Advertisement

ಮಂಗಳೂರು: ಮಾರಿಗುಡಿ ದೇವಸ್ಥಾನದ ಅರ್ಚಕರ ಪತ್ನಿ ನಾಪತ್ತೆ

10:25 PM Aug 27, 2022 | Team Udayavani |

ಮಂಗಳೂರು: ಮೂಲತಃ ಭಟ್ಕಳ ತಾಲೂಕಿನ ನಿವಾಸಿಯಾಗಿದ್ದು, ಕಳೆದ 12 ವರ್ಷಗಳಿಂದ ನಗರದ ಮಾರಿಗುಡಿ ದೇವಸ್ಥಾನದಲ್ಲಿ ಅರ್ಚಕರಾಗಿರುವ ವ್ಯಕ್ತಿಯೋರ್ವರ ಪತ್ನಿ ಪ್ರೇಮಾ (20) ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ಪತಿ ಆ. 24ರಂದು ಸಂಜೆ 7 ಗಂಟೆಗೆ ಪೂಜೆ ಮುಗಿಸಿಕೊಂಡು ಮನೆಗೆ ಹೋದಾಗ ಪತ್ನಿ ಇರಲಿಲ್ಲ ಎಂದು ಮಂಗಳೂರು ದಕ್ಷಿಣ ಠಾಣಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಅವರು ಸುಮಾರು 5. 5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಬಿಳಿ ಬಣ್ಣದ ಪ್ಯಾಂಟ್‌ ಮತ್ತು ಕಪ್ಪು ಬಣ್ಣದ ಟೀ ಶರ್ಟ್‌ ಧರಿಸಿದ್ದರು. ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತರೆ ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next