Advertisement

ಪಡಿತರ ಅಕ್ಕಿ ಕಳ್ಳ ಸಾಗಾಟ ಮಾಡುತ್ತಿದ್ದ ಲಾರಿ ಢಿಕ್ಕಿಯಾಗಿ ಈಚರ್‌ ಪಲ್ಟಿ

12:21 AM Aug 30, 2022 | Team Udayavani |

ಬೈಂದೂರು: ಪಡಿತರ ಅಕ್ಕಿ ಕಳ್ಳ ಸಾಗಾಟ ಮಾಡುತ್ತಿದ್ದ ಲಾರಿಯು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಈಚರ್‌ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಈಚರ್‌ ಪಲ್ಟಿಯಾದ ಘಟನೆ ಅರೆಹೊಳೆ ಕ್ರಾಸ್‌ ಬಳಿ ಸಂಭವಿಸಿದೆ.

Advertisement

ಭಟ್ಕಳದಿಂದ ಮಂಗಳೂರು ಕಡೆಗೆ ಅಣಬೆ ಸಾಗಿಸುತ್ತಿದ್ದ ಈಚರ್‌ ವಾಹನವು ಪಲ್ಟಿಯಾದ ಪರಿಣಾಮ ಚಾಲಕನ ಕೈಗೆ ಗಾಯಗಳಾಗಿವೆ.

ಅರೆಹೊಳೆಯ ಗ್ರಾಮೀಣ ಪರಿಸರ ದಿಂದ ಅಕ್ಕಿ ಸಂಗ್ರಹಿಸಿ ತಿರುವಿನಲ್ಲಿ ವೇಗವಾಗಿ ಹೆದ್ದಾರಿಗೆ ನುಗ್ಗಿದಾಗ ಈ ಅಪಘಾತ ಸಂಭವಿಸಿದೆ.

ಲಾರಿಯನ್ನು ಪೊಲೀಸರು ಠಾಣೆಗೆ ಕೊಂಡೊಯ್ದಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರಕ್ಕೆರಡು ಬಾರಿ
ಅಕ್ರಮ ಅಕ್ಕಿ ಸಾಗಾಟ
ಬೈಂದೂರು ಭಾಗದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ನಿರಂತರವಾಗಿ ನಡೆಯುತ್ತಿದೆ. ಅರೆಹೊಳೆ ಭಾಗದಲ್ಲಿ ಪ್ರತೀ ವಾರಕ್ಕೆ ಎರಡು ಬಾರಿ ಅಕ್ಕಿ ತುಂಬಿದ ವಾಹನ ಸಾಗುತ್ತದೆ. ಅತೀ ವೇಗವಾಗಿ ಸಾಗುವ ಇವರ ವಿರುದ್ಧ ಹಲವು ಬಾರಿ ಇಲಾಖೆಗೆ ದೂರು ನೀಡಿ ದ್ದರೂ ಸಮರ್ಪಕ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು.

Advertisement
Advertisement

Udayavani is now on Telegram. Click here to join our channel and stay updated with the latest news.

Next