Advertisement

ನಿಲ್ಲಿಸಿ 15 ನಿಮಿಷ ಆಗುವಷ್ಟರಲ್ಲೇ ಸ್ಕೂಟರ್‌ ಕಳವು !

12:35 AM Jan 23, 2022 | Team Udayavani |

ಮಂಗಳೂರು: ನಿಲ್ಲಿಸಿದ ಕೇವಲ 15 ನಿಮಿಷಗಳಲ್ಲಿಯೇ ಸ್ಕೂಟರ್‌ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.

Advertisement

ಮೂಲತಃ ಕಾಸರಗೋಡು ಜಿಲ್ಲೆಯವರಾದ ರಿನ್ಸ್‌ ಮೋನ್‌ ಕ್ಸೇವಿಯರ್‌ ಅವರು ನಗರದಲ್ಲಿ ವಾಹನಗಳ ಬಿಡಿಭಾಗಗಳ ಮಾರಾಟದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಜ. 7ರಂದು ಬೆಳಗ್ಗೆ 11.30ರ ವೇಳೆಗೆ ಕಾರ್ಕಳದ ಗ್ಯಾರೇಜ್‌ಗೆ ಪಾರ್ಸೆಲ್‌ ನೀಡಲು ಜ್ಯೋತಿ ವೃತ್ತದ ಎದುರಿನ ಹೊಟೇಲ್‌ ಬಳಿ ಸ್ಕೂಟರ್‌ನ್ನು ನಿಲ್ಲಿಸಿ ಬಸ್‌ಗಾಗಿ ಕಾಯುತ್ತಿದ್ದರು.

11.45ರವರೆಗೂ ಬಸ್‌ ಬರದಿದ್ದಾಗ ಸ್ಕೂಟರ್‌ ಕಡೆ ನೋಡುವಾಗ ಸ್ಕೂಟರ್‌ ನಿಲ್ಲಿಸಿದಲ್ಲಿ ಇರಲಿಲ್ಲ. ಅಲ್ಲಿಯೇ ಸ್ವಲ್ಪ ಮುಂದೆ ಓರ್ವ ವ್ಯಕ್ತಿ ಆ ಸ್ಕೂಟರ್‌ನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡಿತು. ಅವರು ಬೊಬ್ಬೆ ಹಾಕಿದಾಗ ಕಳ್ಳ ಸ್ಕೂಟರ್‌ನಲ್ಲಿ ತೆರಳಿದ್ದಾನೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next