Advertisement

ಕರಾವಳಿ ಭಾಗದ ಅಪರಾಧ ಸುದ್ದಿಗಳು

01:02 AM Mar 28, 2019 | Team Udayavani |

ಸೂಟರ್‌ಪೇಟೆ: ರೈಲು ಢಿಕ್ಕಿ ಹೊಡೆದು ಸಾವು
ಮಂಗಳೂರು: ನಗರದ ಸೂಟರ್‌ಪೇಟೆ ರೈಲ್ವೆ ಗೇಟ್‌ ಬಳಿ ಬುಧವಾರ ರೈಲು ಢಿಕ್ಕಿ ಹೊಡೆದು ಪದ್ಮಾ (54) ಅವರು ಸಾವನ್ನಪ್ಪಿದ್ದಾರೆ.

Advertisement

ಅವರು ಪತಿ ಮತ್ತು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.ಪತಿ ರಾಜು ಅವರು ಫಿಶರೀಸ್‌ ಕಾಲೇಜಿನಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾರೆ.ಓರ್ವ ಪುತ್ರ ಉಳ್ಳಾಲದಲ್ಲಿ ಕೆಲಸ ಮಾಡುತ್ತಿದ್ದು,ಈ ಹಿನ್ನೆಲೆಯಲ್ಲಿ ಉಡುಪಿಯಿಂದ ಮಂಗಳೂರಿಗೆ ಬಂದು ಈ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು.ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕಡೇಶಿವಾಲಯ: ತಂಡದಿಂದ ಹಲ್ಲೆ; ದೂರು
ಬಂಟ್ವಾಳ: ಕಡೇಶಿವಾಲಯ ಗ್ರಾಮ ಭಂಡಾರಿಬೆಟ್ಟು ನಿವಾಸಿ ಅಬ್ದುಲ್‌ ಲತೀಫ್‌ (50) ಅವರು ತನ್ನ ಸಹೋದರನ ಮನೆಯಿಂದ ಮಾ.26ರಂದು ರಾತ್ರಿ 7.30ರ ಸುಮಾರಿಗೆ ಬರುತ್ತಿದ್ದಾಗ ದಾರಿಯಲ್ಲಿ ಅಪರಿಚಿತ ನಾಲ್ವರ ತಂಡ ಕೈ ಮತ್ತು ಕೋಲಿನಿಂದ ಹಲ್ಲೆ ನಡೆಸಿದೆ.ವಿನಾಕಾರಣ ತನ್ನ ಮೇಲೆ ತಂಡ ಹಲ್ಲೆ ನಡೆಸಿದೆ ಎಂದು ಗಾಯಾಳು ಬುಧವಾರ ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

15 ವರ್ಷಗಳಿಂದ
ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
ಸುಳ್ಯ: ಪ್ರಕರಣವೊಂದಕ್ಕೆ ಸಂಬಂಧಿಸಿ 15 ವರ್ಷಗಳಿಂದ ತಲೆ ಮರೆಸಿಕೊಂಡು, ಸುಳ್ಯ ನ್ಯಾಯಾಲಯದಿಂದ ವಾರಂಟ್‌ ಎದುರಿಸುತ್ತಿದ್ದಾತನನ್ನು ಸುಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಾಸರಗೋಡು ಜಿಲ್ಲೆ ಪಾತನಡ್ಕ ಸುರೇಶ್‌ ನಾಯರ್‌ ಬಂಧಿತ ಆರೋಪಿ.ಪುತ್ತೂರು ತಾಲೂಕಿನ ಪುರುಷರ ಕಟ್ಟೆಯಲ್ಲಿ ಈತ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಮಾಹಿತಿ ಪಡೆದ ಸುಳ್ಯ ಪಿಎಸ್‌ಐ ಹರೀಶ್‌ ಮತ್ತು ಸಿಬಂದಿ ವರ್ಗದ ಇಕ್ಬಾಲ್‌ ಮತ್ತು ರಮೇಶ್‌ ಕಾರ್ಯಾಚರಣೆ ನಡೆಸಿದ್ದರೆ.

Advertisement

ಮಜೂರು: ಬಸ್ಸಿನಿಂದ ಬಿದ್ದು ಮಹಿಳೆಗೆ ಗಾಯ
ಕಾಪು:ಮಜೂರು ಗ್ರಾಮದ ನಿವಾಸಿ ಸುಮತಿ (52) ಅವರು ಬಸ್ಸಿನಿಂದ ಬಿದ್ದು ಗಾಯಗೊಂಡ ಘಟನೆ ಮಜೂರಿನಲ್ಲಿ ನಡೆದಿದೆ.

ಇವರು ಕಾಪು ಮಾರಿಪೂಜೆಗೆ ಬಂದು ಮನೆಗೆ ವಾಪ ಸಾಗುತ್ತಿದ್ದಾಗ ದುರಂತ ಸಂಭವಿಸಿದೆ.ಬಸ್‌ ಸ್ಟಾಪ್‌ನಲ್ಲಿ ಇಳಿಯಲೆಂದು ನಿಂತಿದ್ದಾಗ ಚಾಲಕ ಹಠಾತ್‌ ಬ್ರೇಕ್‌ ಹಾಕಿದ ಪರಿಣಾಮ ಅವರು ಬಿದ್ದಿದ್ದು,ಸಹ ಪ್ರಯಾಣಿಕರು ಮತ್ತು ಸ್ಥಳೀಯರು ಅವರನ್ನು ತತ್‌ಕ್ಷಣ ಉಡುಪಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಕಾರು ಢಿಕ್ಕಿ ಹೊಡೆದು ಗಾಯ
ಕಾಪು: ಸುಗ್ಗಿ ಮಾರಿಪೂಜೆಯ ಲೈಟಿಂಗ್‌ಗಾಗಿ ಬಂದಿದ್ದ ಹಳೆಯಂಗಡಿ ನಿವಾಸಿ ಲಿಂಗಪ್ಪ ಸಾಲ್ಯಾನ್‌ (60) ಅವರ ಮೇಲೆ ಕಾರು ಚಲಿ ಸಿ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಕಾಪುನಲ್ಲಿ ನಡೆದಿದೆ.

ಕಾಪು ಮಾರಿಗುಡಿಗೆ ಲೈಟಿಂಗ್‌ಗೆ ಬಂದಿದ್ದ ಅವರು ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ರಸ್ತೆಗೆ ಬಿದ್ದರು. ಆ ಹೊತ್ತಿಗೆ ಬಂದ ಮತ್ತೂಂದು ಕಾರು ಅವರ ಕಾಲಿನ ಮೇಲೆ ಸಂಚರಿಸಿದೆ.ಕಾಲಿಗೆ ಗಂಭೀರ ಗಾಯವಾಗಿರುವ ಇವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಆತ್ಮಹತ್ಯೆ
ಕಾರ್ಕಳ:ಕಸಬ ಗ್ರಾಮದ ಉಚ್ಚಂಗಿ ನಗರದ ಯುಮುನಾ (70)ಅವರು ಮಾ.27ರಂದು ಮನೆ ಸಮೀಪದ ಮಾರ್ಕೆಟ್‌ ರಸ್ತೆಯಲ್ಲಿರುವ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇವರು ಕಳೆದ ಮೇ ತಿಂಗಳಿನಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡೂರು: ನೇಣು ಬಿಗಿದು ಆತ್ಮಹತ್ಯೆ
ಬ್ರಹ್ಮಾವರ: ಕಾಡೂರು ಗ್ರಾಮ ನೀರ್ಮಕ್ಕಿಯ ಕಿಶೋರ್‌ ಹೆಗ್ಡೆ (33) ಅವರು ಮಾ.26ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಲೂರು ಸಿದ್ದಾಪುರ: ಚಿಕ್ಕಪ್ಪ,
ಚಿಕ್ಕಮ್ಮನನ್ನು ಕೊಂದು ಆತ್ಮಹತ್ಯೆ
ಸೋಮವಾರಪೇಟೆ:ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಕೊಂದು ಯುವಕ ನೇಣಿಗೆ ಶರಣಾಗಿರುವ ಘಟನೆ ಆಲೂರು ಸಿದ್ದಾಪುರದಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಗ್ರಾಮದ ನಿವೃತ್ತ ಪೊಲೀಸ್‌,ಸೂದನ ಗಣೇಶ್‌ (63), ಅವರ ಪತ್ನಿ ಮೋನಿ (48)ಯನ್ನು ಕೊಂದು ಸೂದನ ದಿಲೀಪ್‌(30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಸಂಜೆ 6-30ರ ಹೊತ್ತಿಗೆ ದಿಲೀಪ್‌,ತನ್ನ ಚಿಕ್ಕಪ್ಪನ ಮನೆಗೆ ತೆರಳಿ ಆಸ್ತಿ ವಿಷಯಕ್ಕೆ ಜಗಳ ಮಾಡಿದ್ದ.ಬಳಿಕ ಕತ್ತಿಯಿಂದ ಗಣೇಶ್‌ ತಲೆಗೆ ಕಡಿದಿದ್ದು,ತಡೆಯಲು ಬಂದ ಅವರ ಪತ್ನಿಗೂ ಕಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು.ಮನೆಯಲ್ಲಿದ್ದ ಅವರ ಪುತ್ರ ಮಗ ಹರ್ಷಿತ್‌(23)ಮೇಲೂ ಹಲ್ಲೆ ಮಾಡಿ,ಅದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಬೊಬ್ಬೆ ಕೇಳಿ ಸ್ಥಳೀಯರು ಬಂದು ನೋಡಿದಾಗ ಮೂವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.ಜೀವನ್ಮರಣ ಸ್ಥಿತಿಯಲ್ಲಿದ್ದ ಹರ್ಷಿತ್‌ನನ್ನು ಹಾಸನದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಶನಿವಾರಸಂತೆ ಠಾಣಾಧಿಕಾರಿ ತಿಮ್ಮಶೆಟ್ಟಿ ಹಾಗೂ ಸಿಬಂದಿ ತೆರಳಿ ಮಹಜರು ನಡೆಸಿದ್ದಾರೆ.

ವೃದ್ಧ ಆಸ್ಪತ್ರೆಯಲ್ಲಿ ಸಾವು: ಸೂಚನೆ
ಉಡುಪಿ: ಅಜ್ಜರಕಾಡು ಜಿಲ್ಲಾ ಸ್ಪತ್ರೆಯಲ್ಲಿ ಒಳರೋಗಿಯಾದ ದಾಖಲಾಗಿದ್ದ ದೇವದಾಸ (70) ಅವರು ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ವಾರಸುದಾರರಿದ್ದಲ್ಲಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು (0820-2520555 / 9449827833) ಸಂಪರ್ಕಿ ಸುವಂತೆ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ ಪ್ರಕಟನೆ ತಿಳಿಸಿದೆ.

ಮಾಣಿ ಜಂಕ್ಷನ್‌: ಶಂಕಿತರಿಬ್ಬರ ಬಂಧನ
ವಿಟ್ಲ: ಮಾಣಿ ಜಂಕ್ಷನ್‌ನಲ್ಲಿ ಅನುಮಾನಾಸ್ಪದವಾಗಿ ಗೋಣಿ ಚೀಲಗಳೊಡನೆ ನಿಂತಿದ್ದ ಇಬ್ಬರನ್ನು ವಿಚಾರಿಸಿದಾಗ,ಅದರಲ್ಲಿ ದ್ದುದು ಕಳವುಗೈದ ವಸ್ತುಗಳೆಂದು ತಿಳಿದು ಬಂದ ಹಿನ್ನೆಲೆ ಯಲ್ಲಿ ಅವರನ್ನು ಮಂಗಳವಾರ ಬಂಧಿಸಲಾಗಿದೆ.

ಕಬಕ ನಿವಾಸಿ ಮಹಮ್ಮದ್‌ ಸಿಹಾನ್‌ (31), ಕೇರಳ ಮೂಲದ ತ್ರಿಶೂರು ನಿವಾಸಿ ಜೋಯ್ಸನ್‌ (38) ಬಂಧಿತರು. ವಿಟ್ಲ ಉಪನಿರೀಕ್ಷಕರ ತಂಡ ಕರ್ತವ್ಯದಲ್ಲಿ ಮಾಣಿಯಲ್ಲಿ ಸಂಚರಿಸುತ್ತಿದ್ದಾಗ ಇಬ್ಬರು ಗೋಣಿಚೀಲಗಳೊಂದಿಗೆ ನಿಂತಿದ್ದರು.

ಚೀಲದಲ್ಲಿ ಹಳೆಯ ಎರಡು ಪಂಪ್‌, ರಿûಾದ ಹಳೆಯ ಡಿಸ್ಕ್, ಪಾಲಿಥೀನ್‌ ಚೀಲ ಪತ್ತೆಯಾಗಿದೆ. ಪುತ್ತೂರು ಕಡೆಯಿಂದ ಕಳವುಗೈದ ಸೊತ್ತುಗಳೆಂದು ತಿಳಿದುಬಂದಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟೇಶ್ವರ: ವಿವಾಹಿತ ಮಹಿಳೆ ನಾಪತ್ತೆ
ಕುಂದಾಪುರ: ಕೋಟೇಶ್ವರ ಕೆರೆಕಟ್ಟೆ ಕೋಟಿಲಿಂಗೇಶ್ವರ ದೇವಸ್ಥಾನದ ಹತ್ತಿರದ ನಿವಾಸಿ ವೀರ ನರಸಿಂಹ ಅವರ ಪತ್ನಿ ಶ್ವೇತಾ ಎಸ್‌. ನಾಯಕ್‌ (25) ಅವರು ಮಾ.26ರಿಂದ ಸಂಜೆ 6 ಗಂಟೆಗೆ ನಾಪತ್ತೆಯಾಗಿದ್ದಾರೆ.

ಗೋಧಿ ಮೈಬಣ್ಣ,ಸದೃಢ ಶರೀರ,ದುಂಡುಮುಖ ಹಾಗೂ 5.6 ಅಡಿ ಎತ್ತರವಿರುವ ಇವರು ಕೊಂಕಣಿ,ಕನ್ನಡ, ಹಿಂದಿ,ಇಂಗ್ಲಿಷ್‌ ಭಾಷೆ ಅರಿತಿದ್ದಾರೆ.ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇವರ ಬಗ್ಗೆ ಮಾಹಿತಿ ಸಿಕ್ಕಿದವರು ಸ್ಥಳೀಯ ಠಾಣೆಗೆ ತಿಳಿಸಬಹುದು.

ಬೈಕ್‌ ಢಿಕ್ಕಿ : ಪಾದಚಾರಿಗೆ ಗಾಯ
ಸುರತ್ಕಲ್‌: ಹೊಸಬೆಟ್ಟು ಪೆಟ್ರೋಲ್‌ ಪಂಪ್‌ ಬಳಿ ಮಂಗಳವಾರ ರಸ್ತೆ ದಾಟಲು ನಿಂತಿದ್ದ ನಾಗೇಂದ್ರ ಅವರಿಗೆ ಬೈಕ್‌ ಢಿಕ್ಕಿ ಹೊಡೆದು ಕಾಲಿಗೆ ಗಂಭೀರ ಏಟಾಗಿದೆ. ಅವ ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್‌ ಸವಾರನ ಶಿಬು ವಿರುದ್ಧ ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕೇರಳದ ಕಳವು ಆರೋಪಿಗಳು ಮಂಗಳೂರಿನಲ್ಲಿ ಸೆರೆ
ಮಂಗಳೂರು: ಕೇರಳದ ಕೊಯಿಲಾಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕಳವು ಪ್ರಕರಣದ ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಮಂಗಳವಾರ ಬಂಧಿಸಿ, ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಕೊಪ್ಪ ತಾಲೂಕಿನ ಚೌಕಿ ಗ್ರಾಮದ ಅನಿಲ್‌ಕುಮಾರ್‌ (28), ಮಂಗಳೂರು ಬೋಳಿಯಾರ್‌ ನಿವಾಸಿ ವೀರೇಂದ್ರ ಶೆಟ್ಟಿ (46) ಮತ್ತು ಕಸಬಾ ಬೆಂಗರೆ ನಿವಾಸಿ ಅಬ್ದುಲ್‌ ರಹೀಂ ಯಾನೆ ಚಪ್ಪೆ ತಣ್ಣಿ ರಹೀಂ (42) ಬಂಧಿತರು.

ಕೊಯಿಲಾಂಡಿಯ ಮನೆಗಳಿಂದ ಕಳವು ಮಾಡಿದ್ದ 136 ಗ್ರಾಂ ತೂಕದ ಚಿನ್ನಾಭರಣ, ಸೋನಿ ಕಂಪೆನಿಯ ಟಿವಿ ಮತ್ತು ಮಂಗಳೂರಿನ ಕುಲಶೇಖರದ ಮನೆಯಿಂದ ಕದ್ದಿದ್ದ ಒನಿಡಾ ಕಂಪೆನಿಯ ಟಿವಿ ಮತ್ತು ತಾಮ್ರದ ಹಂಡೆ ಸಹಿತ ಒಟ್ಟು 4.40 ಲ. ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ವಿವಿಧ ಪ್ರಕರಣ: ಆರೋಪಿಗಳ ಪೈಕಿ ಅನಿಲ್‌ ಕುಮಾರ್‌ ವಿರುದ್ಧ ಕಾರವಾರ ನಗರ ಪೊಲೀಸ್‌ ಠಾಣೆಯಲ್ಲಿ ಮೂರು, ಉಡುಪಿ ನಗರ ಠಾಣೆಯಲ್ಲಿ ಎರಡು, ಕೋಯಿ ಕ್ಕೋ ಡ್‌ ಮೆಡಿಕಲ್‌ ಕಾಲೇಜು ಪೊಲೀಸ್‌ ಠಾಣೆಯಲ್ಲಿ ಮೂರು ಹಾಗೂ ಕೋಯಿ ಕ್ಕೋಡ್‌ ಠಾಣೆಯಲ್ಲಿ ಒಂದು ಕಳ್ಳತನ ಪ್ರಕರಣ ದಾಖಲಾಗಿದೆ.

ವೀರೇಂದ್ರ ಶೆಟ್ಟಿ ವಿರುದ್ಧ ಕೊಣಾಜೆ ಠಾಣೆಯಲ್ಲಿ ಒಂದು ಕೊಲೆಯತ್ನ ಪ್ರಕರಣ, ಸುರತ್ಕಲ್‌, ಬಂಟ್ವಾಳ ಹಾಗೂ ಮಂಜೇಶ್ವರ ಠಾಣೆಯಲ್ಲಿ ತಲಾ ಒಂದೊಂದು ದರೋಡೆ ಪ್ರಕರಣ ದಾಖಲಾಗಿದೆ.

ಅಬ್ದುಲ್‌ ರಹೀಂ ವಿರುದ್ಧ ಬಂದರು ಠಾಣೆ ಯಲ್ಲಿ ಎರಡು ಕೊಲೆಯತ್ನ ಪ್ರಕರಣ, ಬರ್ಕೆ, ಪಣಂ ಬೂರು, ಕದ್ರಿ, ಕರಾವಳಿ ಕಾವಲುಪಡೆ ಠಾಣೆಗಳಲ್ಲಿ ತಲಾ ಒಂದೊಂದು ಗಾಂಜಾ ಪ್ರಕರಣ ದಾಖಲಾಗಿದೆ. ಈತನ ಮೇಲೆ 2017ನೇ ಸಾಲಿನಲ್ಲಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಇನ್‌ಸ್ಪೆಕ್ಟರ್‌ ಕುಮಾರ್‌ ಆರಾಧ್ಯ,ಎಸ್‌ ಐ ಮಂಜುಳಾ ಎಲ್‌. ಹಾಗೂ ಠಾಣಾ ಸಿಬಂದಿ ಭಾಗವಹಿಸಿದ್ದರು.

ಮಾಣಿ: ಆಲದ ಮರದಲ್ಲಿ ಮತ್ತೆ ಹೊಗೆ
ಮಾಣಿ: ಮಾಣಿ- ಮಡಿಕೇರಿ ರಸ್ತೆಯ ಮಾಣಿ ಹೃದಯ ಭಾಗದಲ್ಲಿರುವ ಆಲದ ಮರ ಹೊಗೆ ಯುಗು ಳುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ.

ಇತ್ತೀಚೆಗೆ ಈ ಆಲದ ಮರದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಮತ್ತು ಅಗ್ನಿಶಾಮಕ ದಳದವರು ನಂದಿಸಿದ್ದರು.

ಮರದ ಮಧ್ಯ ಭಾಗದಲ್ಲಿ ನಿರಂತರವಾಗಿ ಹೊಗೆ ಬರುತ್ತಿದ್ದು, ಪೊಠರೆಯೊಳಗೆ ಬೂದಿ ಕಂಡು ಬರುತ್ತಿದೆ. ಮರ ಒಳಗೊಳಗೆ ಉರಿಯುತ್ತಿದ್ದು, ಯಾವುದೇ ಸಮಯದಲ್ಲೂ ಬೀಳುವ ಭೀತಿ ಎದುರಾಗಿದೆ.

ಮರದ ಅಕ್ಕಪಕ್ಕದಲ್ಲಿ ಸರಕಾರಿ ಆಸ್ಪತ್ರೆ,ಪಶು ವೈದ್ಯಾಲಯ, ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ,ಮೆಸ್ಕಾಂ,ಹಾಲಿನ ಡೈರಿ,ಬ್ಯಾಂಕ್‌, ಮೆಡಿಕಲ್‌,ಅಂಗಡಿಗಳು ಮತ್ತು ಮನೆಗಳಿವೆ.ಆದ್ದರಿಂದ ಅಪಾಯ ಸಂಭ ವಿ ಸುವ ಮೊದಲು ಮರವನ್ನು ತೆರವುಗೊಳಿಸಬೇ ಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೆಮ್ಮಾಡಿ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
ಕುಂದಾಪುರ: ವರದಕ್ಷಿಣೆ ಕಿರುಕುಳ ಪ್ರಕರಣ ಸಂಬಂಧ ವಿಚಾರಣೆಗಾಗಿ ಕುಂದಾಪುರದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್‌ ಆರೋಪಿ ರವಿ ಖಾರ್ವಿಯನ್ನು ಪೊಲೀಸರು ಹೆಮ್ಮಾಡಿಯಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

2014ರಲ್ಲಿ ಈತನ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸು ದಾಖಲಾಗಿದ್ದು, ಆ ಬಳಿಕ ವಿಚಾರಣೆಗೆ ಹಾಜರಾಗಿರಲಿಲ್ಲ. ಆತ ನನ್ನು ಬುಧವಾರ ಕುಂದಾಪುರ ಎಸ್‌ಐ ಹರೀಶ್‌ ಆರ್‌. ಮಾರ್ಗದರ್ಶನದಲ್ಲಿ ಹೆಡ್‌ಕಾನ್‌ಸ್ಟೆಬಲ್‌ಗ‌ಳಾದ ಹರೀಶ್‌, ಜಗನ್ನಾಥ್‌ ನಾಯ್ಕ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next