Advertisement
ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು, ಉದ್ಯಮಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳು ಮತ್ತುಕೇರಳ ಮೂಲದ ವ್ಯಕ್ತಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 30
ಲಕ್ಷ ರೂ. ಮೌಲ್ಯದ 500 ಎಂಡಿಎಂಎ, ಮಾತ್ರೆಗಳು, 30 ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
Related Articles
ಮತ್ತೊಂದು ಪ್ರಕರಣದಲ್ಲಿ ಬಟ್ಟೆ ವ್ಯಾಪಾರದ ಜತೆಗೆ ಮಾದಕ ವಸ್ತು ದಂಧೆಯಲ್ಲಿ ತೊಡ ಗಿದ್ದ ನೈಜಿರಿಯಾ ಪ್ರಜೆ ಸೇರಿ ಮೂವರನ್ನು ಕಾಡು ಗೊಂಡನ ಹಳ್ಳಿ ಬಂಧಿಸಿದ್ದಾರೆ. ನೈಜಿರಿಯಾ ಮೂಲದ ನಡುಬಾ (30), ಶಿವಾಜಿನಗರದ ಶಕೀರ್ (30) ಮತ್ತು ಹೆಣ್ಣೂರಿನ ರವಿಕುಮಾರ್
(29) ಬಂಧಿ ತರು. ಆರೋಪಿಗಳಿಂದ 2.5 ಲಕ್ಷ ರೂ. ಮೌಲ್ಯದ ಐದು ಗ್ರಾಂ ಎಂಡಿ ಎಂಎ, 150 ಮಾತ್ರೆ ಗಳು, ಒಂದು ಮೊಬೈಲ್, 2 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
Advertisement
ಆರೋಪಿಗಳ ಪೈಕಿ ನೈಜಿರಿಯಾ ಪ್ರಜೆ ನಡುಬಾ, ವ್ಯವಹಾರಿಕ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದು, ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಇತರೆ ಇಬ್ಬರು ಆರೋಪಿಗಳು ಟೀ ಅಂಗಡಿಗಳಲ್ಲಿ ಕೆಲಸ ಮಾಡಿ ಕೊಂಡಿದ್ದರು. ಈ ಮಧ್ಯೆ ನಡುಬಾ, ವಿದೇಶದಿಂದ ಮಾದಕ ವಸ್ತು ತರಿಸಿಅವುಗಳನ್ನು ಶಕೀರ್ ಮತ್ತು ರವಿ ಕುಮಾರ್ ಮೂಲಕ ಮಾರಾಟ ಮಾಡಿಸುತ್ತಿದ್ದ. ಇತ್ತೀಚೆಗೆ ನಡುಬಾ, ಎಚ್‌ಬಿಆರ್ ಲೇಔಟ್‌ನ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ಈತನ ವಿಚಾರಣೆಯಲ್ಲಿ ಇತರೆ ಇಬ್ಬರು ಆರೋಪಿಗಳ ಹೆಸರು ಬಾಯಿಬಿಟ್ಟಿದ್ದ. ಈ
ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.