Advertisement
ಸಂಪಾಜೆ ನಿವಾಸಿ ಸಂಪತ್ ಕುಮಾರ್ (34), ಮಡಿಕೇರಿಯ ಗೌಳಿ ಬೀದಿ ನಿವಾಸಿ ಜಯನ್ ಅಲಿಯಾಸ್ ಜಗ್ಗು (34) ಹಾಗೂ ಸಂಪಾಜೆ ನಿವಾಸಿ ಹರಿಪ್ರಸಾದ್ (36) ಬಂಧಿತ ರು.ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದ ಎಸ್‌ಪಿ ಡಾ| ಸುಮನ್ ಡಿ.ಪನ್ನೇಕರ್ ಅವರು,ವೈನ್ ಶಾಪ್ ಹಾಗೂ ಕ್ಲಬ್‌ಗ ಸಂಬಂಧಿಸಿದ ವಿವಾದ ಕೊಲೆಗೆ ಕಾರಣ ಎಂದು ತಿಳಿಸಿದ್ದಾರೆ.
Related Articles
ಸಂಪತ್ ಕುಮಾರ್ ಹಾಗೂ ಹರಿ ಪ್ರಸಾದ್ ಅವರು ಎರಡು ವರ್ಷಗಳ ಹಿಂದೆ ಸಂಪಾಜೆಯಲ್ಲಿ ರಿಕ್ರಿಯೇಷನ್ ಕ್ಲಬ್ ತೆರೆಯಲು ಪ್ರಯತ್ನಿಸಿದ್ದು, ಇದಕ್ಕೆ ಗ್ರಾ. ಪಂ.ಅಧ್ಯಕ್ಷರಾಗಿದ್ದ ಬಾಲಚಂದ್ರ ಅನುಮತಿ ನಿರಾಕರಿಸಿದ್ದರು. 2018ರ ಮಾರ್ಚ್‌ನಲ್ಲಿ ಸಂಪಾಜೆಯಲ್ಲಿ ಬಾರ್ ತೆರೆಯಲು ಪ್ರಯತ್ನಿಸಿದಾಗಲೂ ಅಡ್ಡಿಪಡಿಸಿದ್ದರು. 2018ರ ಎಪ್ರಿಲ್‌ನಲ್ಲಿ ಸಂಪತ್‌ನ ಜೆಸಿಬಿ ಕಳೆದು ಹೋಗಿರುವ ಬಗ್ಗೆ ಸುಳ್ಯ ಠಾಣೆೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ತಮ್ಮ ಪ್ರಭಾವ ಬಳಸಿದ ಬಾಲಚಂದ್ರ ಅವರು ಜೆಸಿಬಿ ಪತ್ತೆಗೆ ಅಡ್ಡಿಯುಂಟುಮಾಡಿದ್ದಾರೆ ಎನ್ನುವ ಅಸಮಾಧಾನವೂ ಆರೋ ಪಿಗಳಲ್ಲಿತ್ತು ಎಂದು ಎಸ್‌ಪಿ ವಿವರಿಸಿದರು.ಕೃತ್ಯಕ್ಕೆ ಬಳಸಿದ್ದ ಲಾರಿ ಹಾಗೂ ಕಾರನ್ನು ಪೊಲೀಸರು ವಶಪಡಿಸಿದ್ದಾರೆ.
Advertisement
ಡಿವೈಎಸ್‌ಪಿ ಕೆ.ಎಸ್.ಸುಂದರರಾಜ್ ಮಾರ್ಗದರ್ಶನದಲ್ಲಿ ಮಡಿಕೆೇರಿ ಗ್ರಾಮಾಂತರ ಸಿಐ ಸಿದ್ದಯ್ಯ,ಉಪ ನಿರೀಕ್ಷಕ ಚೇತನ್, ಪಿಎಸ್‌ಐ ಶ್ರವಣ್, ಸಿಬಂದಿ ವರ್ಗದ ದಿನೇಶ್, ಶಿವರಾಜು,ರವಿ,ಅನಿಲ್,ಮಂಜುನಾಥ್,ಸಿಡಿಆರ್ ವಿಭಾಗದ ರಾಜೇಶ್, ಗಿರೀಶ್ ಹಾಗೂ ಚಾಲಕರಾದ ಸುನಿಲ್ ಮತ್ತು ಅರುಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ತಂಡಕ್ಕೆ ಎಸ್ ಪಿ ಬಹುಮಾನ ಘೋಷಿಸಿದ್ದಾರೆ.