ಮಂಗಳೂರು: ಪಡುಪೆರಾರ ಗ್ರಾಮದ, ಪೆಜ್ಜತಾಯ ಬೆಟ್ಟು ನಿವಾಸಿ ಗೋಪಾಲ ಗೌಡ ಅವರ ಮನೆಯ ಆವರಣದಿಂದ 26 ಗೋಣಿ ಅಡಿಕೆ ಮಂಗಳವಾರ ರಾತ್ರಿ ಕಳವಾಗಿದೆ. ಸುಮಾರು 26 ಗೋಣಿ ಅಡಿಕೆಯನ್ನು ಮನೆಯ ಅಂಗಳದಲ್ಲಿ ಒಣಗಿಸಲು ಹಾಕಿದ್ದ ಅವರು ಮಳೆ ಬರುವ ಸಾಧ್ಯತೆ ಇದ್ದ ಕಾರಣ ಮಂಗಳವಾರ ಸಂಜೆ 10 ಗೋಣಿ ಅಡಿಕೆಯನ್ನು ಮನೆಯ ಎದುರಿನ ಜಗಲಿಯಲ್ಲಿ ಹಾಗೂ ಉಳಿದ 16 ಗೋಣಿ ಅಡಿಕೆಯನ್ನು ಮನೆಯ ಹಿಂಬದಿ ಶೆಡ್ ನಲ್ಲಿ ಇಟ್ಟಿದ್ದರು. ಬುಧವಾರ ಬೆಳಗ್ಗೆ ನೋಡಿದಾಗ ಅಡಿಕೆ ಕಳವಾಗಿತ್ತು.
Advertisement
ಅಗರಮೇಲು ಜಾರಾಂದಾಯ ದೆ„ವಸ್ಥಾನದಲ್ಲಿ ಕಳ್ಳತನಸುರತ್ಕಲ್: ಅಗರಮೇಲು ಜಾರಂದಾಯ ದೆ„ವಸ್ಥಾನಕ್ಕೆ ಮಂಗಳವಾರ ತಡರಾತ್ರಿ ನುಗ್ಗಿದ ಕಳ್ಳರು ಸುಮಾರು 40ಸಾವಿರ ರೂ.ಮೌಲ್ಯದ ದೆ„ವಸ್ಥಾನ ಬೆಳ್ಳಿ, ಕಂಚಿನ ಸಾಮಾನುಗಳನ್ನು ಕದ್ದೊಯ್ದಿದ್ದಾರೆ.
ಮೂಡುಬಿದಿರೆ: ಶಿರ್ತಾಡಿ ಗ್ರಾ.ಪಂ.ವ್ಯಾಪ್ತಿಯ ಮೂಡು ಕೊಣಾಜೆಯಲ್ಲಿ ಮಹಿಳೆಯೋರ್ವರು ಕಾರು ಢಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಅಪರಾಹ್ನ ಸಂಭವಿಸಿದೆ.ಮೂಡುಕೊಣಾಜೆ ನಿವಾಸಿ ತುಂಬೆ (65) ಮೃತಪಟ್ಟವರು. ಅವರು ಮೂಡುಕೊಣಾಜೆ ಪೇಟೆಗೆ ಬಂದಿದ್ದಾಗ ಮೂಡುಬಿದಿರೆಯಿಂದ ಶಿರ್ತಾಡಿಯತ್ತ ಸಾಗುತ್ತಿದ್ದ ಕಾರು ಢಿಕ್ಕಿಯಾಗಿದೆ. ಚಾಲಕ ಪರಾರಿಯಾಗಿದ್ದಾನೆ
Related Articles
ಕಿನ್ನಿಗೋಳಿ : ಪಕ್ಷಿಕೆರೆ ಪಂಜ ಸಮೀಪದದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವರು ಕೆರೆಗೆ ಬಿದ್ದು ಮƒತಪಟ್ಟ ಘ ಟನೆ ಬುಧವಾರ ನಡೆದಿದೆ. ಮೃತಪಟ್ಟವರನ್ನು ಪಕ್ಷಿಕೆರೆ ನಿವಾಸಿ ಟಿ ಮಹಮ್ಮದ್ (56) ಎಂದು ಗುರುತಿಸಲಾಗಿದೆ. ಟಿ ಮಹಮ್ಮದ್ ಅವರು ಪಂಜದಲ್ಲಿನ ಕೆರೆಗೆ ಮಂಗಳವಾರ ಮೀನು ಹಿಡಿಯಲು ತೆರಳಿದ್ದು, ಕಾಲು ಜಾರಿ ಮƒತಪಟ್ಟಿದ್ದಾರೆ, ಇದನ್ನು ಯಾರು ಗಮನಿಸಿರಲಿಲ್ಲ ಆದರೆ ಮಂಗಳವಾರ ಕೆರೆ ಸಮೀಪ ನಿಂತ ಮಹಮ್ಮದ್ ಅವರ ಕಾರು ಬುಧವಾರ ಕೂಡ ಅಲ್ಲೇ ಇರುದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ತೆರಳಿ ನೋಡುವಾಗ ಘಟನೆ ಬೆಳಕಿಗೆ ಬಂದಿದೆ, ಮಹಮ್ಮದ್ ಅವರು ಕಳೆದ ಕೆಲ ವರ್ಷಗಳಿಂದ ಪಕ್ಷಿಕೆರೆಯಲ್ಲಿ ಕಾರು ಚಾಲಕರಾಗಿ ದುಡಿಯುತ್ತಿದ್ದರು. ಮೂಲ್ಕಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
Advertisement
ಬೆಟ್ಟಿಂಗ್ : ಓರ್ವ ವಶ, 10 ಮಂದಿ ಪರಾರಿಕಾರ್ಕಳ: ಕಾರ್ಕಳ ಬೈಪಾಸ್ ರಸ್ತೆಯಲ್ಲಿ ಖಚಿತ ಮಾಹಿತಿ ಮೇರೆಗೆ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ನಿರತರಾಗಿದ್ದ ಎನ್.ಸಿ. ಶೇಖರಪ್ಪ ಅವನನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. 30,100 ರೂ. ನಗದು, ಬೈಕ್, ಮೊಬೈಲ್, ಡೈರಿಯನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ ವಿಶ್ವನಾಥ, ಸಂತೋಷ ಟಿಂಬರ್, ಟೋನಿ, ಇಕ್ಬಾಲ್ ಬಜಗೋಳಿ, ಭಾಸ್ಕರ ಜಾರ್ಕಳ, ಮುರುಳಿ ಜೋಡುರಸ್ತೆ, ಹುಸೇನ್ ಜೋಡುರಸ್ತೆ, ಶಾಂತರಾಮ ಸಾಣೂರು ಓಡಿ ಹೋಗಿದ್ದಾರೆ.ಮಂಗಳೂ ರಿನ ಮೆಲ್ವಿನ್ ವಿಶ್ವಾಸ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಎಂದು ಹೇಳಲಾಗುತ್ತಿದೆ. ಅಕ್ರಮ ಮರಳುಗಾರಿಕೆ : ಟಿಪ್ಪರ್ ವಶ
ಕುಂದಾಪುರ: ಮರವಂತೆ ಗ್ರಾಮದ ತ್ರಾಸಿ ಗ್ರಾಮದ ಆನಗೋಡು ವಿನಲ್ಲಿ ಬುಧವಾರ ಸೌಪರ್ಣಿಕಾ ಹೊಳೆಯಿಂದ ಮರಳು ತೆಗೆಯುತ್ತಿದ್ದ ಅಡ್ಡೆಗೆ ಎ. 10 ರಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು ಟಿಪ್ಪರ್‌ನ್ನು ವಶಪಡಿಸಿಕೊಂಡಿದ್ದು, ಸ್ಥಳದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ನಾಗರಾಜ ಹೆಬ್ಟಾರ ಮತ್ತು ಗುರುರಾಜ ಹೆಬ್ಟಾರ ಅವರ ಜಾಗದಲ್ಲಿ ಹೊಳೆಯ ದಡದಲ್ಲಿ ಮರಳನ್ನು ರಾಶಿ ಹಾಕಿ, ಟಿಪ್ಪರ್‌ಗೆ ತುಂಬಿಸುತ್ತಿರುವುದು ಕಂಡು ಬಂದಿದೆ. ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಮರವಂತೆಯ ಅಬ್ದುಲ್ ವಹಾಬ್, ನಾಡ ಗುಡ್ಡೆಯಂಗಡಿ ಮೊಹಮ್ಮದ್, ಗಿರೀಶ ದೇವಾಡಿಗ ಮತ್ತು ಮರಳತುಂಬಿಸುವವರು ಪರಾರಿಯಾಗಿದ್ದಾರೆ. ಎಸ್.ಐ. ಮೇಲೆ ಹಲ್ಲೆ; ಮೂವರ ಬಂಧನ
ಕೋಟ: ಕರ್ತವ್ಯ ನಿರತ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಮೇಲೆ ಐದು ಮಂದಿಯ ತಂಡವೊಂದು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಘಟನೆ ಮಂಗಳವಾರ ಕುಂಭಾಶಿಯಲ್ಲಿ ನಡೆದಿದೆ. ಮಂಗಳೂರು ಗುರುಪುರದ ಉಲೈಬೆಟ್ಟು ನಿವಾಸಿ ಮೊಹಮ್ಮದ್ ಶಮಿದ್, ಮೊಹಮ್ಮದ್ ಇಕ್ಬಾಲ್ ಮೊಹಮ್ಮದ್ ರಿಝವಾನ್ ಪ್ರಕರಣದ ಆರೋಪಿಗಳು. ವಾಹನದಲ್ಲಿದ್ದ ಹನೀಫ್ ಮತ್ತು ಪೈಜಲ್ ತಪ್ಪಿಸಿಕೊಂಡಿದ್ದಾರೆ. ಉಪನಿರೀಕ್ಷಕರು ಇಂಟರ್ ಸೆಪ್ಟರ್ ವಾಹನದಲ್ಲಿ ಕರ್ತವ್ಯದಲಿರುವಾಗ ಕುಂದಾಪುರದಿಂದ-ಉಡುಪಿ ಕಡೆಗೆ ಸಂಚರಿಸುತ್ತಿದ್ದ ಮಾವಿನಕಾಯಿ ಸಾಗಾಟ ನಡೆಸುತ್ತಿದ್ದ ವಾಹನವನ್ನು ತಡೆದು ಪರಿಶೀಲನೆ ನಡೆಸಲು ಮುಂದಾಗಿದ್ದು, ವಾಹನದಲ್ಲಿದ್ದ ಆರೋಪಿಗಳು ಅವಾಚ್ಯ ಶಬ್ದದಿಂದ ನಿಂದಿಸಿ ಇಲಾಖಾ ವಾಹನ ಚಾಲಕನಿಗೆ ಹಾಗೂ ಸುಧಾ.ಬಿ ಅವರಿಗೆ ಹಲ್ಲೆ ನಡೆಸಿ ತೆರಳಿದ್ದಾರೆ. ಅನಂತರ ತೆಕಟ್ಟೆ ಬಳಿ ಕೋಟ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದರು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಕಣ ದಾಖಲಾಗಿದೆ. ಅಧಿಕಾರಿಗಳ ಸೋಗಿನಲ್ಲಿ ಹಣ ವಸೂಲಿ ಆರೋಪಿಗಳಿಗೆ 15ದಿನ ನ್ಯಾಯಾಂಗ ಸೆರೆ
ಕೋಟ: ಅಖೀಲ ಕರ್ನಾಟಕ ನೆಲ, ಜಲ, ಪರಿಸರ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳು ಎಂದು ಹೇಳಿಕೊಂಡು ಅಧಿಕಾರಿಗಳ ಶೈಲಿಯಲ್ಲಿ ಕಲ್ಲು ಸಾಗಾಟದ ವಾಹನಗಳನ್ನು ಅಡ್ಡಗಟ್ಟಿ,ಪರಿಶೀಲನೆ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಉಡುಪಿ ಲಕ್ಷ್ಮೀಂದ್ರ ನಗರದ ನಿವಾಸಿ ಶ್ರೀಲತಾ ಶೆಟ್ಟಿ (48) ಉದಯ ಕುಮಾರ್ ಶೆಟ್ಟಿ (49) ಉಡುಪಿ ಕಕ್ಕುಂಜೆಯ ನಿತ್ಯಾನಂದ ಶೆಟ್ಟಿ (53) ಸಂತೆಕಟ್ಟೆ ನಿವಾಸಿ ಗುರುಪ್ರಸಾದ ಪೂಜಾರಿ (49) ಎನ್ನುವವರನ್ನು ಎ.8ರಂದು ಲಾರಿ ಮಾಲಿಕರು ಪೊಲೀಸರಿಗೊಪ್ಪಿಸಿದ್ದು ಅನಂತರ ಕುಂದಾಪುರದ ನ್ಯಾಯಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳಿಗೆ ಎ.23ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ. ಕೀಟನಾಶಕ ಸೇವಿಸಿ ಆತ್ಮಹತ್ಯೆ.
ಬೈಂದೂರು:ಉಳೂ¤ರು ಸರಸ್ವತಿ ನಿಲಯದ ಚಂದ್ರಶೇಖರ ಮದ್ಯಪಾನ ಮಾಡಿದ ಗುಂಗಿನಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದ.ಆತನನ್ನು ಆಜ್ಜರಕಾಡು ಆಸ್ಪತ್ರೆಗೆ ಸೇರಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದಾನೆ,ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೇಣು ಬಿಗಿದು ಆತ್ಮಹತ್ಯೆ
ಬೈಂದೂರು;ಬೈಂದೂರಿನಲ್ಲಿ ವಾಸವಾಗಿರುವ ಮಿಟ್ಟಲಕೋಡ ಗ್ರಾಮ ಕುಷ್ಟಗಿ ತಾಲೂಕಿನ ಮುತ್ತು ಭಂಡಾರಿ (24)ಜೀವನದಲ್ಲಿ ಜಿಗುಪ್ಸೆಗೊಂಡು ಡೆತ್ ನೋಟ್ ಬರೆದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.