Advertisement

ಮೂಲ್ಕಿ: ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಶಿಕ್ಷೆ ಪ್ರಕಟ

10:50 PM Sep 06, 2022 | Team Udayavani |

ಮೂಲ್ಕಿ: ಕಿನ್ನಿಗೋಳಿ ಮೇರಿಹಿಲ್‌ ಶಾಲೆಯ ಬಸ್‌ ಚಾಲಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಪೋಕ್ಸೊ ಕಾಯ್ದೆಯಡಿ 2019 ಸೆ. 16ರಂದು ದಾಖಲಾಗಿದ್ದ ಕೇಸಿನ ಆರೋಪಿ ಕಿನ್ನಿಗೋಳಿ ಸಮೀಪದ ಹೋಸಕಾವೇರಿಯ ವಿಜಯ ಯಾನೆ ಉಮೇಶ ಎಂಬಾತನಿಗೆ ಜಿಲ್ಲಾ ನ್ಯಾಯಲಯ 5 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಮತ್ತೆ ಮೂರು ತಿಂಗಳು ಸೆರೆಮನೆ ಹಾಗೂ ಮತ್ತೊಂದು ಕಾಯ್ದೆಯಡಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 1,000 ರೂ. ದಂಡ, ತಪ್ಪಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಮಂಗಳೂರಿನ ದ.ಕ. ಜಿಲ್ಲಾ ಫಾಸ್ಟ್‌ ಟ್ರಾಕ್‌ ನ್ಯಾಯಾಲಯ ಪ್ರಕಟಿಸಿ ಮಂಗಳವಾರ ಆದೇಶ ನೀಡಿದೆ.

Advertisement

ಕಿನ್ನಿಗೋಳಿ ಮೇರಿಹಿಲ್‌ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಬಾಲಕಿ ಕಿನ್ನಿಗೋಳಿಯ ಫ್ಲ್ಯಾಟ್‌ ಒಂದರಲ್ಲಿ ಹೆತ್ತವರೊಂದಿಗೆ ವಾಸವಿದ್ದಳು. ಆರೋಪಿ ಈ ಬಾಲಕಿಯನ್ನು ಕಿನ್ನಿಗೋಳಿಯಲ್ಲಿ ಬಸ್‌ನಿಂದ ಇಳಿಸದೇ ಎಲ್ಲ ಮಕ್ಕಳನ್ನು ಇಳಿಸಿದ ಅನಂತರ ಶಿಬರೂರು ರಸ್ತೆಯ ಬಳಿ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ದೂರು ಮೂಲ್ಕಿ ಠಾಣೆಯಲ್ಲಿ ದಾಖಲಾಗಿತ್ತು. ಬಾಲಕಿ ಅಂಗಲವಿಕಲೆಯಾಗಿದ್ದಳು.

ಅಂದಿನ ಮೂಲ್ಕಿ ಇನ್‌ಸ್ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸ್ತುತ ಬಹ್ಮಾವರ ಠಾಣೆಯ ಇನ್‌ಸ್ಪೆಕ್ಟರ್‌ ಅನಂತಪದ್ಮನಾಭ ಅವರು ದೂರು ದಾಖಲಿಸಿಕೊಂಡು ಸಂಪೂರ್ಣ ತನಿಖೆಯನ್ನು ನಡೆಸಿ ಜಿಲ್ಲಾ ಫಾಸ್ಟ್‌ಟ್ರಾಕ್‌ ನ್ಯಾಯಾಲಯದಲ್ಲಿ ಆರೋಪಿಯ ಶಿಕ್ಷೆಗೆ ಕೇಸು ದಾಖಲಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next