ಕುಂಬಳೆ: ದುಬಾೖಯಿಂದ ಜೀನ್ಸ್, ಖರ್ಜೂರ, ಸುಗಂಧ ದ್ರವ್ಯದ ಬಾಟಲಿಗಳಲ್ಲಿ ಸುಮಾರು 43 ಲಕ್ಷ ರೂ. ಬೆಲೆ ಬಾಳುವ ಚಿನ್ನ ತುಂಬಿಸಿ ಸಾಗಿಸುತ್ತಿದ್ದ ಆರೋಪದಲ್ಲಿ ಕುಂಬಳೆಯ ಅಬ್ದುಲ್ ಲತೀಫ್ (31) ಮತ್ತು ಓಮಶ್ಶೇರಿಯ ಶರ್ಫುದ್ದೀನ್ (35) ಅವರನ್ನು ಕರಿಪ್ಪೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
Advertisement
ಬೆದರಿಕೆ, ಹಲ್ಲೆ: ಇಬ್ಬರ ಬಂಧನಕುಂಬಳೆ: ಕ್ರಶರ್‌ನಿಂದ ಲಾರಿಯಲ್ಲಿ ಜಲ್ಲಿ ತುಂಬಿ ಸಾಗಿಸುತ್ತಿದ್ದಾಗ ತಡೆದು ನಿಲ್ಲಿಸಿ ಚಾಲಕರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇರಿಸಿದವರನ್ನು ಪ್ರಶ್ನಿಸಿದ ಕೋರೆ ಮಾಲಕನಿಗೆ ಹಲ್ಲೆಗೈದ ಆರೋಪದಲ್ಲಿ ಬದಿಯಡ್ಕ ಪೊಲೀಸರು ಅಹಮ್ಮದ್ ಮತ್ತು ಇಶಾಕ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆ: ಮುಳ್ಳೇರಿಯ ಬಳಿಯ ದೇಲಂಪಾಡಿಯಲ್ಲಿ ಸ್ಕೂಟರ್ ಮತ್ತು ಟೆಂಪೊ ಢಿಕ್ಕಿಯಾಗಿ ಆದೂರು ಸಿಎ ನಗರ ನಿವಾಸಿ, ಖಾದರ್ – ಸಿಮ್ಲಾ ದಂಪತಿಯ ಪುತ್ರ ರೈಸ್ ಅನ್ವರ್ (18) ಅವರು ಸಾವಿಗೀಡಾಗಿದ್ದಾರೆ.ಇವರು ಮುಳ್ಳೇರಿಯದ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಸ್ಕೂಟರಲ್ಲಿ ತೆರಳುತ್ತಿದ್ದಾಗ ಟೆಂಪೊ ಮುಖಾಮುಖಿ ಢಿಕ್ಕಿ ಹೊಡೆದು ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬದಿಯಡ್ಕ: ವರ್ಕ್‌ಶಾಪ್‌ನಿಂದ ಕಳವು
ಕುಂಬಳೆ: ಬದಿಯಡ್ಕ ನೆಕ್ರಾಜೆ ಆರ್ತಿಪ್ಪಳ್ಳದ ಕೊಂಬ್ರಾಜೆ ತಿಮೋತಿ ಕ್ರಾಸ್ತಾ ಅವರ ಬೋಳುಕಟ್ಟೆಯ ವರ್ಕ್‌ಶಾಪ್‌ನಿಂದ ಸುಮಾರು 1 ಲಕ್ಷ ರೂ. ಬೆಲೆಬಾಳುವ ಕಬ್ಬಿಣದ ಉಪಕರಣಗಳನ್ನು ಕಳವು ಮಾಡಲಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಓರ್ವನ ಮೇಲೆ ಶಂಕೆ ಇದ್ದು, ಆತ ಕದ್ದ ವಸ್ತುಗಳನ್ನು ಕಾಸರಗೋಡಿನಲ್ಲಿ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ.