Advertisement

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

10:58 PM Oct 17, 2021 | Team Udayavani |

ಸಿರಿಗೆರೆ: ಭರಮಸಾಗರ ಹೋಬಳಿ ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ ನಡೆದಿದ್ದ ನಾಲ್ವರ ನಿಗೂಢ ಸಾವಿನ ರಹಸ್ಯವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆಯ ಹಿರಿಯ ಮಗಳೇ ಮುದ್ದೆಗೆ ವಿಷ ಬೆರೆಸಿ ನಾಲ್ವರನ್ನು ಕೊಂದಿರುವುದು ತನಿಖೆಯಿಂದ ತಿಳಿದು ಬಂದಿದೆ.

Advertisement

ಪ್ರಕರಣದ ವಿವರ
ಜು.12ರಂದು ಸಂಜೆ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ತಾಯಿ ಅಡುಗೆ ಮಾಡಲು ಪರಿಕರ, ತರಕಾರಿ ಸಿದ್ಧ ಮಾಡಿಟ್ಟುಕೊಂಡಿದ್ದಳು. ಅದೇ ಸಮಯಕ್ಕೆ ವಿದ್ಯುತ್‌ ಕೈಕೊಟ್ಟಿತ್ತು. ಈ ಸಂದರ್ಭವನ್ನು ಬಳಸಿಕೊಂಡು ಮುದ್ದೆ ಮಾಡಲು ಒಲೆಯ ಮೇಲಿರಿಸಿದ್ದ ಪಾತ್ರೆಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದರೆಂದು ಭಾವಿಸಲಾಗಿತ್ತು.

ಈ ಪ್ರಕರಣದಲ್ಲಿ ಒಂದೇ ಕುಟುಂಬದ ತಿಪ್ಪಾ ನಾಯ್ಕ (45), ಸುಧಾಬಾಯಿ (40), ರಮ್ಯಾ (16) ಹಾಗೂ ಗುಂಡಿಬಾಯಿ (80) ಮೃತಪಟ್ಟಿದ್ದರು. ಜೀವನ್ಮರಣ ಹೋರಾಟ ನಡೆಸಿದ್ದ ರಾಹುಲ್‌ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.

ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸಿದ್ದರು. ಅಡುಗೆ ಮಾಡಲು ಬಳಸಿದ್ದ ಪಾತ್ರೆ, ಆಹಾರ ಪದಾರ್ಥಗಳನ್ನು ವಿಧಿ ವಿಜ್ಞಾನ ಸಂಸ್ಥೆಗೆ ರವಾನಿಸಿದ್ದರು. ತಂದೆ, ತಾಯಿ, ಅಜ್ಜಿ ಮತ್ತು ಅಕ್ಕನ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಬೇಕೆಂದು ರಾಹುಲ್‌ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ:ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Advertisement

ಸುಳಿವು ಕೊಟ್ಟ ಅನ್ನ, ಸಾರು
ಮನೆಯಲ್ಲಿ ಎಲ್ಲರೂ ಮುದ್ದೆ ಊಟ ಮಾಡಿದರೆ, ತನಗೆ ಮುದ್ದೆ ಬೇಡವೆಂದು ಹಟ ಹಿಡಿದು ಅನ್ನ ಮತ್ತು ಸಾರು ಮಾಡಿ ಉಂಡಿದ್ದ ಹಿರಿಯ ಮಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಡಿಸಿದ್ದರು. ಆಗ ಮುದ್ದೆಗೆ ವಿಷ ಹಾಕಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾಳೆ.

ಬೈಗುಳವೇ ಶಾಪವಾಯ್ತು
ಮನೆಯಲ್ಲಿ ಬಡತನವಿದ್ದುದರಿಂದ ತನ್ನನ್ನು ಕೂಲಿ ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವುದು, ವಿನಾ ಕಾರಣ ಬಯ್ಯುತ್ತಿದ್ದರು. ಇದೇ ಕಾರಣಕ್ಕೆ ವಿಷ ಬೆರೆಸಿದ್ದಾಗೆ 17 ವರ್ಷದ ಆರೋಪಿಯು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next