

7 ಅಂತರ್ ಜಿಲ್ಲಾ ಕಳ್ಳರ ಬಂಧನ : 21 ಲಕ್ಷ ಮೌಲ್ಯದ 70 ಕೆ.ಜಿ ಶ್ರೀಗಂಧದ ತುಂಡು ವಶ

08:51 PM Jan 04, 2022 | Team Udayavani |

ಚಿಕ್ಕಬಳ್ಳಾಪುರ : ರೈತರು ಬೆಳೆದಿದ್ದ ಶ್ರೀಗಂಧದ ಮರದ ತುಂಡಗಳನ್ನು ಕಟಾವು ಮಾಡಿ ಮಾರಾಟ ಮಾಡುತ್ತಿದ್ದ ಅಂರ್ತಜಿಲ್ಲಾ ಕಳ್ಳರನ್ನು ಬಂಧಿಸಿರುವ ಜಿಲ್ಲಾ ಪೊಲೀಸರು ಸುಮಾರು 21 ಲಕ್ಷ 6 ಸಾವಿರ ಮೌಲ್ಯದ 70 ಕೆಜಿ ಶ್ರೀಗಂಧದ ಸೇಗು ತುಂಡುಗಳ ವಶಕ್ಕೆ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ 7 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ 21 ಲಕ್ಷ 6 ಸಾವಿರ ಮೌಲ್ಯದ 70 ಕೆಜಿ ಶ್ರೀಗಂಧದ ಸೇಗು ತುಂಡುಗಳ ವಶಕ್ಕೆ ಪಡೆದುಕೊಂಡು 9 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ.

ಶ್ರೀಗಂಧದ ಮರಗಳ ತುಂಡಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ದಬರಗಾನಹಳ್ಳಿಯ ಮುನಿರಾಜು ಬಿನ್ ಆಂಜಿನಪ್ಪ, ಪ್ರಸನ್ನ ಬಿನ್ ಚಿಕ್ಕಪ್ಪಯ್ಯ,ಪ್ರದೀಪ್ ಬಿನ್ ಮುನಿರಾಜು, ಕೃಷ್ಣಮೂರ್ತಿ ಬಿನ್ ಮುನಿಯಪ್ಪ, ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿಯ ಮೊಹ್ಮದ್ ಇಸ್ಮಾಯೀಲ್ ಹಾಗೂ ಇವರ ಸಹಚರರಾದ ನರಸಿಂಹಮೂರ್ತಿ, ಮುನಿರಾಜು ಎಂಬುವರನ್ನು ಬಂಧಿಸಿ 21 ಲಕ್ಷ 6 ಸಾವಿರ ಮೌಲ್ಯದ 70 ಕೆಜಿ ಶ್ರೀಗಂಧದ ಸೇಗು ತುಂಡುಗಳ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸುಧ್ಧಿಗೋಷ್ಠಿಯಲ್ಲಿ ತಿಳಿಸಿದರು..

ತಂಡ ರಚನೆ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೌಡದೇನಹಳ್ಳಿ ವಾಸಿ ರಮೇಶ್ ಬಿನ್ ಬೈರೆಡ್ಡಿ ಅವರು ತಮ್ಮ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧ ಮರಗಳನ್ನು ನ.22 ರ ರಾತ್ರಿ ಯಾರೋ ಕಳ್ಳರು ಕಟಾವು ಮಾಡಿದ್ದಾರೆ ಎಂದು ದೂರು ನೀಡಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶ್ರೀಗಂಧ ಕಳವು

ಅದರಂತೆ ಜನವರಿ03 ರಂದು 6 ಗಂಟೆಯ ಸಮಯದಲ್ಲಿ ಸಿಪಿಐ ವಿಶ್ವಾಸ್ ಎ.ಎಸ್ ಅವರ ಸೂಚನೆ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ನಾರಾಯಣಸ್ವಾಮಿ ಅವರು ತಮ್ಮ ತಂಡದ ಸಿಬ್ಬಂದಿಯೊಂದಿಗೆ ಕಡಪ- ಬೆಂಗಳೂರು ರಸ್ತೆಯ ಮಾಡಿಕೆರೆ ಕ್ರಾಸ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ಯಾರೋ ಐದು ಜನ ಎರಡು ದ್ವಿಚಕ್ರವಾಹನಗಳಲ್ಲಿ ಮದನಪಲ್ಲಿ ಕಡೆಯಿಂದ ಬರುತ್ತಿದ್ದು, ಪೊಲೀಸರನ್ನು ಕಂಡು ತಮ್ಮ ದ್ವಿಚಕ್ರವಾಹನವನ್ನು ಹಿಂದಕ್ಕೆ ತಿರುಗಿಸಿಕೊಂಡು ವಾಪಸ್ಸು ಹೋಗುತ್ತಿದ್ದವರನ್ನು ಹಿಂಬಾಲಿಸಿ ವಾಹನಗಳನ್ನು ತಡೆದು ನಿಲ್ಲಿಸುವಷ್ಟರಲ್ಲಿ ದ್ವಿಚಕ್ರವಾಹನದಿಂದ ಒಬ್ಬ ಆಸಾಮಿ ಒಂದು ಗೋಣಿ ಚೀಲವನ್ನು ಕೆಳಗೆ ಬೀಳಿಸಿದ್ದು ಅದರಿಂದ ಕೆಲವು ಮರದ ತುಂಡುಗಳು ಕೆಳಗೆ ಬಿದ್ದಿದ್ದು ಆ ತುಂಡುಗಳನ್ನು ಪರಿಶೀಲನೆ ನಡೆಸಿದಾಗ ಇವು ಶ್ರೀಗಂಧದ ಸೋಗು ತುಂಡುಗಳಾಗಿದೆಯೆಂದು ಖಾತ್ರಿ ಪಡೆಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕಳ್ಳತನದ ಕೃತ್ಯವನ್ನು ಬಾಯಿ ಬಿಟ್ಟಿದ್ದಾರೆ.

Advertisement

ಆರೋಪಿಗಳ ಮೇಲೆ ನಂದಿಗಿರಿಧಾಮ ಪೊಲೀಸ್ ಠಾಣೆ,ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ,ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ 03 ಪ್ರಕರಣ, ಬಟ್ಲಹಳ್ಳಿ ಪೊಲೀಸ್ ಠಾಣೆ 02 ಪ್ರಕರಣ, ಶ್ರೀನಿವಾಸಪುರ ಪೊಲೀಸ್ ಠಾಣೆ ಹಾಗೂ ಕೋಲಾರ ಜಿಲ್ಲೆಯ ನಂಗಲಿ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಪ್ರಕರಣಗಳನ್ನು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದರು.

ಪರಕರಣಗಳನ್ನು ಪತ್ತೆಹಚ್ಚಲು ಚಿಂತಾಮಣಿ ಸಹಾಯಕ ಪೊಲೀಸ್ ಅಧೀಕ್ಷಕ ಕುಶಲ್ ಚೌಕ್ಷೆ(ಐಪಿಎಸ್) ಅವರ ನೇತೃತ್ವದಲ್ಲಿ ವಿಶ್ವಾಸ್ ಎ.ಎಸ್. ಪೊಲೀಸ್ ಇನ್ಸ್‍ಪೆಕ್ಟರ್ ಚಿಂತಾಮಣಿ ಗ್ರಾಮಾಂತರ ಠಾಣೆ, ಪುರುಷೋತ್ತಮ್ ಸಿ.ಪಿ.ಐ ಕೆಂಚಾರಹಳ್ಳಿ ವೃತ್ತ, ನಾರಾಯಣಸ್ವಾಮಿ ಅಲ್, ಪಿ.ಎಸ್.ಐ ಬತ್ತಿಹಳ್ಳಿ ಠಾಣೆ, ನಾರಾಯಣಸ್ವಾಮಿ ಸಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್, ಸಂದೀಪ್ ಕುಮಾರ ಹೆಚ್.ಸಿ, ಜಗದೀಶ್ ಹೆಚ್.ಸಿ, ವೆಂಕಟರವಣ ಪಿ.ಸಿ, ಮಣಿಕಂಠ ಪಿ.ಸಿ, ಪದ್ಮ ಎಲ್ ಮಹಿಳಾ ಎ.ಎಸ್.ಐ, ಸತೀಶ ಪಿ.ಸಿ, ಶ್ರೀನಿವಾಸಪ್ಪ ಎ.ಹೆಚ್.ಸಿ ಚಾಲಕ, ಸುರೇಶ್ ಹೆಚ್.ಸಿ,ರವಿಕುಮಾರ್ ಸಿ.ಹೆಚ್.ಸಿ ಡಿ.ಪಿ.ಓ ಗಣಕ ಯಂತ್ರ ವಿಭಾಗ, ಅವರಗಳನ್ನೊಳಗೊಂಡ ತಂಡವನ್ನು ರಚಿಸಿ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಕುಶಲ್ ಚೌಕ್ಷೆ(ಐಪಿಎಸ್) ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next