Advertisement

ಯುವತಿ ಆತ್ಮಹತ್ಯೆ ಪ್ರಕರಣ: ಆರೋಪಿ ಪತ್ತೆಗೆ 2 ತಂಡ

12:46 AM May 28, 2022 | Team Udayavani |

ಕುಂದಾಪುರ: ಉಪ್ಪಿನಕುದ್ರು ನಿವಾಸಿ ಶಿಲ್ಪಾ ಅವರ ಸಾವಿನ ಪ್ರಕರಣದ ಸಂಬಂಧ ದೂರಿನಲ್ಲಿ ಉಲ್ಲೇಖಿಸಲಾಗಿರುವ ಕೋಟೇಶ್ವರದ ಅಝೀಜ್‌ ಮತ್ತು ಆತನ ಪತ್ನಿ ಸಲ್ಮಾ ಬಂಧನ ಹಾಗೂ ಪ್ರಕರಣದ ತನಿಖೆಯ ಸಂಬಂಧ ಕುಂದಾಪುರ ಸಿಪಿಐ ಗೋಪಿಕೃಷ್ಣ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ

Advertisement

ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಸಿದ್ದಲಿಂಗಪ್ಪ ಹೇಳಿದ್ದಾರೆ.
ಅವರು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಸದ್ಯ ಆರೋಪಿಗಳು ಕುಂದಾಪುರದಿಂದ ತಪ್ಪಿಸಿಕೊಂಡಿದ್ದಾರೆ.

ಕಾಸರಗೋಡು ಕಡೆ ತೆರಳಿರುವ ಬಗ್ಗೆ ಮಾಹಿತಿ ಇದ್ದು ಒಂದು ತಂಡ ಅಲ್ಲಿಗೆ ತೆರಳಿದೆ. ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿ ಸಲಾಗುವುದು. ಆರೋಪಿ ಅಝೀಜ್‌ ಈ ಹಿಂದೆ ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಇದುವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಅದರ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದರು.

ಶಿಲ್ಪಾ ಅವರು ವಿಷ ಸೇವನೆ ಮಾಡಿದ ಬಳಿಕ ಆಸ್ಪತ್ರೆಗೆ ಸೇರಿದ ವಿಚಾರ ಪೊಲೀಸರಿಗೆ ತಡವಾಗಿ ತಿಳಿದು ಬಂದಿದ್ದು, ಆಕೆಯ ಸಾವಿನ ಅನಂತರ ಪ್ರಕರಣ ದಾಖಲಾಗಿದೆ. ಅದರ ಬಳಿಕ ಇಲಾಖೆ ತನ್ನ ಕೆಲಸವನ್ನು ಆರಂಭಿಸಿದೆ. ಅಝೀಜ್‌ ಮತ್ತು ಶಿಲ್ಪಾ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದು, ಅದೇ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಅಝೀಜ್‌ ಮತ್ತು ಸಲ್ಮಾ ಮೇಲೆ ಪ್ರಕರಣ ದಾಖಲಾಗಿದ್ದು ಶೀಘ್ರದಲ್ಲಿಯೇ ಬಂ ಧಿಸಲಾಗುವುದು ಎಂದರು.

ಪತ್ರ ಪತ್ತೆ
ಶಿಲ್ಪಾ ಮನೆಯಲ್ಲಿ ಪತ್ರವೊಂದು ಪತ್ತೆಯಾಗಿದ್ದು ಅದರಲ್ಲೂ ಪ್ರೀತಿ, ಪ್ರೇಮದ ಕುರಿತು ಸಂಖ್ಯಾ ವಿನೋದದ ಸಾಲುಗಳನ್ನು ಬರೆಯಲಾಗಿದೆ. ಪ್ರಸ್ತುತ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next