Advertisement

ಮಂಗಳೂರಿನಲ್ಲಿ ಗ್ಯಾಂಗ್‌ವಾರ್‌ ;2 ಸಾವು, ಮೂವರು ಗಂಭೀರ

01:02 AM Sep 26, 2017 | Team Udayavani |

ಮಂಗಳೂರು: ಫ‌ರಂಗಿಪೇಟೆ ಮುಖ್ಯರಸ್ತೆಯಲ್ಲಿ ಸೋಮವಾರ ರಾತ್ರಿ ಗ್ಯಾಂಗ್‌ವಾರ್‌ ನಡೆದಿದ್ದು, ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿ ಇಬ್ಬರನ್ನು ಕೊಲೆಗೈದಿದೆ. ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಹತ್ಯೆಗೀಡಾದವರು ರೌಡಿಶೀಟರ್‌ಗಳಾದ  ಫ‌ಯಾಜ್‌ ಮತ್ತು ಝಿಯಾ ಎಂದು ಗುರುತಿಸಲಾಗಿದೆ. 

Advertisement

ರಾತ್ರಿ 11.20ರ ವೇಳೆಗೆ ಘಟನೆ ನಡೆದಿದ್ದು, ಫ‌ಝಲ್‌, ಮುಸ್ತಾಕ್‌, ಹಮೀದ್‌ ಗಾಯಗೊಂಡವರು. ಕಣ್ಣೂರಿನಿಂದ ಬಂದ ಐದು ಮಂದಿ ರೌಡಿಶೀಟರ್‌ಗಳು ಈ ಕೃತ್ಯವನ್ನು ಎಸಗಿದ್ದಾರೆ.ದುಷ್ಕರ್ಮಿಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ಗುರುತಿಸಲಾಗಿದೆ.

ಇದು ಗ್ಯಾಂಗ್‌ವಾರ್‌ ಎಂದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.ಪೊಲೀಸರ ತಂಡಗಳು ಆರೋಪಿಗಳಿಗಾಗಿ ಬಲೆ ಬೀಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next