Advertisement

Crime: ಅಪ್ಪನ ಕಣ್ಣು ಕಿತ್ತಿದ್ದ ಮಗನಿಗೆ ಜೈಲು

03:46 PM Nov 23, 2023 | Team Udayavani |

ಬೆಂಗಳೂರು: ಆಸ್ತಿ ವಿಚಾರಕ್ಕೆ ತಂದೆಯ ಕಣ್ಣು ಕಿತ್ತು ಹಾಕಿ ಹಲ್ಲೆ ನಡೆಸಿದ್ದ ಮಗನಿಗೆ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 42 ಸಾವಿರ ರೂ. ದಂಡ ವಿಧಿಸಿದೆ.

Advertisement

ಪ್ರಕರಣದಲ್ಲಿ ಅಭಿಷೇಕ್‌ ಚೇತನ್‌ (44) ಶಿಕ್ಷೆಗೊಳಗಾದ ಅಪರಾಧಿ.

ಮಾರಣಾಂತಿಕ ಹಲ್ಲೆ, ಕೊಲೆ ಯತ್ನ, ಆಸ್ತಿ ವಿಚಾರವಾಗಿ ನಂಬಿಕೆ ದ್ರೋಹ ಮತ್ತು ಶಾಂತಿಭಂಗ ಮತ್ತು ಆಸ್ತಿ ಹಾನಿ ಪ್ರಕರಣಕ್ಕೆ ಸಂಬಂಧ 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 42 ಸಾವಿರ ರೂ. ದಂಡ ವಿಧಿಸಿದೆ.ದಂಡ ಮೊತ್ತದ ಪೈಕಿ 40 ಸಾವಿರ ರೂ. ಅನ್ನು ಪ್ರಕರಣ ಸಂತ್ರಸ್ತರಾದ ಅಪ ರಾಧಿಯ ತಂದೆ ಪರಮೇಶ್‌ಗೆ ನೀಡುವಂತೆ ಕೋರ್ಟ್‌ ಸೂಚಿಸಿದೆ.

2018ರ ಆ.29ರಂದು ಅಪರಾಧಿ ಪರಮೇಶ್‌ ತನ್ನ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿಲ್ಲ ಎಂಬ ಕಾರಣಕ್ಕೆ ತನ್ನ ತಂದೆ ಪರಮೇಶ್‌ (66) ಮೇಲೆ ಹಲ್ಲೆ ನಡೆಸಿ ಕಣ್ಣು ಕಿತ್ತುಹಾಕಿದ್ದ.

ಬನಶಂಕರಿಯ ಶಾಕಾಂಬರಿ ನಗರದಲ್ಲಿ ಈ ಘಟನೆ ನಡೆದಿತ್ತು. ಜೆ.ಪಿ.ನಗರ ಠಾಣಾ ಪೊಲೀಸರು ಎಫ್ಐಆರ್‌ ದಾಖಲಿಸಿ ಅಭಿಷೇಕ್‌ನನ್ನು ಬಂಧಿಸಲಾಗಿತ್ತು. ನಂತರ ತನಿಖೆ ಪೂರ್ಣಗೊಳಿಸಿ, ಆತನ ವಿರುದ್ಧ ಆರೋಪಪಟ್ಟಿ ಕೂಡ ಸಲ್ಲಿಸಲಾಗಿತ್ತು. ಆದರೆ, ಜಾಮೀನು ಮೇಲೆ ಹೊರಬಂದಿದ್ದ ಅಭಿಷೇಕ್‌, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

Advertisement

ಪ್ರಕರಣದ ವಿಚಾರಣೆ ಮುಂದುವರಿಸಿದ್ದ ನಗರದ 57ನೇ ಹೆಚ್ಚುವರಿ ಜಿÇÉಾ ಮತ್ತು ಸೆಷನ್ಸ್‌ ನ್ಯಾಯಾಲಯವು ಇದೀಗ ಅಭಿಷೇಕ್‌ ತಂದೆಯ ಮೇಲೆ ಹಲ್ಲೆ ನಡೆಸಿ, ಕಣ್ಣು ಕಿತ್ತುಹಾಕಿರುವುದು ಸಾಕ್ಷ್ಯಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದೆ.

ತಲೆ ಮರೆಸಿಕೊಂಡಿದ್ದ ಅಪರಾಧಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಸದ್ಯ ನ್ಯಾಯಾಲಯವು ಅಪರಾಧಿಯನ್ನು ಜೈಲಿಗೆ ಕಳುಹಿಸಿದೆ. ಸರ್ಕಾರಿ ಅಭಿಯೋಜಕರಾಗಿ ಕೆ.ಎಸ್‌.ವೀಣಾ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next