Advertisement

ಮಂಗಳೂರು: ಹೊಟೇಲಿನಿಂದ 1.35 ಲ.ರೂ. ಸೊತ್ತು ಕಳವು

11:55 PM Oct 23, 2022 | Team Udayavani |

ಮಂಗಳೂರು: ದೇರೆಬೈಲ್‌-ಮಾಲೆಮಾರ್‌ ರಸ್ತೆಯ ಹೊಟೇಲೊಂದರಿಂದ ಸೊತ್ತುಗಳನ್ನು ಕಳವು ಮಾಡಲಾಗಿದೆ.

Advertisement

ಹೊಟೇಲ್‌ ಅನ್ನು ಕಳೆದ 20 ದಿನಗಳಿಂದ ಬಂದ್‌ ಮಾಡಲಾಗಿತ್ತು. ಹೊಟೇಲ್‌ ನಡೆಸಿಕೊಂಡಿದ್ದವರು ಅ. 19ರಂದು ಸಂಜೆ ಹೊಟೇಲ್‌ ಅನ್ನು ತೆರೆದು ಸೊತ್ತುಗಳನ್ನು ಪರಿಶೀಲಿಸಿ ಬಾಗಿಲು ಹಾಕಿ ಹೋಗಿದ್ದರು.

ಅ. 21ರಂದು ಬೆಳಗ್ಗೆ ಬಂದು ನೋಡಿದಾಗ ಹೊಟೇಲ್‌ನ ಬೀಗ ಜಖಂಗೊಳಿಸಿ ಬಾಗಿಲು ತೆರೆದು ಹೊಟೇಲ್‌ನಲ್ಲಿದ್ದ 2 ಸ್ಪ್ಲಿಟ್‌ ಎಸಿ ಸೇರಿದಂತೆ ಅಂದಾಜು 1.35 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಕಾವೂರು ಠಾಣೆಗೆ ದೂರು ನೀಡಲಾಗಿದೆ.

ಮಟ್ಕಾ ಜುಗಾರಿ: ಇಬ್ಬರು ವಶಕ್ಕೆ
ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್‌ ಸಿಟಿ ಬಸ್‌ ನಿಲ್ದಾಣದ ಬಳಿ ಮಟ್ಕಾ ಜುಗಾರಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಕಾಸರಗೋಡಿನ ರಾಜೇಶ್‌ (36) ಮತ್ತು ಅಜಯ್‌ (28)ನನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀ ಸರು ಅ. 21ರಂದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆರೋಪಿ ಗಳಿಂದ 9,500 ರೂ. ಸ್ವಾಧೀನಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next